ಪುಸ್ತಕವನ್ನು ಪ್ರೀತಿಸಿದರೆ ನಮ್ಮಂದಿಗೆ ಬದುಕುತ್ತದೆ: ಡಾ.ಮಾಧವಿ ಭಂಡಾರಿ

Update: 2021-11-20 14:31 GMT

ಉಡುಪಿ, ನ.20: ಸಾರ್ವಜನಿಕ ಗ್ರಂಥಾಲಯ ಇಲಾಖೆ ಹಾಗೂ ನಗರ ಕೇಂದ್ರ ಗ್ರಂಥಾಲಯ ಆಶ್ರಯದಲ್ಲಿ ರಾಷ್ಟ್ರೀಯ ಗ್ರಂಥಾಲಯ ಸಪ್ತಾಹ -2021 ಇದರ ಸಮಾರೋಪ ಸಮಾರಂಭವು ಉಡುಪಿಯ ಕೇಂದ್ರ ಗ್ರಂಥಾಲಯದಲ್ಲಿ ಶುಕ್ರವಾರ ನಡೆಯಿತು.

ಕಾರ್ಯಕ್ರಮವನ್ನು ಉದ್ಘಾಟಿಸಿದ ನಿವೃತ್ತ ಪ್ರಾಂಶುಪಾಲೆ ಹಾಗೂ ಸಾಹಿತಿ ಡಾ.ಮಾಧವಿ ಭಂಡಾರಿ ಮಾತನಾಡಿ, ಎಲ್ಲರೂ ಪುಸ್ತಕವನ್ನು ಪ್ರೀತಿಸವ ಅಭ್ಯಾಸ ಬೆಳಸಿಕೊಳ್ಳಬೇಕು. ಆಗ ನಮ್ಮೊಂದೊಂದಿಗೆ ಪುಸ್ತಕ ಬದುಕುತ್ತದೆ. ನಮ್ಮ ಜ್ಞಾನ ವೃದ್ಧಿಗೆ ಪುಸ್ತಕ ಪೂರಕವಾಗಲಿದೆ ಎಂದು ಹೇಳಿದರು.

ಉಡುಪಿ ಪೂರ್ಣಪ್ರಜ್ಞ ಕಾಲೇಜಿನ ಉಪನ್ಯಾಸಕ ಡಾ.ಮಂಜುನಾಥ ಕರಬ ಮಾತನಾಡಿದರು. ಅಜ್ಜರಕಾಡು ಜಿ.ಶಂಕರ ಮಹಿಳಾ ಕಾಲೇಜಿನ ಪ್ರಾಂಶುಪಾಲ ಡಾ.ಭಾಸ್ಕರ ಶೆಟ್ಟಿ ಅಧ್ಯಕ್ಷತೆ ವಹಿಸಿದ್ದರು. ಈ ಸಂದರ್ಭದಲ್ಲಿ ವಿವಿಧ ಸ್ಫರ್ಧೆಗಳಲ್ಲಿ ಭಾಗವಹಿಸಿ ವಿಜೇತರಾದ ವಿದ್ಯಾರ್ಥಿಗಳಿಗೆ ಬಹುಮಾನ ವಿತರಿಸಲಾಯಿತು. ಉಡುಪಿ ನಗರ ಕೇಂದ್ರ ಗ್ರಂಥಾಲಯ ಮುಖ್ಯಾಧಿಕಾರಿ ಜಯಶ್ರೀ ಸ್ವಾಗತಿಸಿ ದರು. ಪ್ರೇಮ ಕಾರ್ಯಕ್ರಮ ನಿರೂಪಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News