'ರೇಸ್ ಅಕ್ರಾಸ್ ಅಮೆರಿಕ'ಗೆ ಅರ್ಹತೆ ಪಡೆದ ಮಂಗಳೂರಿನ ಜೋಸೆಫ್ ಪಿರೇರ

Update: 2021-11-22 10:35 GMT

ಮಂಗಳೂರು, ನ. 21: ದೃಢ ಸಂಕಲ್ಪ, ಉತ್ಸಾಹಕ್ಕೆ ವಯೋಮಾನದ ಪರಿಮಿತಿ ಇಲ್ಲ ಎಂಬುದಕ್ಕೆ ಮಂಗಳೂರಿನ ಸೈಕಲ್ ಸವಾರ ಜೋಸೆಫ್ ಪಿರೇರ ಮತ್ತೊಮ್ಮೆ ಸಾಕ್ಷಿಯಾಗಿದ್ದಾರೆ. 62 ಹರೆಯದಲ್ಲೂ ಯುವಕರಂತೆ ಸೈಕಲ್ ಪೆಡಲ್ ತುಳಿಯುವ ಜೋಸೆಫ್ ಪಿರೇರ ಇದೀಗ ಅಮೆರಿಕದಲ್ಲಿ ನಡೆಯಲಿರುವ ಸೈಕರ್ ರೇಸ್‌ನಲ್ಲಿ ಭಾಗವಹಿಸುವ ಅರ್ಹತೆ ಪಡೆದಿದ್ದಾರೆ.

ಪೂನಾದಿಂದ ಗೋವಾವರೆಗಿನ 643 ಕಿ.ಮೀ.ಗಳ ಡೆಕ್ಕನ್ ಕ್ಲಿಫ್ ಹ್ಯಾಂಗರ್ ಸೈಕಲ್ ರೇಸ್‌ನಲ್ಲಿ ಭಾಗವಹಿಸಿ ವಿಜಯಶಾಲಿಯಾಗಿ ಈ ಅರ್ಹತೆ ಪಡೆದಿರುವ ಮಂಗಳೂರಿನ ಪ್ರಥಮ ವ್ಯಕ್ತಿ ಎಂಬ ಹೆಗ್ಗಳಿಕೆಗೂ ಇವರು ಪಾತ್ರರಾಗಿದ್ದಾರೆ.

ಪುಣೆಯ ಸುಂದರವಾದ ಗುಡ್ಡಗಾಡು ನಗರಿಂದ ಪ್ರಾರಂಭಿಸಿ ಈ 643 ಕಿ.ಮೀ. ಸೈಕಲ್ ರೇಸ್ ಸಾಹಸಮಯ ಮತ್ತು ಸವಾಲಿನ ಸವಾರಿಯಾಗಿದೆ. ಜೋಸೆಫ್ ಪಿರೇರ ಮತ್ತು ಅವರ ತಂಡ 33 ಗಂಟೆ 45 ನಿಮಿಷಗಳಲ್ಲಿ ಈ ಸಾಹಸಮಯ ಸೈಕಲ್ ರೇಸನ್ನು ಪೂರ್ಣಗೊಳಿಸಿದೆ. ಡೆಕ್ಕನ್ ಕ್ಲಿಫ್ ಗ್ಯಾಂಗರ್ ಓಟವನ್ನು ಪೂರ್ಣಗೊಳಿಸಿದ ನಂತರ, ಜೋಸೆಫ್ ಪಿರೇರ ಅವರು ಸೋಲೋ ರೇಸ್ ಪೂರ್ಣಗೊಳಿಸಿದ ಮೊದಲ ಮಂಗಳೂರಿನವರಾಗಿದ್ದು, ಅವರ ವಯಸ್ಸಿಗೆ ಸರಿಸಾಟಿಯಿಲ್ಲದ ರೇಸ್ ಅಕ್ರಾಸ್ ಅಮೆರಿಕಗೆ ಅರ್ಹತೆ ಪಡೆದಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News