ಮನುವಾದಿಗಳಿಂದ ಅಭಿವ್ಯಕ್ತಿ ಸ್ವಾತಂತ್ರ ಕಸಿದುಕೊಳ್ಳಲು ಷಡ್ಯಂತರ: ಜಯನ್ ಮಲ್ಪೆ

Update: 2021-11-22 11:37 GMT

ಉಡುಪಿ, ನ.22: ದೇಶದಲ್ಲಿ ಸಂವಿಧಾನ ಶಿಲ್ಪೆ ಡಾ.ಬಿ.ಆರ್.ಅಂಬೇಡ್ಕರ್ ಒಪ್ಪಿಕೊಂಡ ಸಂವಿದಾನ ಜಾರಿಯಲ್ಲಿರುವಾಗ ಆ ಸಂವಿಧಾನಕ್ಕೆ ಚ್ಯುತಿ ತರುವ, ಅಭಿವ್ಯಕ್ತಿ ಸ್ವಾತಂತ್ರವನ್ನು ಕಸಿದುಕೊಳ್ಳುವ ಹಾಗೂ ಪ್ರಜಾಪ್ರಭುತ್ವದ ಹಕ್ಕುಗಳನ್ನು ಧಮನ ಮಾಡುವ ಘೋರವಾದ ಕೃತ್ಯವನ್ನು ಮನುವಾದಿಗಳು ಮಾಡುತ್ತಿದ್ದಾರೆ. ಇದು ಬಹಳ ಅಪಾಯಕಾರಿಯಾದ ಬೆಳವಣಿಗೆಯಾಗಿದೆ ಎಂದು ಜನಪರ ಹೋರಾಟಗಾರ ಹಾಗೂ ಚಿಂತಕ ಜಯನ್ ಮಲ್ಪೆ ಆರೋಪಿಸಿದ್ದಾರೆ.

ಹಂಸಲೇಖ- ಪೇಜಾವರ ಪ್ರಕರಣದಲ್ಲಿ ದಲಿತ ಸಮುದಾಯವನ್ನು ಅವಮಾನಿಸುತ್ತಿರುವ ಪ್ರಜಾಪ್ರಭುತ್ವ ವಿರೋಧಿ ಮನುವಾದಿ ಶಕ್ತಿಗಳ ವಿರುದ್ಧ ಕರ್ನಾಟಕ ರಾಜ್ಯ ದಲಿತ ಸಂಘರ್ಷ ಸಮಿತಿ ಉಡುಪಿ ಜಿಲ್ಲಾ ಸಮಿತಿಯ ನೇತೃತ್ವದಲ್ಲಿ ಸೋಮವಾರ ಅಜ್ಜರಕಾಡು ಹುತಾತ್ಮ ಸ್ಮಾರಕದ ಎದುರು ಹಮ್ಮಿ ಕೊಳ್ಳಲಾದ ಪ್ರತಿಭಟನೆಯನ್ನುದ್ದೇಶಿಸಿ ಅವರು ಮಾತನಾಡುತಿದ್ದರು.

ಬಹಳ ವರ್ಷಗಳಿಂದ ಮನುವಾದಿಗಳು ಷಡ್ಯಂತರಗಳನ್ನು ನಡೆಸಿ, ದಲಿತ ಹಕ್ಕುಗಳನ್ನು ನಿಧಾನವಾಗಿ ನಾಶ ಮಾಡುವ ಕೃತ್ಯ ಎಸಗುತ್ತಿದ್ದಾರೆ. ಹಲವು ಮಂದಿಯನ್ನು ಬಲಿ ತೆಗೆದುಕೊಂಡ ಈ ಮನುವಾದಿಗಳು, ಈ ಮೊದಲು ನಟ ಚೇತನ್, ಈಗ ಹಂಸಲೇಖರನ್ನು ವ್ಯವಸ್ಥಿತವಾಗಿ ಬಾಯಿ ಮುಚ್ಚಿಸುವ ಮೂಲಕ ಅವರ ಹಕ್ಕುಗಳನ್ನು ಕಸಿದುಕೊಳ್ಳುತ್ತಿದ್ದಾರೆ ಎಂದರು.

ಪ್ರಜಾಪ್ರಭುತ್ವ ವ್ಯವಸ್ಥೆ ಜಾರಿ ಬರುವ ಮೊದಲು ಅಂದರೆ ಋಗ್ವೇದ ಕಾಲದಲ್ಲಿ ಬ್ರಾಹ್ಮಣರು ಗೋ ಮಾಂಸ ತಿನ್ನುತ್ತಿದ್ದರು ಎಂಬ ಉಲ್ಲೇಖಗಳು ಹಲವು ಕಡೆ ಗಳಲ್ಲಿ ಕಂಡು ಬರುತ್ತವೆ. ಆದರೂ ಬ್ರಾಹ್ಮಣರು, ದಲಿತರು ಸಹಿತ ಇನ್ನಿತರ ವರ್ಗದವರನ್ನು ಗೋಮಾಂಸ ತಿನ್ನುವ ವಿಚಾರದಲ್ಲಿ ನಿಂದಿಸುತ್ತಿದ್ದಾರೆ. ಈ ಎಲ್ಲ ಷಡ್ಯಂತರಗಳ ವಿರುದ್ಧ ಎಚ್ಚೆತ್ತುಕೊಳ್ಳೇಕಾಗಿದೆ ಎಂದು ಅವರು ಹೇಳಿದರು.

ಸಂವಿಧಾನದ ಹಕ್ಕುಗಳನ್ನು ಮೊಟಕುಗೊಳಿಸುತ್ತಿರುವುದರ ವಿರುದ್ಧ ಎಲ್ಲರು ಒಂದಾಗಿ ಬುದ್ದ, ಬಸವ, ಅಂಬೇಡ್ಕರ ಸಿದ್ಧಾಂತ ಇಟ್ಟುಕೊಂಡು ಹೋರಾಟ ಮಾಡಬೇಕಾಗಿದೆ. ಇದು ಪ್ರಜಾಪ್ರಭುತ್ವದ ಉಳಿವಿಗಾಗಿ ಮತ್ತು ದಲಿತರ ರಕ್ಷಣೆ ಗಾಗಿ ಮಾಡುವ ಹೋರಾಟ ಆಗಿದೆ. ಈ ಮೂಲಕ ನಾವು ಹಂಸಲೇಖರನ್ನು ಬೆಂಬಲಿಸುತ್ತಿದ್ದೇವೆ ಎಂದು ಅವರು ತಿಳಿಸಿದರು.

ಪ್ರತಿಭಟನೆಯಲ್ಲಿ ದಸಂಸ ಮುಖಂಡರಾದ ಮಂಜುನಾಥ್ ಗಿಳಿಯಾರು, ವಾಸುದೇವ ಮುದೂರು, ಗಣೇಶ್ ನೆರ್ಗಿ, ರಾಜು ಬೆಟ್ಟಿನಮನೆ, ಅಂಬೇಡ್ಕರ್ ಯುವ ಸೇನೆ ಜಿಲ್ಲಾಧ್ಯಕ್ಷ ಹರೀಶ್ ಸಾಲ್ಯಾನ್, ಯತೀಶ್ ಕರ್ಕೇರ, ನರಸಿಂಹ ಹಳಗೇರಿ, ಲೋಕೇಶ್ ಪಡುಬಿದ್ರೆ, ಕೃಷ್ಣ ಸುವರ್ಣ, ಗಣೇಶ್ ನೆಲ್ಲಿಕಟ್ಟೆ ಮೊದ ಲಾದವರು ಉಪಸ್ಥಿತರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News