ಮಂಗಳೂರು: 133 ಕಾನ್‌ಸ್ಟೆಬಲ್‌ಗಳು ಹೆಡ್ ಕಾನ್‌ಸ್ಟೆಬಲ್‌ಗಳಾಗಿ ಭಡ್ತಿ

Update: 2021-11-27 12:42 GMT

ಮಂಗಳೂರು, ನ. 27: ಮಂಗಳೂರು ಪೊಲೀಸ್ ಕಮಿಷನರೇಟ್‌ನಲ್ಲಿ 133 ಮಂದಿ ಕಾನ್‌ಸ್ಟೆಬಲ್‌ಗಳು ಇಂದು ಹೆಡ್ ಕಾನ್‌ಸ್ಟೆಬಲ್‌ಗಳಾಗಿ ಭಡ್ತಿ ಪಡೆದರು. ಪೊಲೀಸ್ ಕಮಿಷನರೇಟ್ ಕಚೇರಿ ಎದುರು ಪೊಲೀಸ್ ಆಯುಕ್ತ ಎನ್. ಶಶಿಕುಮಾರ್ ಹಾಗೂ ಇತರ ಹಿರಿಯ ಅಧಿಕಾರಿಗಳು ಹೆಡ್ ಕಾನ್‌ಸ್ಟೆಬಲ್ ಬ್ಯಾಡ್ಜ್ ನೀಡುವ ಮೂಲಕ ಈ ಪ್ರಕ್ರಿಯೆ ನಡೆಸಿದರು.

ಮಂಗಳೂರು ಕಮಿಷನರೇಟ್ ಅಸ್ತಿತ್ವಕ್ಕೆ ಬಂದ 11 ವರ್ಷಗಳ ಅವಧಿಯಲ್ಲಿ ಕೇವಲ 5 ವರ್ಷ 10 ದಿನಗಳ ಅವಧಿಯಲ್ಲೇ ಈ ರೀತಿಯಾಗಿ ಇದೇ ಮೊದಲ ಬಾರಿಗೆ ಭಡ್ತಿಯನ್ನು ನೀಡಲಾಯಿತು. ದ.ಕ. ಜಿಲ್ಲೆಯಲ್ಲಿ ಕಡಿಮೆ ಸಂಖ್ಯೆಯಲ್ಲಿ ಪೊಲೀಸ್ ಇಲಾಖೆಗೆ ಸೇರ್ಪಡೆಯಾಗುತ್ತಾರೆಂಬ ಅಪವಾದಕ್ಕೆ ಪ್ರತಿಯಾಗಿ ಈ ಪ್ರಕ್ರಿಯೆ ನಡೆದಿದ್ದು, ಇದು ಇನ್ನಷ್ಟು ಮಂದಿ ಪೊಲೀಸ್ ಇಲಾಖೆಗೆ ಸೇರಲು ಪ್ರೋತ್ಸಾಹ ನೀಡಲಿದೆ ಎಂದು ಈ ಸಂದರ್ಭ ಪೊಲೀಸ್ ಆಯುಕ್ತ ಎನ್. ಶಶಿಕುಮಾರ್ ಹೇಳಿದರು.

ಕಳೆದ 10 ವರ್ಷಗಳ ಅವಧಿಯಲ್ಲಿ 1400ಕ್ಕೂ ಅಧಿಕ ಮಂದಿಯ ನೇಮಕಾತಿ ನಡೆದಿದ್ದು, ಇದರಲ್ಲಿ ದ.ಕ. ಜಿಲ್ಲೆಯವರು ಕೇವಲ 68 ಮಂದಿ ಮಾತ್ರ ಎಂಬುದು ಬೇಸರದ ಸಂಗತಿ. ಸ್ಥಳೀಯ ಭಾಷೆ ಹೊಂದಿರುವ ಸಿಬ್ಬಂದಿ ಅಧಿಕಾರಿಗಳು ಇಲಾಖೆಯಲ್ಲಿದ್ದರೆ ಕಾರ್ಯಾಚರಣೆಗೆ ಉತ್ತಮವಾಗಿರುತ್ತದೆ. ಹಾಗಾಗಿ ಕಡಿಮೆ ಅವಧಿಯಲ್ಲಿಯೂ ಭಡ್ತಿ ಸಿಗಲು ಸಾಧ್ಯ ಎಂಬುದನ್ನು ತಿಳಿಸುವ ಪ್ರಯತ್ನ ಕೂಡಾ ಇದಾಗಿದೆ ಎಂದು ಅವರು ಹೇಳಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News