ಡಿ.11ರಿಂದ 42ನೆ ರಾಜ್ಯಮಟ್ಟದ ಕನ್ನಡ ನಾಟಕ ಸ್ಪರ್ಧೆ ಉದ್ಘಾಟನೆ

Update: 2021-12-09 14:00 GMT

ಉಡುಪಿ, ಡಿ.9: ಉಡುಪಿ ರಂಗಭೂಮಿ ಆಶ್ರಯದಲ್ಲಿ 42ನೇ ರಾಜ್ಯಮಟ್ಟದ ಕನ್ನಡ ನಾಟಕ ಸ್ಪರ್ಧೆಯನ್ನು ಡಿ.11ರಿಂದ ಡಿ.20ರವರೆಗೆ ಪ್ರತಿದಿನ ಸಂಜೆ 6.30ಕ್ಕೆ ಉಡುಪಿ ಎಂಜಿಎಂ ಕಾಲೇಜಿನ ನೂತನ ರವೀಂದ್ರ ಮಂಟಪದಲ್ಲಿ ಆಯೋಜಿಸ ಲಾಗಿದೆ ಎಂದು ರಂಗಭೂಮಿ ಅಧ್ಯಕ್ಷ ತಲ್ಲೂರು ಶಿವರಾಮ ಶೆಟ್ಟಿ ತಿಳಿಸಿದ್ದಾರೆ.

ಉಡುಪಿಯಲ್ಲಿಂದು ಕರೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಡಿ.11ರಂದು ಸಂಜೆ 5.45ಕ್ಕೆ ಸ್ಪರ್ಧೆ ಯನ್ನು ಮಾಜಿ ಸಚಿವ ಪ್ರಮೋದ್ ಮಧ್ವ ರಾಜ್ ಉದ್ಘಾಟಿಸಲಿರುವರು. ಸ್ಪರ್ಧೆಯಲ್ಲಿ ಬೆಂಗಳೂರಿನ 3, ಉಡುಪಿಯ 2, ಮೈಸೂರಿನ 2, ಧಾವರಾಡದ 1, ಶಿವಮೊಗ್ಗದ 1 ಹಾಗೂ ಮಂಗಳೂರಿನ ಒಂದು ತಂಡಗಳು ಭಾಗವಹಿಸುತ್ತಿವೆ ಎಂದರು.

ಸ್ಪರ್ಧೆಯ ವಿಜೇತರಿಗೆ ಪ್ರಥಮ ಬಹುಮಾನ 35ಸಾವಿರ ರೂ., ದ್ವಿತೀಯ 25ಸಾವಿರ ರೂ., ತೃತೀಯ 15ಸಾವಿರ ರೂ. ಮತ್ತು ಶ್ರೇಷ್ಠ ನಿರ್ದೇಶನ, ನಟ, ನಟಿ, ಪ್ರಸಾದನ, ರಂಗಪರಿಕರ, ಸಂಗೀತ, ಬೆಳಕು, ಹಾಸ್ಯನಟ, ಬಾಲನಟ ವಿಭಾಗಗಳಿಗೆ ನಗದು ಸಹಿತ ಪ್ರಶಸ್ತಿ ನೀಡಲಾಗುವುದು ಎಂದು ಅವರು ಮಾಹಿತಿ ನೀಡಿದರು.

ಡಿ.11ರಂದು ಬೆಂಗಳೂರು ಅಭಿನಯ ತರಂಗ ತಂಡದಿಂದ ಕೋರ್ಟ್ ಮಾರ್ಷಲ್, 12ರಂದು ಸಮುದಾಯ ಧಾರವಾಡ ತಂಡದಿಂದ ಬುದ್ಧ ಪ್ರಬುದ್ಧ, 13ರಂದು ಮೈಸೂರು ನಾಲ್ವಡಿ ಸೋಶಿಯಲ್ ಕಲ್ಟರಲ್ ಆ್ಯಂಡ್ ಎಜುಕೇಶನಲ್ ಟ್ರಸ್ಟ್‌ನಿಂದ ಸಂಕ್ರಾತಿ, 14ರಂದು ಬೈಂದೂರು ಲಾವಣ್ಯ ತಂಡ ದಿಂದ ಶ್ರೀಕೃಷ್ಣ ಸಂಧಾನ, 15ರಂದು ಬೆಂಗಳೂರು ಬ್ಯಾಕ್ ಸ್ಟೇಜ್ ತಂಡದಿಂದ ಶ್ಮಶಾನ ಕುರುಕ್ಷೇತ್ರಂ, 16ರಂದು ಮಂಗಳೂರು ರಂಗ ಸಂಗಾತಿ ಸಾಂಸ್ಕೃತಿಕ ಪ್ರತಿಷ್ಠಾನ ತಂಡದಿಂದ ದಾಟ್ಸ್ ಆಲ್ ಯುವರ್ ಆನರ್, 17ರಂದು ಮೈಸೂರು ರಂಗ ಸ್ಮತಿ ತಂಡದಿಂದ ಒಂದು ಬೊಗಸೆ ನೀರು, 18ರಂದು ಶಿವಮೊಗ್ಗ ಮಲೆನಾಡು ಕಲಾ ತಂಡದಿಂದ ಮಾತೆ ಮಂಡೋದರಿ,19ರಂದು ಸಂಚಯ ಬೆಂಗಳೂರು ತಂಡದಿಂದ ಕಾಮ ರೂಪಿಗಳ್, 20ರಂದು ಸುಮನಸಾ ಕೊಡವೂರು ತಂಡದಿಂದ ವಾಹ್‌ತಾಜ್ ನಾಟಕ ಪ್ರದರ್ಶನಗೊಳ್ಳಲಿದೆ.

ಸುದ್ದಿಗೋಷ್ಠಿಯಲ್ಲಿ ರಂಗಭೂಮಿ ಪ್ರಧಾನ ಕಾರ್ಯದರ್ಶಿ ಪ್ರದೀಪ್ ಚಂದ್ರ ಕುತ್ಪಾಡಿ, ಉಪಾಧ್ಯಕ್ಷ ಭಾಸ್ಕ್ ರಾವ್ ಕಿದಿಯೂರು ಉಪಸ್ಥಿತರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News