ಎಡಿಲ್‌ಗಿವ್ ಹುರೂನ್ ಇಂಡಿಯಾ ಪಟ್ಟಿಯಲ್ಲಿ ಡಾ. ರಂಜನ್ ಆರ್.ಪೈ

Update: 2021-12-09 16:05 GMT

ಉಡುಪಿ, ಡಿ.9: ಮಣಿಪಾಲ ಅಕಾಡೆಮಿ ಆಫ್ ಹೈಯರ್ ಎಜ್ಯುಕೇಷನ್‌ನ ಅಧ್ಯಕ್ಷ ಹಾಗೂ ಮಣಿಪಾಲ ಎಜ್ಯುಕೇಷನ್ ಎಂಡ್ ಮೆಡಿಕಲ್ ಗ್ರೂಪ್ (ಎಂಇಎಂಜಿ)ಯ ಚಯರ್‌ಮೆನ್ ಡಾ.ರಂಜನ್ ಆರ್. ಪೈ ಅವರು 2021ನೇ ಸಾಲಿನ ಪ್ರತಿಷ್ಠಿತ ಎಂಟನೇ ವಾರ್ಷಿಕ ಎಡಿಲ್‌ಗಿವ್ ಹುರೂನ್ ಇಂಡಿಯಾ ಲೋಕಹಿತೈಷಿ ಪಟ್ಟಿಯಲ್ಲಿ ಸ್ಥಾನ ಪಡೆದಿದ್ದಾರೆ.

ತಮ್ಮ ಸಾರ್ವಜನಿಕ ಬದುಕಿನ ಮೂಲಕ ದೇಶದ ಅಭಿವೃದ್ಧಿಗೆ ವಿಶೇಷ ಕೊಡುಗೆ ನೀಡಿದ ವ್ಯಕ್ತಿಗಳು ಈ ಪಟ್ಟಿಯಲ್ಲಿ ಸ್ಥಾನ ಪಡೆಯುತ್ತಾರೆ. ಈ ವರದಿಯನ್ನು ಎಡಿಲ್‌ಗಿವ್ ಫೌಂಡೇಷನ್, ಹುರೂನ್ ಇಂಡಿಯಾ ಸಹಯೋಗದೊಂದಿಗೆ ತಯಾರಿಸುತ್ತದೆ.

48ರ ಹರೆಯದ ಡಾ.ಪೈ, ಈ ಪಟ್ಟಿಯಲ್ಲಿ ಸ್ಥಾನ ಪಡೆದ ಅತ್ಯಂತ ಕಿರಿಯ ಭಾರತೀಯರಾಗಿದ್ದಾರೆ. 2021ರ ಸಾಲಿನಲ್ಲಿ ಅವರು ಐದು ಕೋಟಿ ರೂ.ಗಳಿಗೂ ಅಧಿಕ ಮೊತ್ತವನ್ನು ಜನಕಲ್ಯಾಣ ಕಾರ್ಯಗಳಿಗೆ ಬಳಸುವ ಮೂಲಕ ಈ ಪಟ್ಟಿಗೆ ಸೇರ್ಪಡೆಗೊಂಡಿದ್ದಾರೆ. ಶಿಕ್ಷಣ ಕ್ಷೇತ್ರಕ್ಕೆ ಪ್ರಮುಖವಾಗಿ ಸಹಾಯ ಮಾಡುತ್ತಿರುವ ಡಾ.ಪೈ ಒಟ್ಟಾರೆಯಾಗಿ 17 ಕೋಟಿ ರೂ.ಗಳ ಕೊಡುಗೆಯನ್ನು ಜನಪರ ಕಾರ್ಯಗಳಿಗೆ ಇದುವರೆಗೆ ನೀಡಿದ್ದಾರೆ ಎಂದು ಮಾಹೆ ಪ್ರಕಟಣೆ ತಿಳಿಸಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News