ಡಿ.12: ಪೊಂಪೈ ಮಾತೆಯ ಪುಣ್ಯಕ್ಷೇತ್ರದಲ್ಲಿ ವಾರ್ಷಿಕ ಕಾರ್ಯಕ್ರಮ

Update: 2021-12-09 16:33 GMT

ಮಂಗಳೂರು, ಡಿ.9: ನಗರದ ಉರ್ವ ಚರ್ಚ್‌ನಲ್ಲಿರುವ ಪೊಂಪೈ ಮಾತೆಯ ಪುಣ್ಯಕ್ಷೇತ್ರದ ವಾರ್ಷಿಕ ಮಹೋತ್ಸವವು ಡಿ.12ರಂದು ನಡೆಯಲಿದೆ. ಅಂದು ಸಂಜೆ 5:30ಕ್ಕೆ ಮಂಗಳೂರು ಕೆಥೋಲಿಕ್‌ ಕ್ರೈಸ್ತಧರ್ಮ ಪ್ರಾಂತದ ಧರ್ಮಾಧ್ಯಕ್ಷ ಡಾ.ಪೀಟರ್ ಪಾವ್ಲ್ ಸಲ್ಡಾನ್ಹ ಕೃತಜ್ಞತಾ ಪೂಜೆ ನೆರವೇರಿಸಲಿದ್ದಾರೆ ಎಂದು ಚರ್ಚ್‌ನ ಧರ್ಮಗುರು ಫಾ. ಬೆಂಜಮಿನ್ ಪಿಂಟೊ ಹೇಳಿದ್ದಾರೆ.

ಉರ್ವ ಚರ್ಚ್‌ನಲ್ಲಿ ಗುರುವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು ಡಿ.12ರ ಬೆಳಗ್ಗೆ 7 ಮತ್ತು 8:15 ಹಾಗೂ 10:30ಕ್ಕೆ ಪ್ರಾರ್ಥನೆ ಮತ್ತು ಕೃತಜ್ಞತಾ ಪೂಜೆ ನಡೆಯಲಿವೆ. 10.30ಕ್ಕೆ ಅನಾರೋಗ್ಯದಿಂದ ಬಳಲು ವವರಿಗೆ ಚರ್ಚ್‌ನಲ್ಲಿ ವಿಶೇಷ ಪೂಜೆ ನಡೆಯಲಿದೆ ಎಂದರು.

ಪ್ರಭು ಯೇಸುವಿನ ತಾಯಿ ಮರಿಯಾಳನ್ನು ಕ್ರೈಸ್ತರು ಪೊಂಪೈ ಮಾತೆ ಎನ್ನುತ್ತಾರೆ. ಅಂದರೆ ಇಟಲಿಯ ಪೊಂಪೈ ಕಣಿವೆ ಪ್ರದೇಶದ ಜನರಲ್ಲಿ ಭಕ್ತಿಯಾಗಲಿ ಪರಸ್ಪರ ಕಾಳಜಿಯಾಗಲೀ ಇರಲಿಲ್ಲ. ಎಲ್ಲರೂ ಅನಾಗರಿಕರಂತೆ ಬಾಳುತ್ತಿದ್ದರು. ಈ ಸಂದರ್ಭ ಅಲ್ಲಿನ ಜನರ ಮನಪರಿವರ್ತನೆಗಾಗಿ 1872ರಲ್ಲಿ ಬಾರ್ತೊಲೊ ಲೊಂಗೊ ಎಂಬ ಯುವ ವಕೀಲರಿಗೆ ಮಾತೆ ಮರಿಯಾ ದರ್ಶನವಿತ್ತು ಪ್ರಾರ್ಥಿಸಲು ಕರೆ ನೀಡಿದರು. ಈ ದರ್ಶನದ ನಂತರ ಪೊಂಪೈ ಊರಿನಲ್ಲಿ ಜನರ ಮನ ಪರಿವರ್ತನೆಯಾಯಿತು.ಹಾಗಾಗಿ ಮಾತೆ ಮರಿಯಳನ್ನು ಪೊಂಪೈ ಮಾತೆ ಎಂದು ಕರೆಯತೊಡಗಿದರು. ಉರ್ವ ಚರ್ಚ್‌ನಲ್ಲಿ ಪೊಂಪೈ ಮಾತೆಗಾಗಿ 1895ರಲ್ಲಿ ಪೀಠವನ್ನು ಸ್ಥಾಪಿಸಲಾ ಯಿತು. 1995ರಲ್ಲಿ ಈ ಪುಣ್ಯಕ್ಶೇತ್ರದ ಕಟ್ಟಡವನ್ನು ನಿರ್ಮಿಸಲಾಯಿತು ಎಂದು ಧರ್ಮಗುರು ಫಾ. ಬೆಂಜಮಿನ್ ಪಿಂಟೊ ಮಾಹಿತಿ ನೀಡಿದರು.

ಸುದ್ದಿಗೋಷ್ಠಿಯಲ್ಲಿ ಸಹಾಯಕ ಧರ್ಮಗುರು ಫಾ. ರಾಹುಲ್ ಡಿಸೋಜ, ನಿವೃತ್ತ ಧರ್ಮಗುರುಗಳಾದ ಫಾ. ಹೆನ್ರಿ ಸಿಕ್ವೇರಾ, ಚರ್ಚ್ ಪಾಲನಾ ಪರಿಷತ್ ಉಪಾಧ್ಯಕ್ಷ ಲೊಯ್ಡಿ ಲೋಬೊ,ಕಾರ್ಯದರ್ಶಿ ಲೂಸಿ ಡಿಸೋಜ, ಎಲಿಯಾಸ್ ಫೆರ್ನಾಂಡಿಸ್, ಸಮಿತಿಯ ಸಂಚಾಲಕ ಕೆವಿನ್ ಮಾರ್ಟಿಸ್ ಉಪಸ್ಥಿತರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News