ಮಂಗಳೂರು ಪೊಲೀಸ್ ಕಮಿಷನರ್ ಹೆಸರಲ್ಲಿ ಮತ್ತೆ ನಕಲಿ ಫೇಸ್‌ಬುಕ್ ಖಾತೆ

Update: 2021-12-11 14:31 GMT

ಮಂಗಳೂರು: ಮಂಗಳೂರು ಪೊಲೀಸ್ ಕಮಿಷನರ್ ಎನ್. ಶಶಿಕುಮಾರ್ ಹೆಸರಿನಲ್ಲಿ ಮತ್ತೆ ನಕಲಿ ಫೇಸ್‌ಬುಕ್ ಖಾತೆಯನ್ನು ಸೃಷ್ಟಿಸಿರುವ ಖದೀಮರು, ಅವರ ಸ್ನೇಹಿತರಿಗೆ ಹಣಕ್ಕಾಗಿ ಮನವಿ ಮಾಡಿರುವ ಘಟನೆ ನಡೆದಿದೆ.

ಈ ಬಗ್ಗೆ ಪೊಲೀಸ್ ಆಯುಕ್ತ ಶಶಿಕುಮಾರ್ ಅವರು ತಮ್ಮ ಅಧಿಕೃತ ಫೇಸ್‌ಬುಕ್ ಖಾತೆಯಲ್ಲಿ ಹೇಳಿಕೊಂಡಿದ್ದಾರೆ. ಬ್ಯಾಂಕ್ ಖಾತೆಗೆ ಹಣಕ್ಕಾಗಿ ಸ್ನೇಹಿತರಿಗೆ ಮನವಿ ಮಾಡಲಾಗಿದ್ದು, ಯಾರು ಕೂಡಾ ಹಣವಾಗಲಿ ಅಥವಾ ಯಾವುದೇ ರೀತಿಯ ಮಾಹಿತಿಯಾಗಲಿ ಹಂಚಿಕೊಳ್ಳಬಾರದು ಎಂದು ಹೇಳಿದ್ದಾರೆ.

ಈ ಹಿಂದೆಯೂ ಹಲವು ಬಾರಿ ಪೊಲೀಸ್ ಆಯುಕ್ತರ ಹೆಸರಿನಲ್ಲಿ ನಕಲಿ ಫೇಸ್‌ಬುಕ್ ಖಾತೆಗಳ ಮೂಲಕ ಹಣಕ್ಕಾಗಿ ಬೇಡಿಕೆ ಇಟ್ಟಿರುವ ಪ್ರಕರಣ ನಡೆದಿದೆ.

‘‘ಫೇಸ್‌ಬುಕ್ ನಕಲಿ ಖಾತೆಯನ್ನು ಸೃಷ್ಟಿಸಿ ಅಮಾಯಕರನ್ನು ವಂಚಿಸುವ, ಮೋಸ ಮಾಡುವ ಪ್ರಕರಣಗಳು ನಡೆಯುತ್ತಿದೆ. ಈ ಬಗ್ಗೆ ಜನರು ಜಾಗೃತರಾಗಿರಬೇಕು. ನನ್ನ ಖಾತೆಯೇ ಸುಮಾರು 10 ಬಾರಿ ನಕಲಿಯಾಗಿ ಸೃಷ್ಟಿಸಲಾಗಿದೆ. ಯಾರಿಂದಲಾದರೂ ಹಣದ ಬೇಡಿಕೆ ಬಂದಾಗ ಅದು ನಿಜವೇ ಎಂದು ತಿಳಿಯಲು ಫೋನ್ ಕಾಲ್, ವಾಟ್ಸ್ ಅ್ಯಪ್ ಅಥವಾ ಸಂದೇಶ ಹೀಗೆ ಹಲವು ಅವಕಾಶಗಳಿವೆ. ಹಾಗಾಗಿ ಯಾರೂ ಇಂತಹ ಮೋಸದ ಜಾಲಕ್ಕೆ ಬಲಿಯಾಗಬಾರದು. ಸಾರ್ವಜನಿಕರು ಜಾಗೃತರಾಗಿರಬೇಕು."

- ಎನ್. ಶಶಿಕುಮಾರ್, ಪೊಲೀಸ್ ಕಮಿಷನರ್, ಮಂಗಳೂರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News