ದ.ಕ.: ಮತ ವಿಂಗಡಣೆ ಕಾರ್ಯ ಪೂರ್ಣ, ಎಣಿಕೆಗೆ ಚಾಲನೆ

Update: 2021-12-14 06:08 GMT

ಮಂಗಳೂರು, ಡಿ.14: ದ.ಕ. ಮತ್ತು ಉಡುಪಿ ಜಿಲ್ಲೆಯನ್ನು ಒಳಗೊಂಡ ಸ್ಥಳೀಯಾಡಳಿತದ ವಿಧಾನ ಪರಿಷತ್‌ನ ದ್ವಿ ಸದಸ್ಯತ್ವ ಸ್ಥಾನಕ್ಕೆ ಡಿ.10ರಂದು ನಡೆದ ಚುನಾವಣೆಯ ಮತ ಎಣಿಕೆ ಪ್ರಕ್ರಿಯೆ ನಡೆಯುತ್ತಿದೆ.

ಈ ಬಗ್ಗೆ ಮಾಧ್ಯಮದವರಿಗೆ ಮಾಹಿತಿ ನೀಡಿದ ದ.ಕ. ಜಿಲ್ಲಾಧಿಕಾರಿ ರಾಜೇಂದ್ರ ಕೆ.ವಿ., ಮತಪತ್ರಗಳ ವಿಂಗಡೆ ಕಾರ್ಯ ಪೂರ್ಣಗೊಂಡಿದೆ. ಇನ್ನು ಕೆಲವೇ ಕ್ಷಣಗಳಲ್ಲಿ ಮತ ಎಣಿಕೆ ಕಾರ್ಯ ಆರಂಭಿಸಲಾಗುವುದು. 14 ಟೇಬಲ್ ಗಳಲ್ಲಿ ಎಣಿಕೆ ನಡೆಯಲಿದೆ ಎಂದು ತಿಳಿಸಿದರು.

ಮಂಗಳೂರಿನ ರೊಸಾರಿಯೋ ಶಾಲಾ-ಕಾಲೇಜು ಆವರಣದಲ್ಲಿ ಬೆಳಗ್ಗೆ 8 ಗಂಟೆಗೆ ಸ್ಟ್ರಾಂಗ್ ರೂಂನ್ನು ತೆರೆಯಲಾಯಿತು. ಬಳಿಕ ಮತಪತ್ರಗಳನ್ನು ಮಿಶ್ರಣ ಮಾಡಲಾಯಿತು. ಪೂರ್ವಾಹ್ನ 11:15ರ ಸುಮಾರಿಗೆ ಮತ ವಿಂಗಡಣೆ ಮಾಡಿ ಮತ ಎಣಿಕೆ ಕಾರ್ಯ ಆರಂಭಗೊಂಡಿದೆ.

ಉಡುಪಿ ಜಿಲ್ಲಾಧಿಕಾರಿ ಕೂರ್ಮಾರಾವ್. ದ.ಕ. ಜಿಪಂ ಸಿಇಒ ಡಾ.ಕುಮಾರ್ ಉಪಸ್ಥಿತರಿದ್ದಾರೆ.

ದ.ಕ. ಮತ್ತು ಉಡುಪಿ ಜಿಲ್ಲೆಯನ್ನು ಒಳಗೊಂಡ ಸ್ಥಳೀಯಾಡಳಿತದ ವಿಧಾನ ಪರಿಷತ್‌ನ ದ್ವಿ ಸದಸ್ಯತ್ವ ಸ್ಥಾನಕ್ಕೆ  ಡಿ.10ರಂದು ನಡೆದ ಚುನಾವಣೆಯಲ್ಲಿ ಶೇ. 99.55 ಮತದಾನವಾಗಿತ್ತು

ದ.ಕ. ಜಿಲ್ಲೆಯ 231 ಹಾಗೂ ಉಡುಪಿ ಜಿಲ್ಲೆಯ 158 ಸಹಿತ ಉಭಯ ಜಿಲ್ಲೆಗಳ ಒಟ್ಟು 389 ಮತಗಟ್ಟೆಗಳಲ್ಲಿ ಒಟ್ಟು 6040 ಮತದಾರರಲ್ಲಿ  6013 ಮಂದಿ ಮತದಾನ ಮಾಡಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News