ಮಂಗಳೂರು ವಿವಿ ಪದವಿ ಫಲಿತಾಂಶ ಗೊಂದಲ ನಿವಾರಿಸಲು ಸಿಎಫ್‌ಐ ಆಗ್ರಹ

Update: 2021-12-14 12:33 GMT

ಮಂಗಳೂರು, ಡಿ.14: ಮಂಗಳೂರು ವಿಶ್ವವಿದ್ಯಾನಿಲಯದ ಪದವಿ ಫಲಿತಾಂಶ ಸಂಪೂರ್ಣವಾಗಿ ಗೊಂದಲಮಯವಾಗಿದೆ. ಅಪೂರ್ಣ ಫಲಿತಾಂಶ ಪ್ರಕಟಗೊಳಿಸುವ ಮೂಲಕ ವಿದ್ಯಾರ್ಥಿಗಳ ಭವಿಷ್ಯದಲ್ಲಿ ಚೆಲ್ಲಾಟವಾಡುತ್ತಿದೆ ಎಂದು ಆರೋಪಿಸಿರುವ ಕ್ಯಾಂಪಸ್ ಫ್ರಂಟ್ ಆಫ್ ಇಂಡಿಯಾದ ದ.ಕ.ಜಿಲ್ಲಾ ಸಮಿತಿ, ಈ ಗೊಂದಲ ನಿವಾರಿಸಬೇಕು ಎಂದು ಆಗ್ರಹಿಸಿದ್ದಾರೆ.

ಈಗಾಗಲೇ ಐದು ಬಾರಿ ಸ್ನಾತಕೋತ್ತರ ಪದವಿ ಪ್ರವೇಶಾತಿಯನ್ನು ಮುಂದೂಡುವ ಮೂಲಕ ಗೊಂದಲ ಸೃಷ್ಟಿಸಿದೆ. ಬಿಎಡ್ ಕೋರ್ಸ್ ಸೇರುವ ಹಲವಾರು ವಿದ್ಯಾರ್ಥಿಗಳ ಕನಸಿಗೆ ತಣ್ಣೀರು ಎರಚಿದೆ. ಫಲಿತಾಂಶ ಪ್ರಕಟವಾಗಿದ್ದರೂ ಅದರಲ್ಲಿ ಪ್ರಶ್ನಾರ್ಥಕ ಚಿಹ್ನೆ ಹಾಕಲಾಗಿದೆ. ಈ ಬಗ್ಗೆ ಕಾಲೇಜಿನಲ್ಲಿ ವಿಚಾರಿಸಿದರೆ ನಮಗೇನು ಮಾಹಿತಿ ಇಲ್ಲ ಎಂಬ ಬೇಜವಾಬ್ದಾರಿತನದ ಉತ್ತರ ನೀಡುತ್ತಿದ್ದಾರೆ. ವಿವಿ ಕಚೇರಿಗೆ ತೆರಳಿ ವಿಚಾರಿಸಿದಾಗ ಅದನ್ನು ಸರಿಪಡಿಸುತ್ತೇವೆ ಎನ್ನುತ್ತಿದ್ದಾರೆ. ಹಾಗಗಿ ಪದವಿ ಫಲಿತಾಂಶ ಪ್ರಕಟನೆೆಯಲ್ಲಾದ ಗೊಂದಲಗಳನ್ನು ನಿವಾರಿಸಿ ಸ್ನಾತಕೋತ್ತರ ತರಗತಿಯನ್ನು ಪ್ರಾರಂಭಿಸಬೇಕು ಎಂದು ಸಿಎಫ್‌ಐ ಜಿಲ್ಲಾಧ್ಯಕ್ಷ ಸರ್ಫುದ್ದೀನ್ ಒತ್ತಾಯಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News