ಮಳ್ ಹರ್ ನಲ್ಲಿ ಅಲ್-ಖಲಂ ಫೆಸ್ಟ್: 'ಟೀಂ ನೂರೇ ದಹ್ಲವಿ' ಚಾಂಪಿಯನ್

Update: 2021-12-15 09:51 GMT

ಮಂಜೇಶ್ವರ, ಡಿ.15: ನಾಲ್ಕು ದಿನಗಳ ಕಾಲ ನಡೆದ ಮಂಜೇಶ್ವರ ಮಳ್ ಹರ್ ವಿದ್ಯಾರ್ಥಿ ಫೆಸ್ಟ್ 'ಅಲ್-ಖಲಂ ಫೆಸ್ಟ್' ಸಮಾಪನಗೊಂಡಿದ್ದು, ಟೀಂ ನೂರೇ ದಹ್ಲವಿ ಚಾಂಪಿಯನ್ ಪಟ್ಟ ಅಲಂಕರಿಸಿತು.

ಜೈಶೇ ಸಂಜರಿ ಮತ್ತು ಅಹ್ಲೇ ಖಾಹಿರಿ ಕ್ರಮವಾಗಿ ದ್ವಿತೀಯ ಮತ್ತು ತೃತೀಯ ಸ್ಥಾನ ಗಳಿಸಿದವು.

ಸಮಾರೋಪ ಸಮಾರಂಭವನ್ನು ಮಳ್ ಹರ್ ದಅವಾ ಅಡ್ಮಿನಿಸ್ಟ್ರೇಟರ್ ಹಸನ್ ಸಅದಿ ಅಲ್-ಅಫ್ಳಲಿ ಅಧ್ಯಕ್ಷತೆಯಲ್ಲಿ ಮಳ್ ಹರ್ ಪ್ರಧಾನ ಕಾರ್ಯದರ್ಶಿ ಸೈಯದ್ ಜಲಾಲುದ್ದೀನ್ ಸಅದಿ ಅಲ್-ಬುಖಾರಿ ಉದ್ಘಾಟಿಸಿದರು.

ಸೈಯದ್ ಮುಸ್ತಫ ಸಿದ್ದೀಖಿ ಅಲ್-ಬುಖಾರಿ ಮಂಬುರಂ, ಉಮರುಲ್ ಫಾರೂಖ್ ಮದನಿ ಮಚ್ಚಂಪಾಡಿ, ಝುಬೈರ್ ಸಖಾಫಿ ವಟ್ಟೋಳಿ, ಸಿದ್ದೀಕ್ ಸಅದಿ ತೌಡುಗೋಳಿ, ಕುಂಞಾಲಿ ಸಖಾಫಿ ಕೋಟೂರು, ಅನಸ್ ಸಿದ್ದೀಕಿ ಚೆರ್ಕಳ,ರವೂಫ್ ಮಿಸ್ಬಾಹಿ ಅಲ್-ಅಫ್ಳಲಿ, ತ್ವಯ್ಯಿಬ್ ಸಅದಿ ಮಲಪ್ಪುರಂ, ಜಾಬಿರ್ ಸಖಾಫಿ ಕೋಡಂಬುಝ, ಅನ್ಸಾರ್ ಸಖಾಫಿ ಮಂಜನಾಡಿ, ನೌಫಲ್ ಸಖಾಫಿ ಪಾಣೆಮಂಗಳೂರು, ಅಡ್ವಕೇಟ್ ಮುಈನುದ್ದೀನ್ ತಂಙಳ್ ಮಂಜೇಶ್ವರ, ಹಸನ್ ಕುಂಞಿ, ಝಿಯಾದ್ ಮಾಸ್ಟರ್ ಮುಟ್ಟಂ, ನಂಶಾದ್, ಮುಸ್ತಫ ಕಡಂಬಾರ್ ಉಪಸ್ಥಿತರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News