ಆಶಾ ಕಾರ್ಯಕರ್ತೆಯರ ಉಡುಪಿ ಜಿಲ್ಲಾ ಮಟ್ಟದ ಸಮಾವೇಶ

Update: 2021-12-17 14:06 GMT

ಉಡುಪಿ, ಡಿ.17: ಎಐಯುಟಿಯುಸಿ ಸಂಯೋಜಿತ ಕರ್ನಾಟಕ ರಾಜ್ಯ ಸಂಯುಕ್ತ ಆಶಾ ಕಾರ್ಯಕರ್ತೆಯರ ಸಂಘ ಉಡುಪಿ ಜಿಲ್ಲಾ ಸಮಿತಿ ವತಿ ಯಿಂದ ಆಶಾ ಕಾರ್ಯಕರ್ತೆಯರ ಉಡುಪಿ ಜಿಲ್ಲಾ ಮಟ್ಟದ ಸಮಾವೇಶವನ್ನು ಉಡುಪಿ ಬನ್ನಂಜೆ ನಾರಾಯಣಗುರು ಸಭಾಭವನದಲ್ಲಿ ಶುಕ್ರವಾರ ಹಮ್ಮಿಕೊಳ್ಳ ಲಾಗಿತ್ತು.

ಸಮಾವೇಶವನ್ನು ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಅಧಿಕಾರಿ ಡಾ.ನಾಗಭೂಷಣ್ ಉಡುಪ ಉದ್ಘಾಟಿಸಿದರು. ಮುಖ್ಯ ಅತಿಥಿಯಾಗಿ ಜಿಲ್ಲಾ ಕಾನೂನು ಸೇವಾ ಪ್ರಾಧಿಕಾರದ ಸದಸ್ಯ ಕಾರ್ಯದರ್ಶಿ ಹಾಗೂ ನ್ಯಾಯಾಧೀಶೆ ಶರ್ಮಿಳಾ ಮಾತ ನಾಡಿದರು. ಈ ಸಂದರ್ಭದಲ್ಲಿ ಜಿಲ್ಲೆಯ ಆಶಾ ಕಾರ್ಯಕರ್ತೆ ಯರ ಸಮಸ್ಯೆಗಳ ಬಗ್ಗೆ ಡಿಎಚ್‌ಓ ಅವರಿಗೆ ಮನವಿ ಸಲ್ಲಿಸಲಾಯಿತು.

ಕರ್ನಾಟಕ ರಾಜ್ಯ ಸಂಯುಕ್ತ ಆಶಾ ಕಾರ್ಯಕರ್ತೆಯರ ಸಂಘದ ರಾಜ್ಯ ಪ್ರಧಾನ ಕಾರ್ಯದರ್ಶಿ ಡಿ.ನಾಗಲಕ್ಷ್ಮೀ ಮಾತನಾಡಿ, ಆಶಾ ಕಾರ್ಯಕರ್ತೆ ಯರು ಇಂದು ಹಲವು ಸಮಸ್ಯೆಗಳನ್ನು ಎದುರಿಸುತ್ತಿದ್ದಾರೆ. ಇವರಿಗೆ ಆಗುತ್ತಿರುವ ಎಲ್ಲ ರೀತಿಯ ಅನ್ಯಾಯದ ವಿರುದ್ಧ ಸಂಘಟಿತ ಹೋರಾಟ ಒಂದೇ ಪರಿಹಾರ ಮಾರ್ಗವಾಗಿದೆ. ಆಶಾ ಕಾರ್ಯಕರ್ತೆಯರು ಸಮಸ್ಯೆಗಳ ಪರಿಹಾರಕ್ಕೆ ಸಂಘ ವನ್ನು ಇನ್ನಷ್ಟು ಬಲಿಷ್ಠಗೊಳಿಸಬೇಕಾಗಿದೆ ಎಂದು ಹೇಳಿದರು.

ಎಐಯುಟಿಯುಸಿ ರಾಜ್ಯ ಉಪಾಧ್ಯಕ್ಷ ಕೆ.ವಿ. ಭಟ್ ಮಾತನಾಡಿ, ಕಾರ್ಮಿಕರ ನ್ಯಾಯಯುತ ಬೇಡಿಕೆಗಳ ಈಡೇರಿಕೆಗೆ ಸಂಘಟಿತ ಹೋರಾಟ ಅಗತ್ಯ. ಅದಕ್ಕಾಗಿ ಎಲ್ಲಾ ಆಶಾ ಕಾರ್ಯಕರ್ತೆಯರು ಒಗ್ಗಟ್ಟನ್ನು ಬಲಪಡಿಸಿಕೊಂಡು ಪ್ರಬಲ ಹೋರಾಟಕ್ಕೆ ಮುಂದಾಗಬೇಕು ಎಂದು ತಿಳಿಸಿದರು.

ಸಂಘದ ಜಿಲ್ಲಾ ಉಸ್ತುವಾರಿ ಹರಿಣಿ, ಸಂಘದ ಜಿಲ್ಲಾ ಗೌರವಾಧ್ಯಕ್ಷರುಗಳಾದ ಶಾಂಭಾವಿ ಕುಲಾಲ್ ಉಡುಪಿ, ನಾಗರತ್ನ ಕುಂದಾಪುರ, ಶೋಭಾ ಅಜೆಕಾರ್, ಜಿಲ್ಲಾಧ್ಯಕ್ಷ ಇಮ ಕೊಡವೂರು, ಉಪಾಧ್ಯಕ್ಷರಾದ ಸಾಧು ಕೊಡಿ, ಪ್ರೇಮ ಉಡುಪಿ, ಸುಜಯ ಕಾರ್ಕಳ, ಶಾರದಾ ಕುಂದಾಪುರ, ವಿನೋದ್ ಉಡುಪಿ, ಜಿಲ್ಲಾ ಕಾರ್ಯದರ್ಶಿ ಸುಹಾಸಿನಿ ಕುಂಭಾಶಿ, ಜಿಲ್ಲಾ ಖಜಾಂಚಿ ಸುಹಾಸಿನಿ ಅಜೆಕಾರ್ ಕಾರ್ಕಳ ಉಪಸ್ಥಿತರಿದ್ದರು.

‘ಒತ್ತಾಯ ಪೂರ್ವಕವಾಗಿ ಕೆಲಸ ಮಾಡಿಸಬೇಡಿ’

ಇ-ಸಂಜೀವಿನಿ, ಎನ್‌ಸಿಡಿ ಸರ್ವೆ, ಇ-ಸಮೀಕ್ಷೆ ಕೆಲಸಗಳನ್ನು ಆಶಾಗಳಿಂದ ಒತ್ತಾಯ ಪೂರ್ವಕವಾಗಿ ಮಾಡುವುದು ಕೈಬಿಡಬೇಕು. ಆರ್‌ಸಿಎಚ್ ಪೋರ್ಟಲ್‌ನಲ್ಲಿ ಎಎನ್‌ಸಿ ಹಾಗೂ ಪಿಎನ್‌ಸಿ ಇನ್ನಿತರ ಹಲವು ಆಶಾ ಕೆಲಸ ಗಳು ಡಾಟಾ ಎಂಟ್ರಿ ಆಗುತ್ತಿಲ್ಲ. ಇದರಿಂದಾಗಿ ಆಶಾಗಳಿಗೆ ಕೆಲಸ ಮಾಡಿದಷ್ಟು ಪ್ರೊತ್ಸಾಹ ಧನ ಸಿಗುತ್ತಿಲ್ಲ ಇದರ ಬಗ್ಗೆ ಕ್ರಮ ಕೈಗೊಳ್ಳಬೇಕು.

ಬಾಕಿ ಇರುವ ಕೇಂದ್ರದ ಕೋವಿಡ್ ವಿಶೇಷ ಪ್ರೊತ್ಸಾಹ ಧನವನ್ನು ಕೂಡಲೇ ನೀಡಲು ಕ್ರಮ ಕೈಗೊಳ್ಳಬೇಕು. ಲಸಿಕಾ ಕೆಲಸಗಳಿಗೆ ಆಶಾಗಳನ್ನು ಬೆಳಗಿನಿಂದ ರಾತ್ರಿವರೆಗೆ ಕೆಲಸ ಮಾಡಿಸಿಕೊಳ್ಳುತ್ತಿರುವುದನ್ನು ನಿಲ್ಲಿಸಬೇಕು. ಇಲಾಖೆಯ ಆದೇಶದಂತೆ ಸ್ವ್ಯಾಬ್ ಟಾರ್ಗೆಟ್, ಜನಗಳ ಹೆಲ್ತ್ ಐಡಿ ಮಾಡಿಸುವುದು, ಮತದಾರರ ಪಟ್ಟಿಗೆ 18 ವರ್ಷದವರನ್ನು ಸೇರಿಸುವ ಕೆಲಸ ಆಶಾಗಳಿಂದ ಮಾಡಿ ಸಬಾರದು. ಇಲ್ಲದಿದ್ದರೆ ಈ ಕೆಲಸಗಳಿಗೆ ದಿನಭತ್ಯೆ-ಪ್ರಯಾಣ ಭತ್ಯೆ ನೀಡಬೇಕು. ಇಲಾಖೆಯ ಆದೇಶದಂತೆ ಆಶಾಗಳಿಗೆ ಜಿಲ್ಲಾಸ್ಪತ್ರೆಯಲ್ಲಿ ವಿಶ್ರಾಂತಿ ಕೋಣೆಯನ್ನು ಒದಗಿಸಬೇಕು. ಮೂರು ತಿಂಗಳಿಗೊಮ್ಮೆ ಆಶಾ ಕಾರ್ಯಕರ್ತೆಯರ ಕುಂದು ಕೊರತೆ ನಿವಾರಣಾ ಸಭೆ ನಡೆಸಬೇಕೆಂದು ಡಿಎಚ್‌ಓಗೆ ಸಲ್ಲಿಸಿದ ಮನವಿಯಲ್ಲಿ ಒತ್ತಾಯಿಸಲಾಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News