ಮಂಗಳೂರು ಅತಿಥಿ ಗೃಹಗಳ ಬಾಡಿಗೆ ದರ ನಿಗದಿ

Update: 2021-12-17 16:52 GMT

ಮಂಗಳೂರು, ಡಿ.17: ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ನಿಗಮದ ಮಂಗಳೂರು ವಿಭಾಗದ ಅಧೀನದಲ್ಲಿರುವ ಅತಿಥಿ ಗೃಹದಲ್ಲಿ ನಿಗಮದ ಅಧಿಕಾರಿಗಳು, ನೌಕರರು ಕಚೇರಿ ಕೆಲಸದ ನಿಮಿತ್ತ, ಖಾಸಗಿ ಭೇಟಿ ವೇಳೆ ಹಾಗೂ ಇತರೆ ಸರಕಾರಿ ಇಲಾಖೆಯ ಅಧಿಕಾರಿಗಳು, ನೌಕರರು ನಿಗಧಿತ ಶುಲ್ಕ ಪಾವತಿಸಿ ತಂಗುವ ಸೌಲಭ್ಯಕ್ಕೆ ಕಲ್ಪಿಸಲಾಗಿದೆ.

ಸಂಸ್ಥೆಯ ಅಧಿಕಾರಿ, ನೌಕರರಿಗೆ ಸಾಮಾನ್ಯ ಒಂದು ಹಾಸಿಗೆಗೆ 100 ರೂ., ಹವಾ ನಿಯಂತ್ರಿತ ಒಂದು ಹಾಸಿಗೆಗೆ 200 ರೂ., ಹಾಗೂ ಒಂದು ಸಾಮಾನ್ಯ ಕೊಠಡಿಗೆ 200 ರೂ., ಮತ್ತು ಹವಾ ನಿಯಂತ್ರಿತ ಒಂದು ಕೊಠಡಿಗೆ 300 ರೂ.ಗಳಂತೆ ಬಾಡಿಗೆ ದರ ನಿಗದಿ ಪಡಿಸಲಾಗಿದೆ.

ಖಾಸಗಿಯವರಿಗೆ ಸಾಮಾನ್ಯ ಒಂದು ಹಾಸಿಗೆಗೆ 200 ರೂ., ಹವಾ ನಿಯಂತ್ರಿತ ಒಂದು ಹಾಸಿಗೆಗೆ 400 ರೂ., ಹಾಗೂ ಸಾಮಾನ್ಯ ಒಂದು ಕೊಠಡಿಗೆ 400 ರೂ., ಹವಾ ನಿಯಂತ್ರಿತ ಒಂದು ಕೊಠಡಿಗೆ 600 ರೂ.ಗಳಂತೆ ಬಾಡಿಗೆ ದರ ನಿಗದಿಪಡಿಸಲಾಗಿದೆ.

ಹೆಚ್ಚಿನ ಮಾಹಿತಿಗೆ ಯೆನೆಪೋಯ ಬಿಲ್ಡಿಂಗ್, 3ನೇ ಮಹಡಿ, ಸೈಂಟ್ ತೆರೇಸಾ ಶಾಲೆಯ ಹತ್ತಿರ, ಬೆಂದೂರ್‌ವೆಲ್, ಮಂಗಳೂರು-575002, ದೂ. ಸಂ: 7760990703 ಸಂಪರ್ಕಿಸಬಹುದು ಎಂದು ಕರಾರಸಾ ನಿಗಮದ ಮಂಗಳೂರು ಭಾಗೀಯ ನಿಯಂತ್ರಣಾಧಿಕಾರಿ ಪ್ರಕಟನೆಯಲ್ಲಿ ತಿಳಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News