ವಿಟ್ಲ ಪಟ್ಟಣ ಪಂಚಾಯತ್; ಕಾಂಗ್ರೆಸ್ ಪ್ರಣಾಳಿಕೆ ಪ್ರಜೆಗಳ ಪ್ರಣಾಳಿಕೆಯಾಗಿದೆ‌: ರಮಾನಾಥ ರೈ

Update: 2021-12-20 17:42 GMT

ವಿಟ್ಲ :  ವಿಟ್ಲ ಪಟ್ಟಣ ಪಂಚಾಯತ್ ಚುನಾವಣಾ ಪ್ರಯುಕ್ತ ತಯಾರಿಸಲಾದ ಕಾಂಗ್ರೆಸ್ ಪಕ್ಷದ ಪ್ರಣಾಳಿಕೆಯು ಜನರ ಅಹವಾಲು ಹಾಗೂ ಸಲಹೆಗಳನ್ನು ಕ್ರೋಡೀಕರಿಸಿ ರಚಿಸಲಾದ ಪ್ರಣಾಳಿಕೆಯಾಗಿದ್ದು ಇದು ಪ್ರಜೆಗಳ  ಪ್ರಣಾಳಿಕೆಯಾಗಿದೆ ಎಂದು ಮಾಜಿ ಸಚಿವ ಬಿ. ರಮಾನಾಥ ರೈ ಹೇಳಿದರು.

ಅವರು  ಪ್ರಣಾಳಿಕೆಯನ್ನು ವಿಟ್ಲ ಪೇಟೆಯಲ್ಲಿ ಸಾರ್ವಜನಿಕರಿಗೆ ವಿತರಣೆ ಮಾಡಿ ಬಳಿಕ  ವಿಟ್ಲ  ಕಾಂಗ್ರೆಸ್ ಕಚೇರಿಯಲ್ಲಿ‌ ನಡೆದ ಸಭೆಯಲ್ಲಿ ಮಾತನಾಡಿದರು.

ಪಟ್ಟಣ ಪಂಚಾಯತ್ ನ ಸಮಗ್ರ ಅಭಿವೃದ್ದಿಗಾಗಿ ಕಾಂಗ್ರೆಸ್ ಪಕ್ಷದ ಅಭ್ಯರ್ಥಿಗೆ ಮತ ನೀಡಿ ಗೆಲ್ಲಿಸಿ. ಈ ಭಾರಿ ಚುನಾವಣೆಗೆ ಉತ್ತಮ ಅಭ್ಯರ್ಥಿಗಳನ್ನು ಸ್ಪರ್ದೆಗೆ ನಿಲ್ಲಿಸಿದ್ದೇವೆ. ಅಭಿವೃದ್ಧಿ ಒಂದೇ ನಮ್ಮ ಮಂತ್ರವಾಗಿದೆ ಎಂದ ಅವರು ಪ್ರಜೆಗಳ ಪ್ರಣಾಳಿಕೆ ಇದೊಂದು ವಿಟ್ಲ ಪಟ್ಟಣ ಪಂಚಾಯತ್ ಚುನಾವಣೆಯಲ್ಲಿ ವಿನೂತನ ಪ್ರಯೋಗವಾಗಿದೆ. ಬಿಜೆಪಿ ಆಡಳಿತ ನಡೆಸುವಲ್ಲಿ ಸಂಪೂರ್ಣ ವಿಫಲವಾಗಿದೆ.  ವಿಟ್ಲ ಪಟ್ಟಣ ಪಂಚಾಯತ್ ವ್ಯಾಪ್ತಿಯಲ್ಲಿ  ಕುಡಿಯುವ ನೀರಿನಿಂದ ಹಿಡಿದು ಹಲವಾರು ಮೂಲಭೂತ ಸೌಕರ್ಯದ ಕೊರತೆಗಳಿವೆ. ದಿನದಿಂದ ದಿನಕ್ಕೆ ಬೆಳೆಯುವ ಪಟ್ಟಣಗಳಲ್ಲಿ ಒಂದಾಗಿರುವ ವಿಟ್ಲದಲ್ಲಿ ಕುಡಿಯುವ ನೀರು ಪೂರೈಕೆಗೆ ಬೇಕಾದ ವ್ಯವಸ್ಥೆ ಇನ್ನೂ ಸರಿಯಾಗಿಲ್ಲ. ಕಾಂಗ್ರೆಸ್ ಪಕ್ಷದ ಅಭ್ಯರ್ಥಿಗಳು ಗೆದ್ದು ಬಂದರೆ ಮೂಲಭೂತ ಸೌಕರ್ಯಗಳಿಗೆ  ಪ್ರಥಮ ಆಧ್ಯತೆಗಳನ್ನು ನೀಡಲಾಗುವುದು ಎಂದರು.

ಮಾಜಿ‌ ಶಾಸಕಿ‌‌ ಶಕುಂತಳಾ ಟಿ.ಶೆಟ್ಟಿ,  ವಿಟ್ಲ - ಉಪ್ಪಿನಂಗಡಿ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಡಾ. ರಾಜಾರಾಮ್ ಕೆ.ವಿ., ಜಿಲ್ಲಾ ಮಹಿಳಾ ಕಾಂಗ್ರೆಸ್ ಅಧ್ಯಕ್ಷೆ ಶಾಲೆಟ್ ಪಿಂಟೊ, ಚುನಾವಣಾ ಉಸ್ತುವಾರಿ ಗಳಾದ ಪ್ರವೀಣ್ ಚಂದ್ರ ಆಳ್ವ, ಮರುಳೀಧರ ರೈ ಮಠಂತಬೆಟ್ಟು, ಚಂದ್ರಹಾಸ ಕರ್ಕೇರ, ಮಹಮ್ಮದ್ ಕುಂಜತ್ತಬೈಲ್, ಪುತ್ತೂರು ಬ್ಲಾಕ್ ಕಾಂಗ್ರೆಸ್ ನ‌ ಮಾಜಿ ಅಧ್ಯಕ್ಷ ಮಹಮ್ಮದ್ ಬಡಗನ್ನೂರು, ಕಾಂಗ್ರೆಸ್  ಪ್ರಮುಖರಾದ ವೆಂಕಪ್ಪ ಗೌಡ ಸುಳ್ಯ, ಪ್ರಸಾದ್ ಕೌಶಲ್ ಶೆಟ್ಟಿ, ರಝಾಕ್ ಕುಕ್ಕಾಜೆ, ಪದ್ಮನಾಭ ನರಿಂಗಾನ, ಕರೀಂ ಕುದ್ದುಪದವು ಮೊದಲಾದವರು  ಉಪಸ್ಥಿತರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News