ಕಾರ್ಮಿಕ ಕಲ್ಯಾಣ ಮಂಡಳಿಯ ನಿಧಿಗೆ ಕನ್ನ: ಮಹಾಂತೇಶ್ ಆರೋಪ

Update: 2021-12-21 13:17 GMT

ಬೈಂದೂರು, ಡಿ.21: 1996ರ ಕಟ್ಟಡ ಕಾರ್ಮಿಕ ಕಾನೂನು ಹಾಗೂ ಸೆಸ್ ಕಾನೂನುಗಳೆರಡನ್ನೂ ತಿದ್ದುಪಡಿ ತರುವ ಮೂಲಕ ಸಾಮಾಜಿಕ ಸುರಕ್ಷಾ ಕಲ್ಯಾಣ ಕಾಯಿದೆಯನ್ನು ಜಾರಿಗೆ ತರಲಾಗಿದೆ. ಮುಂದಿನ ದಿನಗಳಲ್ಲಿ ಈ ನಿಧಿಯನ್ನು ಸರಕಾರ ಕಬ್ಜಾ ಮಾಡಿಕೊಳ್ಳಲಿದೆ ಎಂದು ಕರ್ನಾಟಕ ರಾಜ್ಯ ಕಟ್ಟಡ ಮತ್ತು ಇತರೆ ನಿರ್ಮಾಣ ಕಾರ್ಮಿಕರ ಫೆಡರೇಶನ್ ರಾಜ್ಯ ಪ್ರಧಾನ ಕಾರ್ಯದರ್ಶಿ ಕೆ.ಮಹಾಂತೇಶ್ ಆತಂಕ ವ್ಯಕ್ತಪಡಿಸಿದ್ದಾರೆ.

ಬೈಂದೂರು ಅಂಬೇಡ್ಕರ್ ಭವನದಲ್ಲಿ ಡಿ.19ರಂದು ಜರುಗಿದ ಬೈಂದೂರು ತಾಲೂಕು ಕಟ್ಟಡ ಮತ್ತು ಇತರೆ ನಿರ್ಮಾಣ ಕಾರ್ಮಿಕರ ಸಂಘದ 4ನೇ ವಾರ್ಷಿಕ ಮಹಾಸಭೆಯನ್ನು ಉ್ಘಾಟಿಸಿ ಅವರು ಮಾತನಾಡುತ್ತಿದ್ದರು.

ದೇಶದಲ್ಲಿ ಪ್ರಸ್ತುತ 10 ಕೋಟಿಗಿಂತ ಅಧಿಕ ಕಾರ್ಮಿಕರು ನಿರ್ಮಾಣ ವಲಯದಲ್ಲಿ ಕೆಲಸ ಮಾಡುತ್ತಿದ್ದಾರೆ. ದೇಶಾದ್ಯಂತ 30 ರಾಜ್ಯಗಳಲ್ಲಿ ಕಲ್ಯಾಣ ಮಂಡಳಿಗಳಲ್ಲಿ ಸುಮಾರು ರೂಪಾಯಿ 70,000 ಕೋಟಿ ಸೆಸ್ ಹಣ ಕೊಳೆ ಯುತ್ತಿದ್ದು, ಈ ನಿಧಿಗೆ ಕನ್ನ ಹಾಕುವ ಕಳ್ಳ ದಾರಿಗಳನ್ನು ಕೇಂದ್ರ ಸರಕಾರಗಳು ಹುಡುಕಿ ಕೊಂಡಿದೆ ಎಂದು ಅವರು ದೂರಿದರು.

ಮುಖ್ಯ ಅತಿಥಿಗಳಾಗಿ ಸಿಐಟಿಯು ಜಿಲ್ಲಾ ಮುಖಂಡ ಎಚ್.ನರಸಿಂಹ ಮತ್ತು ಪ್ರಗತಿಪರ ಚಿಂತಕ ರಮೇಶ್ ಗುಲ್ವಾಡಿ ಮಾತನಾಡಿದರು. ಸಂಘದ ವಾರ್ಷಿಕ ಚಟುವಟಿಕೆಯ ವರದಿ ಮತ್ತು ಲೆಕ್ಕ ಪತ್ರಗಳನ್ನು ಕಾರ್ಯದರ್ಶಿಗಳ ಪರವಾಗಿ ರೊನಾಲ್ಡ್ ರಾಜೇಶ್ ಕ್ವಾಡ್ರಸ್ ಮಂಡಿಸಿದರು. ಕಟ್ಟಡ ಸಾಮಾಗ್ರಿಗಳ ಬೆಲೆಗಳ ನಿಯಂತ್ರಣಕ್ಕಾಗಿ ಅವುಗಳ ಮೇಲಿನ ಜಿಎಸ್‌ಟಿ ಕಡಿತಗೊಳಿಸಲು ಹಾಗೂ ಇತರ ಮಹತ್ವದ ನಿರ್ಣಯಗಳನ್ನು ಸಭೆಯಲ್ಲಿ ಅಂಗೀರಿಸಲಾಯಿತು.

ರಾಜೀವ ಪಡುಕೋಣೆ ಸೆಯಅ್ಯಕ್ಷತೆ ವಹಿಸಿದ್ದರು. ಅಮ್ಮಯ್ಯ ಪೂಜಾರಿ ನಿರ್ಣಯ ಮಂಡಿಸಿದರು. ಗಣೇಶ ದೇವಾಡಿಗ ಸ್ವಾಗತಿಸಿದರು. ವಿಜಯ. ಬಿ. ಶ್ರದ್ಧಾಂಜಲಿ ಠರಾವು ಮಂಡಿಸಿದರು. ವೆಂಕಟೇಶ್ ಕೋಣಿ ವಂದಿಸಿದರು. 

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News