ಸೋಲಾರ್ ದಾರಿದೀಪ ಕಳವು

Update: 2021-12-22 15:31 GMT

ಕೋಟ, ಡಿ.22: ಶಿರಿಯಾರ ಗ್ರಾಮದ ಪಡುಮುಂಡು ಮಾರ್ಗದ ಕೆದ್ಲಹಕ್ಲು ತೌಡಿನಹಕ್ಲು ಎಂಬಲ್ಲಿ 15ನೇ ಹಣಕಾಸಿನ ಯೋಜನೆ ಯಡಿ ಅಳವಡಿಸಲಾದ ಸೋಲಾರ್ ದಾರಿ ದೀಪ ಕಂಬ ಸಮೇತ ಕಳವಾಗಿರುವ ಬಗ್ಗೆ ವರದಿಯಾಗಿದೆ.

ಸೋಲಾರ್ ದೀಪವನ್ನು ಡಿ.10ರಿಂದ 13ರ ನಡುವಿನಲ್ಲಿ ಕಳ್ಳರು ಕಂಬ ಸಮೇತ ಕಳವು ಮಾಡಿಕೊಂಡು ಹೋಗಿದ್ದಾರೆ. ಇವುಗಳ ಒಟ್ಟು ಮೌಲ್ಯ 24,500ರೂ. ಎಂದು ಅಂದಾಜಿಸಲಾಗಿದೆ. ಶಿರಿಯಾರ ಗ್ರಾಪಂ ಪಿಡಿಓ ಸತೀಶ್ ನೀಡಿದ ದೂರಿನಂತೆ ಕೋಟ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News