ಮೂಡುಬಿದಿರೆ: ನಮ್ಮ ನಾಡ ಒಕ್ಕೂಟದಿಂದ ಆಯುಷ್ಮಾನ್ ಕಾರ್ಡ್, ಇ- ಶ್ರಮ್ ಕಾರ್ಡ್ ಶಿಬಿರ

Update: 2021-12-25 06:07 GMT

ಮೂಡುಬಿದಿರೆ, ಡಿ.25: ನಮ್ಮ ನಾಡ ಒಕ್ಕೂಟದ ಮೂಡುಬಿದಿರೆ ಘಟಕದ ವತಿಯಿಂದ ಆಯುಷ್ಮಾನ್ ಕಾರ್ಡ್ ಹಾಗೂ ಇ- ಶ್ರಮ್ ಕಾರ್ಡ್ ಶಿಬಿರವನ್ನು ಇಲ್ಲಿನ ಸಮಾಜ ಮಂದಿರದಲ್ಲಿ ಇಂದು ಬೆಳಗ್ಗೆ ಆಯೋಜಿಸಲಾಗಿತ್ತು.

ಮೂಡುಬಿದಿರೆ ಜುಮಾ ಮಸೀದಿಯ ಖತೀಬ್ ಮುಸ್ತಫ ಅಮಾನಿಯವರ ದುಆದೊಂದಿಗೆ ಪ್ರಾರಂಭವಾಯಿತು. ನಮ್ಮ ನಾಡ ಒಕ್ಕೂಟದ ಮೂಡುಬಿದಿರೆ ತಾಲೂಕು ಘಟಕದ ಅಧ್ಯಕ್ಷ ಮುಹಮ್ಮದ್ ಅಶ್ರಫ್ ಸಮಾರಂಭದ ಅಧ್ಯಕ್ಷತೆ ವಹಿಸಿದ್ದರು.

ಮೌಲಾನ ಅಬ್ದುಲ್ ಹಫೀಝ್ ಅಲ್ ಕಾಸಿಮಿ ನಮ್ಮ ನಾಡ ಒಕ್ಕೂಟದ ಧ್ಯೇಯೋದ್ದೇಶಗಳಾದ ಶಿಕ್ಷಣ, ಸರಕಾರಿ ಉದ್ಯೋಗ ಹಾಗೂ ಮಕ್ಕಳ ನೈತಿಕ ಏಳಿಗೆಯ ಬಗ್ಗೆ ವಿವರಿಸಿದರು. ಮೂಡುಬಿದಿರೆ ಪುರಸಭೆಯ ಅಧ್ಯಕ್ಷ ಪ್ರಸಾದ್ ಮುಖ್ಯ ವಿಷಯಗಳ ಬಗ್ಗೆ ತಮ್ಮ ಅಭಿಪ್ರಾಯವನ್ನು ವ್ಯಕ್ತಪಡಿಸಿದರು. ಮುಖ್ಯ ಅತಿಥಿಯಾಗಿ ಭಾಗವಹಿಸಿದ್ದ ಆಯುಷ್ಮಾನ್ ಕಾರ್ಡ್ ಗೆ ಸಂಬಂಧಿಸಿದ ಅಧಿಕಾರಿಣಿ ಸೌಮ್ಯಾ ಮಾಹಿತಿಗಳನ್ನು ನೀಡಿದರು.

ವೇದಿಕೆಯಲ್ಲಿ ನಮ್ಮ ನಾಡ ಒಕ್ಕೂಟದ ಕೇಂದ್ರ ಸಮಿತಿಯ ಖಜಾಂಚಿ ಅಬ್ದುಲ್ ಹಮೀದ್, ಮೂಡುಬಿದಿರೆ ಜುಮಾ ಮಸೀದಿಯ ಅಧ್ಯಕ್ಷ ಅಬ್ದುಲ್ ರಹಿಮಾನ್, ಸಮಾಜ ಸೇವಕ ಸಿ.ಎಚ್.ಗಫೂರ್ ಮೂಡುಬಿದಿರೆ, ಕೋಟೆಬಾಗಿಲು ಶಾಫಿ ಜುಮಾ ಮಸೀದಿಯ ಅಧ್ಯಕ್ಷ ಅಬ್ದುಲ್ಲಾ ಉಪಸ್ಥಿತರಿದ್ದರು.

ಒಕ್ಕೂಟದ ಜಿಲ್ಲಾ ಕಾರ್ಯದರ್ಶಿ ಅಬುಲ್ ಆಲಾ ಕಾರ್ಯಕ್ರಮ ನಿರೂಪಿಸಿ ವಂದಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News