ಪೆರಂಪಳ್ಳಿಯಲ್ಲಿ ರೈತ ದಿನಾಚರಣೆ; ನಗರ ವ್ಯಾಪ್ತಿಯ ಕೃಷಿಕರಿಗೂ ಸೌಲಭ್ಯಗಳು ಸಿಗಬೇಕು: ಸುಬ್ರಹ್ಮಣ್ಯ ಶ್ರೀಯಾನ್

Update: 2021-12-25 13:53 GMT

ಉಡುಪಿ, ಡಿ.25: ಗ್ರಾಮೀಣ ಪ್ರದೇಶಗಳ ಕೃಷಿಕರಿಗೆ ಸಿಗುವ ಕೆಲವು ಸೌಲಭ್ಯಗಳು ನಗರ ವ್ಯಾಪ್ತಿಯೊಳಗೆ ಬರುವ ಪೆರಂಪಳ್ಳಿಯಂತಹ ಪ್ರದೇಶಗಳಿಗೆ ಲಭ್ಯವಾಗುತ್ತಿಲ್ಲ. ಈ ತಾರತಮ್ಯ ನಿವಾರಣೆಯಾಗಬೇಕು ಎಂದು ಉಡುಪಿ ಜಿಲ್ಲಾ ಕೃಷಿಕ ಸಂಘದ ಪೆರಂಪಳ್ಳಿ ವಲಯ ಸಮಿತಿ ಅಧ್ಯಕ್ಷ ಸುಬ್ರಹ್ಮಣ್ಯ ಶ್ರೀಯಾನ್ ಹೇಳಿದ್ದಾರೆ.

ಜಿಲ್ಲಾ ಕೃಷಿಕ ಸಂಘದ ಪೆರಂಪಳ್ಳಿ ವಲಯ ಸಮಿತಿ, ಪೆರಂಪಳ್ಳಿ ಅಂಬಡೆಬೆಟ್ಟು ಹಿರಿಯ ಕೃಷಿಕರಾದ ಗಿರಿಜಾ ಪೂಜಾರಿ ಅವರ ಮನೆ ವಠಾರದಲ್ಲಿ ಆಯೋಜಿ ಸಿದ್ದ ರೈತ ದಿನಾಚರಣೆ ಮತ್ತು ಕೃಷಿಕರ ಸನ್ಮಾನ ಕಾರ್ಯಕ್ರಮದ ಅಧ್ಯ್ಷತೆ ವಹಿಸಿ ಅವರು ಮಾತನಾಡಿದರು.

ಉಡುಪಿ ನಗರಸಭಾ ಅಧ್ಯಕ್ಷೆ ಸುಮಿತ್ರಾ ನಾಯಕ್ ಕಾರ್ಯಕ್ರಮವನ್ನು ಉದ್ಘಾಟಿಸಿದರು. ಜಿಲ್ಲಾ ಕೃಷಿಕ ಸಂಘದ ಅಧ್ಯಕ್ಷ ರಾಮಕೃಷ್ಣ ಶರ್ಮ ಬಂಟಕಲ್ಲು, ಪ್ರಧಾನ ಕಾರ್ಯದರ್ಶಿ ಕುದಿ ಶ್ರೀನಿವಾಸ ಭಟ್ ಸಂಪ್ಮೂಲ ವ್ಯಕ್ತಿಗಳಾಗಿ ಭಾಗವಹಿಸಿದ್ದರು.

ಅತಿಥಿಗಳಾಗಿ ಶ್ರೀನಿವಾಸ ಬಲ್ಲಾಳ್ ಮಲ್ಲಂಪಳ್ಳಿ, ನಾಮ ನಿರ್ದೇಶಿತ ನಗರ ಸಭಾ ಸದಸ್ಯೆ ಅರುಣಾ ಎಸ್. ಸುಧಾಮ, ರವೀಂದ್ರ ಗುಜ್ಜರಬೆಟ್ಟು, ಹಿರಿಯ ಕೃಕ ಅಂತಪ್ಪ ಪೂಜಾರಿ ಭಾಗವಹಿಸಿದ್ದರು. ಪೆರಂಪಳ್ಳಿ ವಲಯದ ಹಿರಿಯ ಹಾಗೂ ಪ್ರಗತಿಪರ ಕೃಷಿಕರಾದ ಜಾನಕಿ ಪೂಜಾರಿ ಸೇರಿ ಐವರು ಕೃಷಿಕರನ್ನು ಇದೆೀ ಸಂದರ್ಭದಲ್ಲಿ ಸನ್ಮಾನಿಸಲಾಯಿತು.

ಸಭೆಯಲ್ಲಿ ಶಂಕರ ಕೋಟ್ಯಾನ್ ಪೆರಂಪಳ್ಳಿ, ಪ್ರೇಮ ಪೂಜಾರಿ, ಜ ಪೂಜಾರಿ, ಜಯಂತಿ ಶಂಕರ್, ಪ್ರಮೀಳಾ ಜಯಂತಿ, ರಫೈಲ್, ಆಲ್ವಿನ್ ಡಿಸೋಜಾ, ವಿನ್ಸೆಂಟ್, ಪೀಟರ್ ಡಿಸೋಜಾ, ಶಾಂತಿ ಡಿಸೋಜಾ, ಹೆಲೆನ್ ಬ್ರಿಟ್ಟೋ, ಪ್ರೆಸಿಲ್ಲ, ಬೇಬಿ ಮೊದಲಾದವರು ಉಪಸ್ಥಿತರಿದ್ದರು.

ವಲಯ ಸಮಿತಿ ಪ್ರಧಾನ ಕಾರ್ಯದರ್ಶಿ ರವೀಂದ್ರ ಪೂಜಾರಿ ಶೀಂಬ್ರ ಕಾರ್ಯಕ್ರಮ ನಿರ್ವಹಿಸಿ ವಂದಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News