ಡಿ.26ರಿಂದ ಸುಪ್ರೀಂ ಕೋರ್ಟ್ ನ್ಯಾಯಮೂರ್ತಿ ಅಬ್ದುಲ್ ನಝೀರ್ ಪ್ರವಾಸ

Update: 2021-12-25 15:14 GMT

ಮಂಗಳೂರು, ಡಿ.25: ಸುಪ್ರೀಂ ಕೋರ್ಟ್‌ನ ನ್ಯಾಯಮೂರ್ತಿಗಳಾದ ಎಸ್. ಅಬ್ದುಲ್ ನಜೀರ್ ಡಿ.26ರಿಂದ ದ.ಕ. ಜಿಲ್ಲೆಯಲ್ಲಿ ಪ್ರವಾಸ ಕೈಗೊಂಡಿದ್ದಾರೆ.

ಡಿ.26ರ ರಾತ್ರಿ 8:10ಕ್ಕೆ ಅವರು ಹೈದರಾಬಾದ್‌ನಿಂದ ವಿಮಾನದ ಮೂಲಕ ಮಂಗಳೂರಿಗೆ ಆಗಮಿಸಿ ಬಳಿಕ ಕುಕ್ಕೆ ಸುಬ್ರಮಣ್ಯಕ್ಕೆ ತೆರಳಿ, ವಾಸ್ತವ್ಯ ಹೂಡುವರು. ಡಿ.28ರ ಬೆಳಗ್ಗೆ 9 ಗಂಟೆಗೆ ಕುಕ್ಕೆ ಸುಬ್ರಹ್ಮಣ್ಯದಿಂದ ಹೊರಟು ಪುತ್ತೂರಿಗೆ 10.30ಕ್ಕೆ ಆಗಮಿಸಿ, 11 ಗಂಟೆಗೆ ಬಾರ್ ಅಸೋಸಿಯೇಶನ್‌ನ ಕಟ್ಟಡವನ್ನು ಉದ್ಘಾಟಿಸುವರು. ಬಳಿಕ ಕೋರ್ಟ್ ಕಟ್ಟಡದ ಎರಡನೇ ಹಂತದ ಕಟ್ಟಡ ಹಾಗೂ ನ್ಯಾಯಾಂಗ ಇಲಾಖೆಯ ಅಧಿಕಾರಿಗಳ ಕ್ವಾಟ್ರಸ್ ನಿರ್ಮಾಣ ಕಾಮಗಾರಿಗೆ ಶಂಕುಸ್ಥಾಪನೆ ನೆರವೇರಿಸುವರು. ಮಧ್ಯಾಹ್ನ 1:15ಕ್ಕೆ ಪುತ್ತೂರಿನಿಂದ ಹೊರಟು 2:15ಕ್ಕೆ ಸುಳ್ಯಕ್ಕೆ ತೆರಳುವರು. ಮಧ್ಯಾಹ್ನ 2:30ಕ್ಕೆ ಅಲ್ಲಿ ನ್ಯಾಯಾಂಗ ಇಲಾಖೆಯ ಅಧಿಕಾರಿಗಳ ವಸತಿ ಗೃಹಗಳ ನಿರ್ಮಾಣಕ್ಕೆ ಶಂಕುಸ್ಥಾಪನೆ ನೆರವೇರಿಸುವರು. ಸಂಜೆ 4:45ಕ್ಕೆ ಬೆಳ್ತಂಗಡಿಗೆ ತೆರಳಿ 5 ಗಂಟೆಗೆ ಬಾರ್ ಅಸೋಸಿಯೇಶನ್ ಕಟ್ಟಡವನ್ನು ಉದ್ಘಾಟಿಸುವರು. ಸಂಜೆ 6 ಗಂಟೆಗೆ ಬೆಳ್ತಂಗಡಿಯಿಂದ ಹೊರಟು ರಾತ್ರಿ 7:30ಕ್ಕೆ ಮೂಡುಬಿದಿರೆಯ ಸ್ವಗೃಹದಲ್ಲಿ ವಾಸ್ತವ್ಯ ಹೂಡುವರು.

ಡಿ.29ರ ಬೆಳಗ್ಗೆ 8 ಗಂಟೆಗೆ ಮೂಡುಬಿದಿರೆಯಿಂದ ಹೊರಟು 8:45ಕ್ಕೆ ಮಂಗಳೂರಿಗೆ ಆಗಮಿಸುವರು. ಬೆಳಗ್ಗೆ 9ಕ್ಕೆ ನ್ಯಾಯಾಂಗ ಇಲಾಖೆ ಅಧಿಕಾರಿಗಳ ಕ್ವಾಟ್ರಸ್ ನಿರ್ಮಾಣಕ್ಕೆ ಶಂಕುಸ್ಥಾಪನೆ ನೆರವೇರಿಸುವರು. ಪೂ.11ಕ್ಕೆ ಬಂಟ್ವಾಳಕ್ಕೆ ತೆರಳುವ ಅವರು 11:15ಕ್ಕೆ ಬಂಟ್ವಾಳದಲ್ಲಿ ನ್ಯಾಯಾಂಗ ಇಲಾಖೆ ಅಧಿಕಾರಿಗಳ ವಸತಿ ಗೃಹಗಳ ನಿರ್ಮಾಣಕ್ಕೆ ಶಂಕುಸ್ಥಾಪನೆ ನೆರವೇರಿಸುವರು. ನಂತರ 1:45ಕ್ಕೆ ಮೂಡುಬಿದಿರೆಗೆ ತೆಳಿ ಸ್ವಗೃಹದಲ್ಲಿ ವಾಸ್ತವ್ಯ ಹೂಡುವರು.

ಡಿ.30ರಂದು ರಾಜ್ಯ ಕಾನೂನು ಸೇವೆಗಳ ಪ್ರಾಧಿಕಾರದಿಂದ ಮೂಡುಬಿದಿರೆಯ ಆಳ್ವಾಸ್ ಕಾಲೇಜಿನಲ್ಲಿ ಆಯೋಜಿಸಲಾಗಿರುವ ಕಾರ್ಯಕ್ರಮದಲ್ಲಿ ಭಾಗವಹಿಸುವರು.

2022ರ ಜನವರಿ 1ರ ಪೂ.11:25ಕ್ಕೆ ಮಂಗಳೂರಿನಿಂದ ವಿಮಾನದ ಮೂಲಕ ಬೆಂಗಳೂರಿಗೆ ತೆರಳುವರು ಎಂದು ಪ್ರಕಟನೆ ತಿಳಿಸಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News