ಫಳ್ನೀರ್: ಎಂಟು ಅಡಿ ಎತ್ತರದಿಂದ ಉರುಳಿಬಿದ್ದ ಆ್ಯಂಬುಲೆನ್ಸ್

Update: 2021-12-27 07:10 GMT

ಮಂಗಳೂರು, ಡಿ.27: ಹಿಮ್ಮುಖವಾಗಿ ಚಲಿಸುವ ವೇಳೆ ಚಾಲಕನ ನಿಯಂತ್ರಣ ತಪ್ಪಿದ ಆ್ಯಂಬುಲೆನ್ಸ್ ವೊಂದು ಎಂಟು ಅಡಿ ಎತ್ತರದಿಂದ ಉರುಳಿಬಿದ್ದ ಘಟನೆ ನಗರದ ಫಳ್ನೀರ್ ನ ಖಾಸಗಿ ಆಸ್ಪತ್ರೆ ಬಳಿ ಸೋಮವಾರ ನಡೆದಿದೆ.

ಘಟನೆಯ ವೇಳೆ ಆ್ಯಂಬುಲೆನ್ಸ್ ನಲ್ಲಿ ಚಾಲಕ ಒಬ್ಬನೇ ಇದ್ದು, ಸಣ್ಣಪುಟ್ಟ ಗಾಯಗಳೊಂದಿಗೆ ಪಾರಾಗಿದ್ದಾರೆ.

ರಿವರ್ಸ್ ತೆಗೆಯುತ್ತಿದ್ದ ವೇಳೆ ಆ್ಯಂಬುಲೆನ್ಸ್ ಚಾಲಕನ ನಿಯಂತ್ರಣ ತಪ್ಪಿ ರಸ್ತೆ ಪಕ್ಕದ ಗೋಡೆಗೆ ಢಿಕ್ಕಿ ಹೊಡೆದಿದೆ. ಈ ವೇಳೆ ಆವರಣ ಗೋಡೆ ಕುಸಿದು ಆ್ಯಂಬುಲೆನ್ಸ್ ಸುಮಾರು ಎಂಟು ಅಡಿ ಕೆಳಗೆ ಉರುಳಿ ಬಿದ್ದಿದೆ. ಇದರಿಂದ ಕೆಳಭಾಗದಲ್ಲಿ ನಿಲ್ಲಿಸಿದ್ದ 2-3 3 ಬೈಕ್‍ಗಳು ಜಖಂಗೊಂಡಿವೆ ಎಂದು ತಿಳಿದುಬಂದಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News