​ಜ.3: ಮಳಲಿಪೇಟೆ ಮಸೀದಿಯಲ್ಲಿ ನೂರೇ ಅಜ್ಮೀರ್

Update: 2021-12-29 14:11 GMT

ಮಂಗಳೂರು, ಡಿ.29: ಮಳಲಿಪೇಟೆ ಜುಮಾ ಮಸೀದಿ ಮತ್ತು ಮಅದನುಲ್ ಉಲೂಂ ಮದ್ರಸ ಇದರ 60ನೆ ವಾರ್ಷಿಕೋತ್ಸವ ಹಾಗೂ ಸನಸ್ತ ಅಂಗೀಕಾರದ ಸುವರ್ಣ ಮಹೋತ್ಸವದ ಪ್ರಯುಕ್ತ ಜ.3ರಂದು ಸಂಜೆ 6:30ಕ್ಕೆ ನೂರೇ ಅಜ್ಮೀರ್ (ಆಧ್ಯಾತ್ಮಿಕ ಸಂಗಮ) ಕಾರ್ಯಕ್ರಮ ನಡೆಯಲಿದೆ.

ದ.ಕ.ಜಿಲ್ಲಾ ಖಾಝಿ ಅಲ್‌ಹಾಜ್ ತ್ವಾಕಾ ಅಹ್ಮದ್ ಮುಸ್ಲಿಯಾರ್‌ರ ಅಧ್ಯಕ್ಷತೆಯಲ್ಲಿ ನಡೆಯುವ ಈ ಕಾರ್ಯಕ್ರಮಕ್ಕೆ ವಲಿಯುದ್ದೀನ್ ಫೈಝಿ ವಾಝಕ್ಕಾಡ್ ನೇತೃತ್ವ ನೀಡಲಿದ್ದಾರೆ ಎಂದು ಮಸೀದಿಯ ಅಧ್ಯಕ್ಷ ಮುಹಮ್ಮದ್ ಮಾಮು ಮಣೇಲ್ ಪ್ರಕಟನೆಯಲ್ಲಿ ತಿಳಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News