ಸಾಲ ಪಡೆದು ಬ್ಯಾಂಕ್ ಗೆ ವಂಚನೆ ಆರೋಪ; ಸಿಸಿಬಿಯಿಂದ ಹಲವರ ಬಂಧನ

Update: 2021-12-29 16:59 GMT

ಸುಳ್ಯ: ಭಾರತ್ ಬ್ಯಾಂಕ್ ಮೂಡುಬಿದಿರೆ ಶಾಖೆಯಿಂದ ಪೋರ್ಜರಿ ದಾಖಲೆಯ ಮೂಲಕ ಸಾಲ ಪಡೆದು ಬ್ಯಾಂಕ್‍ಗೆ ವಂಚಿಸಿದ್ದಾರೆಂಬ ದೂರಿನ ಹಿನ್ನೆಲೆಯಲ್ಲಿ ಮಂಗಳೂರಿನ ಸಿಸಿಬಿಯ ಆರ್ಥಿಕ ಅಪರಾಧ ವಿಭಾಗದ ಪೊಲೀಸರು ಸುಳ್ಯದ ಕಲ್ಮಡ್ಕ ಗ್ರಾಮದವರನ್ನು ಬಂಧಿಸಿದ ಘಟನೆ ಬುಧವಾರ ವರದಿಯಾಗಿದೆ.

ಕಲ್ಮಡ್ಕದ ಬೆಟ್ಟ ಉದಯಕುಮಾರ್, ಮಹಮ್ಮದ್, ಅಶ್ರಫ್, ಬಾಳಿಲದ ಮಜೀದ್ ಮತ್ತಿತರರನ್ನು ಹಾಗೂ ಪೂರಕ ದಾಖಲೆ ಒದಗಿಸಿದ ಇಂಜಿನಿಯರ್ ರನ್ನು ಬಂಧಿಸಿರುವ ಸಿಸಿಬಿ ಪೋಲಿಸರು. ಮಜೀದ್, ಮಹಮ್ಮದ್, ಅಶ್ರಫ್ ಮತ್ತಿತರರ ಹೆಸರಲ್ಲಿ ಹಲವು ಲಕ್ಷ ರೂ.ಗಳ ಸಾಲ ಮಾಡಿ ಅದನ್ನು ಬೆಟ್ಟ ಉದಯಕುಮಾರ್ ಪಡೆದುಕೊಂಡಿದ್ದಾರೆಂದು ದೂರಿನಲ್ಲಿ ತಿಳಿಸಲಾಗಿದೆ.

ಸುಮಾರು 2 ಕೋಟಿ ರೂ.ಗಳ ಸಾಲ ಆರು ಮಂದಿಯ ಹೆಸರಿನಲ್ಲಿ ಮಾಡಲಾಗಿದೆ ಎನ್ನಲಾಗಿದ್ದು, ಆರು ಪ್ರಕರಣಗಳ ಬಗ್ಗೆಯೂ ಪ್ರತ್ಯೇಕ ಕೇಸು ದಾಖಲಾಗಿದೆ. ಸಿಸಿಬಿ ಪೊಲೀಸರು ತನಿಖೆ ನಡೆಸುತ್ತಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News