ಪೆರ್ವಾಜೆ ಶಾಲಾ ವಿದ್ಯಾರ್ಥಿಗಳಿಗೆ ಇನ್‍ಸ್ಪೈಯರ್ ಅವಾರ್ಡ್

Update: 2021-12-30 12:06 GMT

ಕಾರ್ಕಳ : ಕಾರ್ಕಳ ಸುಂದರ ಪುರಾಣಿಕ ಸ್ಮಾರಕ ಸರಕಾರಿ ಪ್ರೌಢಶಾಲೆ ಪೆರ್ವಾಜೆ ಇಲ್ಲಿನ 10ನೇ ತರಗತಿ ವಿದ್ಯಾರ್ಥಿಗಳಾದ ಅನ್ವಿತ್ ಆರ್. ಸಿಂಗಲ್ ಲೆಡ್ ಇಸಿಜಿ ಎಂಬ ಮಾದರಿಯನ್ನು ತಯಾರಿಸಿ ಇನ್‌ಸ್ಪೈಯರ್‌ ಅವಾರ್ಡ್‌ ಜಿಲ್ಲಾ ಮಟ್ಟಕ್ಕೆ ಆಯ್ಕೆಯಾಗಿರುತ್ತಾರೆ.

ಇದೇ ತರಗತಿಯಲ್ಲಿ ಕಲಿಯುತ್ತಿರುವ ರಕ್ಷಿತಾ ಭಾವಿ ಮಾಡರ್ನ್ ಸೇಫ್ಟಿ ಟ್ರಾನ್ಸ್ ಫಾರ್ಮರ್ ಎಂಬ ಮಾದರಿಯನ್ನು ಪ್ರಸ್ತುತ ಪಡಿಸಿ ಜಿಲ್ಲಾ ಮಟ್ಟಕ್ಕೆ ಆಯ್ಕೆಯಾಗಿರುತ್ತಾರೆ. ವಿಜ್ಞಾನ ಶಿಕ್ಷಕಿ ಶಂಕರಿ ಭಟ್ ವಿದ್ಯಾರ್ಥಿಗಳಿಗೆ ಮಾರ್ಗದರ್ಶನ ನೀಡಿರುತ್ತಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News