ಉಡುಪಿ: ಕಲಾವಿದರ ಮಾಹಿತಿ ಒಳಗೊಂಡ ಯಕ್ಷನಿಧಿ ಡೈರಿ ಬಿಡುಗಡೆ

Update: 2022-01-02 15:07 GMT

ಉಡುಪಿ, ಜ.2: ಉಡುಪಿ ಯಕ್ಷಗಾನ ಕಲಾರಂಗ ವತಿಯಿಂದ ಯಕ್ಷಗಾನ ಕಲಾವಿದರ ವಿಳಾಸ ದೂರವಾಣಿ ಸಂಖ್ಯೆ ಹೊಂದಿರುವ ಯಕ್ಷ ನಿಧಿ ಡೈರಿ- 2022ನ್ನು ಮೂಡಬಿದ್ರೆಯ ಜೈನಮಠದ ಶ್ರೀಚಾರುಕೀರ್ತಿ ಭಟ್ಟಾರಕ ಸ್ವಾಮೀಜಿ ರವಿವಾ ಮಠದಲ್ಲಿ ಬಿಡುಗಡೆ ಮಾಡಿದರು.

ಬಳಿಕ ಮಾತನಾಡಿದ ಅವರು, ಮಠ-ಮಂದಿರಗಳು ಆಧ್ಯಾತ್ಮಿಕ ಅನು ಸಂಧಾನದ ಕಾರ್ಯವನ್ನು ಪೂಜೆ, ಧಾರ್ಮಿಕ ಉಪನ್ಯಾಸಗಳ ಮೂಲಕ ಮಾಡಿ ದರೆ, ಯಕ್ಷಗಾನ ಭಾಗವತ, ಪುರಾಣಾದಿಗಳ ಸಂದೇಶವನ್ನು ಜನಸಾಮಾನ್ಯರಿಗೆ ತಲುಪಿಸುವಲ್ಲಿ ಮಹತ್ವದ ಪಾತ್ರ ವಹಿಸುತ್ತಿದೆ ಎಂದು ಹೇಳಿದರು.

ಮಾಜಿ ಸಚಿವ ಅಭಯಚಂದ್ರ ಜೈನ್, ಉದ್ಯಮಿ ಶ್ರೀಪತಿ ಭಟ್, ಯಕ್ಷಗಾನ ಸಂಘಟಕ ಶಾಂತಾರಾಮ ಕುಡ್ವ, ಉದ್ಯಮಿ ಯು.ವಿಶ್ವನಾಥ ಶೆಣೈ ಮುಖ್ಯ ಅತಿಥಿ ಗಳಾಗಿದ್ದರು. ಸಂಸ್ಥೆಯ ಉಪಾಧ್ಯಕ್ಷ ಎಸ.ವಿ.ಭಟ್, ಪಿ.ಕಿಶನ್ ಹೆಗ್ಡೆ, ಪದಾಧಿ ಕಾರಿಗಳಾದ ಮನೋಹರ ಕೆ., ಎಚ್.ಎನ್.ಶೃಂಗೇಶ್ವರ, ಬಿ.ಭುವನಪ್ರಸಾದ್ ಹೆಗ್ಡೆ, ಅನಂತರಾಜ ಉಪಾಧ್ಯ, ನಟರಾಜ್ ಉಪಾಧ್ಯ, ಕಿಶೋರ್ ಸಿ. ಉದ್ಯಾವರ, ಎಚ್.ಎ್.ವೆಂಕಟೇಶ್ವರ ಉಪಸ್ಥಿತರಿದ್ದರು.

ಕಟೀಲು ಮೇಳದ ಕಲಾವಿದ ಶ್ರೀನಿವಾಸರಿಗೆ ಡೈರಿ ನೀಡಲಾಯಿತು. ಕಲಾವಿದ ದೇವಾನಂದ ಉಪಾಧ್ಯ ಸಹಕರಿಸಿದರು. ಸಂಸ್ಥೆಯ ಅಧ್ಯಕ್ಷ ಎಂ. ಗಂಗಾಧರ ರಾವ್ ಸ್ವಾಗತಿಸಿದರು. ಕಾರ್ಯದರ್ಶಿ ಮುರಲಿ ಕಡೆಕಾರ್ ಪ್ರಸ್ತಾವನೆಯೊಂದಿಗೆ ಕಾರ್ಯಕ್ರಮ ನಿರೂಪಿಸಿದರು. ಜೊತೆ ಕಾರ್ಯದರ್ಶಿ ಪ್ರೊ.ನಾರಾಯಣ ಎಂ.ಹೆಗಡೆ ವಂದಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News