ದ.ಕ. ಜಿಲ್ಲಾ ಕಾಂಗ್ರೆಸ್ ಅಲ್ಪಸಂಖ್ಯಾತರ ನಿಯೋಗ ಮನವಿ

Update: 2022-01-03 14:14 GMT

ಮಂಗಳೂರು, ಜ.3: ಅಲ್ಪಸಂಖ್ಯಾತ ಕ್ರೈಸ್ತ ಸಮುದಾಯದ ಮೇಲೆ ಕೆಲವು ಮತೀಯ ಸಂಘಟನೆಗಳ ದಾಳಿ ಹೆಚ್ಚಿದ್ದು, ಅಂತಹವರ ವಿರುದ್ಧ ಯುಎಪಿಎ ಕಾಯ್ದೆಯಡಿ ಬಂಧಿಸಿ ಕಾನೂನು ಕ್ರಮ ಕೈಗೊಳ್ಳಬೇಕೆಂದು ಆಗ್ರಹಿಸಿ ದ.ಕ. ಜಿಲ್ಲಾ ಕಾಂಗ್ರೆಸ್ ಅಲ್ಪಸಂಖ್ಯಾತ ನಿಯೋಗ ಸೋಮವಾರ ಜಿಲ್ಲಾಧಿಕಾರಿ ಮೂಲಕ ರಾಜ್ಯಪಾಲರಿಗೆ ಮನವಿ ಸಲ್ಲಿಸಿತು.

ಸಂವಿಧಾನ ವಿರೋಧಿ ಮತಾಂತರ ನಿಷೇಧ ಕಾಯ್ದೆ ಜಾರಿ ಮಾಡಬಾರದು, ಕ್ರೈಸ್ತ ಸಮುದಾಯದ ಚರ್ಚ್‌ಗಳ ಮೇಲೆ ನಡೆಯುತ್ತಿರುವ ನಿರಂತರ ದೌರ್ಜನ್ಯಗಳನ್ನು ತಡೆಯಬೇಕು, ಚರ್ಚ್‌ಗಳಿಗೆ ಸೂಕ್ತ ಭದ್ರತೆ ಕಲ್ಪಿಸಿ ಕೊಡಬೇಕು, ಏಸು ಕ್ರಿಸ್ತರ ಪ್ರತಿಮೆಗಳನ್ನು ಭಗ್ನಗೊಳಿಸಿದ ದುಷ್ಕರ್ಮಿಗಳನ್ನು ಗೂಂಡಾ ಕಾಯ್ದೆಯಡಿ ಬಂಧಿಸಿ ನ್ಯಾಯ ಒದಗಿಸಬೇಕು, ಕ್ರೈಸ್ತ ಮಿಷನರಿ ಪಾದ್ರಿಗಳ ಮೇಲೆ ಆಧಾರ ರಹಿತ ಆರೋಪ ಹಾಗೂ ಕೇಸುಗಳನ್ನು ದಾಖಲಿಸುವುದನ್ನು ತಡೆಯಬೇಕು. ಮಂಡ್ಯ ಮತ್ತು ಚಿಕ್ಕಬಳ್ಳಾಪುರ ಜಿಲ್ಲೆಗಳಲ್ಲಿ ಪವಿತ್ರ ಚರ್ಚ್‌ಗಳಿಗೆ ಬೀಗ ಹಾಕಿ ದೌರ್ಜನ್ಯ ಎಸಗಿರುವ ಅಧಿಕಾರಗಳ ಮೇಲೆ ಸೂಕ್ತ ಕಾನೂನು ಕ್ರಮ ಜರುಗಿಸಬೇಕು ಎಂದು ಮನವಿಯಲ್ಲಿ ಒತ್ತಾಯಿಸಲಾಗಿದೆ.

ಈ ಸಂದರ್ಭ ದ.ಕ. ಜಿಲ್ಲಾ ಕಾಂಗ್ರೆಸ್ ಅಲ್ಪಸಂಖ್ಯಾತ ಘಟಕಾಧ್ಯಕ್ಷ ಶಾಹುಲ್ ಹಮೀದ್ ಕೆ.ಕೆ, ಮಾಜಿ ಶಾಸಕ ಜೆ.ಆರ್. ಲೋಬೊ, ಮಾಜಿ ಮೇಯರ್ ಶಶಿಧರ್ ಹೆಗ್ಡೆ, ಕಾರ್ಪೊರೇಟರ್ ರವೂಫ್ ಬಜಾಲ್, ವಿಶ್ವಾಸ್ ಕುಮಾರ್ ದಾಸ್, ಆಲ್ವಿನ್ ಪ್ರಕಾಶ್, ಮಹಮ್ಮದ್ ಬಪ್ಪಳಿಗೆ, ಸವಿತಾ ಮಿಸ್ಕಿತ್, ಟಿ.ಕೆ ಸುಧೀರ್, ಶಮೀರ್ ಸುರತ್ಕಲ್, ಶರೀಫ್ ವಲಾಲ್, ಇಕ್ಬಾಲ್ ಸಾಮಾಣಿಗೆ, ಫಯಾಝ್ ಅಮ್ಮೆಮಾರ್, ಯೋಗೀಶ್ ನಾಯ್ಕ್, ಹೈದರ್ ಬೋಳಾರ್, ಜೆ.ಪಿ.ಎಂ. ಚೆರಿಯನ್, ಇಸ್ಮಾಯಿಲ್ ಬಿ.ಎಸ್, ಲತೀಫ್ ಸುರತ್ಕಲ್, ಯಶವಂತ್ ಪ್ರಭು ಮತ್ತಿತರರು ಉಪಸ್ಥಿತರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News