ಮೊದಲ ದಿನ ಉಡುಪಿ ಜಿಲ್ಲೆಯಲ್ಲಿ 14,500 ಮಂದಿ 15-18ರ ಮಕ್ಕಳಿಗೆ ಲಸಿಕೆ

Update: 2022-01-03 14:20 GMT

ಉಡುಪಿ, ಜ.3: ರಾಜ್ಯದಂತೆ ಜಿಲ್ಲೆಯಲ್ಲೂ ಇಂದಿನಿಂದ 15ರಿಂದ 18 ವರ್ಷದೊಳಗಿನ ಮಕ್ಕಳಿಗೆ ಕೋವಿಡ್ ಲಸಿಕೆ ಕೋವ್ಯಾಕ್ಸಿನ್ ನೀಡಲು ಪ್ರಾರಂಭಿಸಲಾಗಿದ್ದು, ಮೊದಲ ದಿನದಂದು 14,500 ಮಂದಿ ಮಕ್ಕಳಿಗೆ ಲಸಿಕೆಯನ್ನು ಯಶಸ್ವಿಯಾಗಿ ನೀಡಲಾಗಿದೆ ಎಂದು ಆರೋಗ್ಯ ಇಲಾಖೆಯ ಮೂಲಗಳು ತಿಳಿಸಿವೆ.

ಜಿಲ್ಲೆಯಲ್ಲಿ 15ರಿಂದ 18 ವರ್ಷದೊಳಗಿನ ಒಟ್ಟು 53,555 ಮಕ್ಕಳಿಗೆ ಕೋವಿಡ್ ಲಸಿಕೆಯನ್ನು ವಿತರಿಸುವ ಗುರಿಯನ್ನು ಹೊಂದಲಾಗಿದೆ. ಶಾ ೆಯಿಂದ ಹೊರಗಿರುವ ಮಕ್ಕಳನ್ನು ಸಹ ಗುರುತಿಸಿ ಅವರಿಗೆ ಹತ್ತಿರ ಕೇಂದ್ರದಲ್ಲಿ ಲಸಿಕೆ ನೀಡಲು ಅಗತ್ಯ ಕ್ರಮ ಕೈಗೊಳ್ಳಲಾಗುತ್ತಿದೆ ಎಂದು ಡಿಎಚ್‌ಓ ತಿಳಿಸಿದ್ದಾರೆ.

ಒಟ್ಟು 13246 ಮಂದಿಗೆ ಲಸಿಕೆ: ಜಿಲ್ಲೆಯಲ್ಲಿ ಸೋಮವಾರ ಸಂಜೆ 4:30ರವರೆಗೆ ಒಟ್ಟು 13,246 ಮಂದಿ ಕೋವಿಡ್ ಲಸಿಕೆ ಸ್ವೀಕರಿಸಿದ್ದಾರೆ. ಇವರಲ್ಲಿ 8916 ಮಂದಿ 15ರಿಂದ 18ವರ್ಷದ ಮಕ್ಕಳು ಸೇರಿದಂತೆ ಒಟ್ಟು 11,932 ಮಂದಿ ಮೊದಲ ಡೋಸ್ ಹಾಗೂ 1314 ಮಂದಿ ಎರಡನೇ ಡೋಸ್ ಲಸಿಕೆ ಸ್ವೀಕರಿಸಿದ್ದಾರೆ ಎಂದು ಡಿಎಚ್‌ಓ ಡಾ.ನಾಗಭೂಷಣ ಉಡುಪ ತಿಳಿಸಿದ್ದಾರೆ.

ಲಸಿಕೆ ಪಡೆದವರಲ್ಲಿ 18 ವರ್ಷದಿಂದ 44 ವರ್ಷದೊಳಗಿನ 2935 ಮಂದಿ ಮೊದಲ ಡೋಸ್ ಹಾಗೂ 912 ಮಂದಿ ಎರಡನೇ ಡೋಸ್ ಲಸಿಕೆಯನ್ನು ಸ್ವೀಕರಿಸಿದರೆ, 45 ವರ್ಷ ಮೇಲಿನ 81 ಮಂದಿ ಮೊದಲ ಡೋಸ್ ಹಾಗೂ 401 ಮಂದಿ ಎರಡನೇ ಡೋಸ್ ಪಡೆದಿದ್ದಾರೆ. ಓರ್ವ ಆರೋಗ್ಯ ಕಾರ್ಯಕರ್ತರೂ ಎರಡನೇ ಡೋಸ್ ಲಸಿಕೆ ಸ್ವೀಕರಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News