ಜ್ಯುವೆಲ್ಲರಿ ಮಾಲಕನಿಗೆ ನೌಕರನಿಂದ ವಂಚನೆ: ದೂರು

Update: 2022-01-05 16:34 GMT

ಬೈಂದೂರು, ಜ.5: ಜುವೆಲ್ಲರಿ ಅಂಗಡಿಯ ನೌಕರ, ಮಾಲಕರ ನಂಬಿಕಗೆ ದ್ರೋಹ ಎಸಗಿ, ಅಂಗಡಿಯಲ್ಲಿದ್ದ ಚಿನ್ನಾಭರಣ ಹಾಗೂ ಹಣವನ್ನು ಲಪಟಾ ಯಿಸಿ, ದುರುಪಯೋಗಪಡಿಸಿಕೊಂಡು ಮೋಸ ಹಾಗೂ ವಂಚನೆ ಎಸಗಿರುವ ಬಗ್ಗೆ ಬೈಂದೂರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಉಪ್ಪುಂದ ಗ್ರಾಪಂ ಕಟ್ಟಡದಲ್ಲಿರುವ ಉಡುಪಿ ಪಿಪಿಸಿಯ ನಿತ್ಯಾನಂದ ಶೇಟ್ ಎಂಬವರ ಮಾರುತಿ ಗೋಲ್ಡ್ ಜ್ಯುವೆಲ್ಲರ್ಸ್‌ನ ವ್ಯವಹಾರವನ್ನು ಗಿರೀಶ್ ಶೇಟ್ ನೋಡಿಕೊಳ್ಳುತ್ತಿದ್ದರು. ಮಳಿಗೆಯಲ್ಲಿ 2021ರ ಎ.1ರಿಂದ ಡಿ.31ರವರೆಗೆ 3,35,73,197ರೂ. ಮೌಲ್ಯದ ಚಿನ್ನಾಭರಣ ಮಾರಾಟವಾಗಿದ್ದು ಅದರ ಪೈಕಿ ಗ್ರಾಹಕರಿಂದ 1,20,83,175ರೂ. ಹಣ ಬಂದಿದೆ. ಇದರಲ್ಲಿ ಗಿರೀಶ್ ಶೇಟ್ 61,83,175ರೂ. ಹಣವನ್ನು ಬ್ಯಾಂಕ್ ಖಾತೆಗೆ ಜಮೆ ಮಾಡಿದ್ದು ಬಾಕಿ 59,00,000ರೂ. ಹಣವನ್ನು ಪಾವತಿಸಿರುವುದಿಲ್ಲ ಎಂದು ದೂರಲಾಗಿದೆ.

ಅದೇ ರೀತಿ ಗಿರೀಶ್ ಮಾರಾಟ ಮಾಡಿದ ಚಿನ್ನಾಭರಣಗಳಲ್ಲಿ ಮಾಲಕರ ಅನುಮತಿಯಿಲ್ಲದೇ ಮನ ಬಂದಂತೆ ತಾನೇ ನಿರ್ಧಾರ ಕೈಗೊಂಡು 69,86,000 ರೂ. ಹಣವನ್ನು ಗ್ರಾಹಕರಲ್ಲಿ ಬಾಕಿ ನಿಲ್ಲಿಸಿದ್ದು, ಒಟ್ಟು 1,28,86,000ರೂ. ಹಣವನ್ನು ನೀಡಲು ಬಾಕಿ ಇದೆ ಎಂದು ದೂರಿನಲ್ಲಿ ತಿಳಿಸಲಾಗಿದೆ.

ನಿತ್ಯಾನಂದ ಶೇಟ್‌ಗೆ ವಂಚಿಸಿದ ಹಣ ಹಾಗೂ ಚಿನ್ನಾಭರಣಗಳನ್ನು ಆರೋಪಿ, ವೆಂಕಟೇಶ್ ಶೇಟ್(44) ಹಾಗೂ ಹರೀಶ್ ಶೇಟ್(35) ಜೊತೆ ಸೇರಿ ಬೆಂಗಳೂರಿಗೆ ಸಾಗಿಸಿರುವ ಬಗ್ಗೆ ಸಂಶಯ ವ್ಯಕ್ತಪಡಿಸಿ ದೂರು ನೀಡ ಲಾಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News