ಮಂಗಳೂರು: ಪುನೀತ್ ರಾಜ್‌ ಕುಮಾರ್‌ಗೆ ಸ್ವರ ನಮನ

Update: 2022-01-08 16:29 GMT

ಮಂಗಳೂರು, ಜ 8: ಮಂಜುನಾಥ್ ಎಜುಕೇಶನ್ ಟ್ರಸ್ಟ್ ರಿ. ಮಂಗಳೂರು, ಎಸ್. ಕೆ. ಮುನಿಸಿಪಲ್ ಎಂಪ್ಲಾಯಿಸ್ ಯೂನಿಯನ್ (ರಿ), ಮಂಗಳೂರು ಮಹಾನಗರ ಪಾಲಿಕೆ ಹಾಗು ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಮಂಗಳೂರು ಇವರ ಸಂಯುಕ್ತ ಆಶ್ರಯದಲ್ಲಿ 28ನೇ ಅಂತರರಾಷ್ಟ್ರೀಯ ವಿಹಾರ ನೌಕೆ ಸಾಂಸ್ಕೃತಿಕ ಸೌರಭ ಮತ್ತು ಪುನೀತ ಸ್ವರ ನಮನ ಕಾರ್ಯಕ್ರಮ ಇತ್ತೀಚೆಗೆ ನಡೆಯಿತು.

ಗಾಯಕರಾದ ರಕ್ಷತಾ ಭಟ್, ಆದಿತ್ಯ ಕರ್ಕೇರ, ಶಿವರಾಜ್ ಪಾಂಡೇಶ್ವರ, ಮಾಧವಿ ಬೆಂಗಳೂರು, ಸಂದ್ಯಾ ಕೆ.ಬಿ ಮತ್ತು ಬೇಬಿ ಭ್ರಾಮರಿ ಅವರು ಪುನೀತ್ ರಾಜ್ ಕುಮಾರ್ ಹಾಡಿದ ಮತ್ತು ಅವರ ಚಲನಚಿತ್ರದ ಹಾಡುಗಳನ್ನು ಹಾಡಿದರು.

ಮನಪಾ ಉಪ ಮೇಯರ್ ಸುಮಂಗಳ ಭಟ್ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು. ಮಂಗಳೂರು ವಾಣಿಜ್ಯ ತೆರಿಗೆ ಉಪ ಆಯುಕ್ತ ಹೆಚ್. ಹೊಳೆಯಪ್ಪಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿದರು. ಅತಿಥಿಯಾಗಿ ಮಹಾನಗರ ಪಾಲಿಕೆ ಮತ್ತು ಬಿಬಿಎಂಪಿ ನೌಕರರ ಕ್ಷೇಮಾಭಿವೃದ್ಧಿ ಸಂಘದ ರಾಜ್ಯಾಧ್ಯಕ್ಷ ಅಮೃತ್ ರಾಜ್ ಭಾಗವಹಿಸಿದ್ದರು.

ಸೌರಭ ಪರಿಷತ್ತ್ ಅಧ್ಯಕ್ಷ ಕೆ. ಪಿ. ಮಂಜುನಾಥ್ ಸಾಗರ್ ಪ್ರಾಸ್ತಾವಿಕ ಮಾತುಗಳನ್ನಾಡಿದರು. ನಿವೃತ್ತ ಐಎಫ್‌ಎಸ್ ಅಧಿಕಾರಿ ಕೆ. ವಿ. ಮೂರ್ತಿ ಬೆಂಗಳೂರು, ಲೇಖಕಿ ಡಾ. ಪ್ರಭಾ ಸುವರ್ಣ, ಪುತ್ತೂರು ಸಾಹಿತ್ಯ ವೇದಿಕೆ ಅಧ್ಯಕ್ಷ ಗೋಪಾಲ ಕೃಷ್ಣ ಭಟ್ ಕಟ್ಟಂತಿಲ, ಎಸ್.ಕೆ. ಮುನಿಸಿಪಲ್ ಎಂಪ್ಲಾಯೀಸ್ ಯೂನಿಯನ್ ಅಧ್ಯಕ್ಷ ಬಾಲರಾಜ್ ವೇದಿಕೆಯಲ್ಲಿ ಉಪಸ್ಥಿತರಿದ್ದರು.

ವಿವಿಧ ಕ್ಷೇತ್ರಗಳಲ್ಲಿ ಸಾಧನೆ ಮಾಡಿದ ಎನ್.ಪಿ ಸುವರ್ಣ ಮುಂಬೈ ತಬಸುಮ್ ಕೊಣಾಜೆ, ಡಾ. ಎಂ ಮುರಳಿ ಕುಮಾರ್, ಅಮೃತ್ ರಾಜ್ ಬೆಂಗಳೂರು ಅವರಿಗೆ ಕರ್ನಾಟಕ ಸೌರಭ ಪ್ರಶಸ್ತಿ ನೀಡಿ ಗೌರವಿಸಲಾಯಿತು.

ಬೆಂಗಳೂರಿನ ಯಶೋಧ ಪಪೆಟ್ರಿ ತಂಡದಿಂದ ತೊಗಲು ಬೊಂಬೆಯಾಟ, ದಾವಣಗೆರೆಯ ನಮನ ಅಕಾಡಮಿ ಕಲಾವಿದರಿಂದ ಭರತ ನಾಟ್ಯ, ಮಾಧವಿ ಡಿ.ಕೆ ಮತ್ತು ತಂಡದಿಂದ ಜಾನಪದ ನೃತ್ಯ ರಹ್ಮಾನ್ ಕೊಣಾಜೆ ಅವರ ಮಿಮಿಕ್ರಿ ನಡೆಯಿತು, ಲೀಲಾಧರ ಬೈಕಂಪಾಡಿ ಮತ್ತು ರವಿ ಎಂ ಕಾರ್ಯಕ್ರಮ ನಿರೂಪಣೆ ಮಾಡಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News