ಯೆನೆಪೋಯ ಆಸ್ಪತ್ರೆಯಿಂದ ಯುವತಿಗೆ ಶಸ್ತ್ರ ಚಿಕಿತ್ಸೆ

Update: 2022-01-19 15:53 GMT

ಮಂಗಳೂರು, ಜ.19: ಮಾರಣಾಂತಿಕ ಖಾಯಿಲೆಯಿಂದ ಬಳಲುತ್ತಿದ್ದ ಬಂಟ್ವಾಳ ಮೂಲದ 23 ವರ್ಷದ ಯುವತಿಯೊಬ್ಬರಿಗೆ ದೇರಳಕಟ್ಟೆಯ ಯೆನೆಪೋಯ ವೈದ್ಯಕೀಯ ಕಾಲೇಜು ಆಸ್ಪತ್ರೆಯ ವೈದ್ಯರು ಯಶಸ್ವಿ ಶಸಚಿಕಿತ್ಸೆ ನಡೆಸಿದ್ದಾರೆ.

ಹೃದಯ ಸಮಸ್ಯೆ, ಮೂತ್ರಪಿಂಡ ಮತ್ತು ರಕ್ತದ ಅಸ್ವಸ್ಥತೆಯ ಮಾರಣಾಂತಿಕ ಕಾಯಿಲೆಯಿಂದ ಯುವತಿ ಬಳಲುತ್ತಿದ್ದರು. ಯುವತಿ ಡಯಾಲಿಸಿಸ್‌ನಲ್ಲಿದ್ದ ಕಾರಣ ಪ್ರಮುಖ ಶಸಚಿಕಿತ್ಸೆ ನಡೆಸಲು ಕಷ್ಟವಾಗಿತ್ತು. ಈ ಹಿನ್ನೆಲೆಯಲ್ಲಿ ಯೆನೆಪೋಯ ಆಸ್ಪತ್ರೆ ವೈದ್ಯರನ್ನು ಭೇಟಿಯಾದರು.

ಆ ವೇಳೆ ಆಸ್ಪತ್ರೆಯ ಮೂತ್ರಶಾಸ ತಜ್ಞರು, ಹೃದ್ರೋಗ ತಜ್ಞರು, ಕಾರ್ಡಿಯೋಥೊರಾಸಿಕ್ ಸರ್ಜನ್ ಮತ್ತು ಅರಿವಳಿಕೆ ತಜ್ಞರ ತಂಡ ಅವರ ಖಾಯಿಲೆಯ ಸ್ಥಿತಿಗತಿಯನ್ನು ಪರಿಶೀಲನೆ ಮಾಡಿದರು. ಈ ವೇಳೆ ಯುವತಿಯ ತಾಯಿ ಕಿಡ್ನಿ ದಾನ ಮಾಡಲು ಮುಂದಾಗಿದ್ದು, ಇದೀಗ ಯಶಸ್ವಿ ಕಿಡ್ನಿ ಕಸಿ ನಡೆಸಲಾಗಿದೆ. ಅವರು ಸದ್ಯ ಮೂತ್ರಪಿಂಡ, ಹೃದಯ ಮತ್ತು ಹೆಮಟೊಲಾಜಿಕಲ್ ಸಮಸ್ಯೆಯಿಂದ ಮುಕ್ತರಾಗಿದ್ದು, ಮತ್ತೆ ಕೆಲಸಕ್ಕೆ ಮರಳಿದ್ದಾರೆ ಎಂದು ಆಸ್ಪತ್ರೆಯ ಮೂತ್ರಶಾಸ ತಜ್ಞ ಡಾ. ಮುಜೀಬುರಾಹಿಮಾನ್ ಬುಧವಾರ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.

ವೈದ್ಯರಾದ ಡಾ. ಮುಜೀಬುರಾಹಿಮಾನ್, ಡಾ. ಅಲ್ತ್ಾ ಖಾನ್, ಡಾ. ನಿಶ್ಚಿತ್, ನ್ರೆಾಲಜಿಸ್ಟ್‌ಗಳಾದ ಡಾ. ಸಂತೋಷ್ ಪೈ, ಡಾ. ಹೈಸಮ್, ಡಾ. ತಿಪ್ಪೇಸ್ವಾಮಿ, ಡಾ. ಐಜಾಜ್, ಡಾ. ಪ್ರಶಾಂತ್, ಡಾ. ಗಣೇಶ್ ಕಾಮತ್ ಮತ್ತು ಡಾ. ಶಕ್ತಿವೇಲ್ ಅವರ ತಂಡ ಯಶಸ್ವಿ ಶಸಚಿಕಿತ್ಸೆಗೆ ಸಹಕರಿಸಿದ್ದಾರೆ. ಯೆನೆಪೋಯ ವೈದ್ಯಕೀಯ ಕಾಲೇಜಿನಲ್ಲಿ ಲಭ್ಯವಿರುವ ಸುಧಾರಿತ ವೈದ್ಯಕೀಯ ಮೂಲಸೌಕರ್ಯ ಮತ್ತು ಪರಿಣತ ವೈದ್ಯರಿರುವ ಕಾರಣ ಈ ಶಸಚಿಕಿತ್ಸೆ ಯಶಸ್ವಿಯಾಯಿತು. ಯೆನೆಪೊಯ ವೈದ್ಯಕೀಯ ಕಾಲೇಜು ಸುಧಾರಿತ ವೈದ್ಯಕೀಯ ಉಪಕರಣ ಮತ್ತು ಸೂಪರ್ ಸ್ಪೆಷಾಲಿಟಿ ವೈದ್ಯರನ್ನು ಒಳಗೊಂಡಿದೆ. ಈ ರೀತಿಯ ಶಸಚಿಕಿತ್ಸೆಯನ್ನು ರಿಯಾಯಿತಿ ದರದಲ್ಲಿ ಮಾಡಲಾಗುತ್ತದೆ ಎಂದರು.

ಡಾ. ಸಂತೋಷ್ ಪೈ, ಡಾ. ಅಲ್ತಾಫ್ ಖಾನ್ ಮತ್ತು ಸಂಯೋಜಕ ನೆಲ್ವಿನ್ ನೆಲ್ಸನ್ ಉಪಸ್ಥಿತರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News