ಹಿಜಾಬ್ ವಿವಾದ ಇತ್ಯರ್ಥಗೊಳಿಸುವಂತೆ ಬಹುಜನ ಕ್ರಾಂತಿ ಮೋರ್ಚಾ ಆಗ್ರಹ

Update: 2022-02-05 13:02 GMT

ಕುಂದಾಪುರ, ಫೆ.5: ಹಿಜಾಬ್ ವಿವಾದವನ್ನು ನ್ಯಾಯ ಸಮ್ಮತವಾಗಿ ಇತ್ಯರ್ಥ ಗೊಳಿಸುವಂತೆ ಬಹುಜನ ಕ್ರಾಂತಿ ಮೋರ್ಚಾ ಕರ್ನಾಟಕ ಕುಂದಾಪುರ ಸರಕಾರಿ ಜ್ಯೂನಿಯರ್ ಕಾಲೇಜಿನ ಪ್ರಾಂಶುಪಾರನ್ನು ಆಗ್ರಹಿಸಿದೆ.

ವಿವಾದವನ್ನು ಸೃಷ್ಟಿಸಲೇಂದೆ ಕೆಲವೊಂದು ವಿದ್ಯಾರ್ಥಿಗಳು ಕೇಸರಿ ಶಾಲು ಧರಿಸಿ ಬಂದದನ್ನು ನೆಪವಾಗಿ ಇಟ್ಟುಕೊಂಡು, ಅಲ್ಪಸಂಖ್ಯಾತ ಸಮುದಾಯಕ್ಕೆ ಸೇರಿದ ಹೆಣ್ಣು ಮಕ್ಕಳಿಗೆ ಅವರ ಧಾರ್ಮಿಕ ನಿಯಮಾನುಸಾರ ಜಾರಿಯಲ್ಲಿರುವ ಶಿರವಸ್ತ್ರ ಧರಿಸಲು ಅವಕಾಶ ನೀಡದೆ, ತರಗತಿಯಿಂದ ಹೊರಗಿಟ್ಟು ಶಿಕ್ಷಣದಿಂದ ವಂಚಿತರನ್ನಾಗಿ ಮಾಡಿರುವುದು ಸರಿಯಲ್ಲ. ಶಿರವಸ್ತ್ರ ಧರಿಸುವುದು ವಿದ್ಯಾರ್ಥಿನಿಯರ ಸಾಂವಿಧಾನಿಕ ಹಕ್ಕಾಗಿದ್ದು ಅದನ್ನು ನಿರಾಕರಿಸುವ ಅಥವಾ ಕಸಿದುಕೊಳ್ಳುವ ಅಧಿಕಾರ ಯಾವುದೇ ಶಿಕ್ಷಣ ಸಂಸ್ಥೆ ಅಥವಾ ಅಲ್ಲಿನ ಅಧಿಕಾರಿಗಳಿಗೆ ಸಂವಿಧಾನ ನೀಡಿರಿವುದಿಲ್ಲ. ಹೈಕೋರ್ಟ್ ಆದೇಶ ಬರಲು ಇನ್ನೇನೂ ಕೆಲವೇ ದಿನಗಳು ಬಾಕಿ ಇದ್ದು ತಾವೂ ಕಾನೂನನ್ನು ಕೈಗೆತ್ತಿಕೊಂಡು ಶಾಲಾ ಗೇಟ್ ಬಂದ್ ಮಾಡುವ ಮೂಲ ಹೈಕೋರ್ಟ್‌ನ್ನು ನಿಂದಿಸುವ ಕೆಲಸ ಮಾಡುತ್ತಿರುವುದು ಸ್ಪಷ್ಟವಾಗಿ ಗೋಚರಿಸುತ್ತಿದೆ.

ಹೆಣ್ಣು ಮಕ್ಕಳಿಗೆ ಅಮಾನವೀಯ ರೀತಿಯಲ್ಲಿ ಗೇಟ್ನಿಂದ ಹೊರಗಿಟ್ಟಿರು ವುದು ಪ್ರಾಂಶುಪಾಲರ ಹುದ್ದೆಗೆ ಅಗೌರವ ಸೂಚಿಸಿದಂತಾಗಿದೆ. ಆದ್ದರಿಂದ ತಾವುಗಳು ಈ ವಿವಾದವನ್ನು ಆದಷ್ಟು ಬೇಗ ಇತ್ಯರ್ಥಗೊಳಿಸಿ ಹೆಣ್ಣು ವುಕ್ಕಳಿಗೆ ನ್ಯಾಯ ಒದಗಿಸಿಕೊಡಬೇಕು. ಈ ವಿವಾದದ ಬಗ್ಗೆ ಸರಿಯಾದ ಕ್ರಮ ಕೈಗೊಳ್ಳಲು ವಿಫಲರಾದಲ್ಲಿ ಹೈಕೋರ್ಟ್‌ ನಲ್ಲಿ ತಮ್ಮ ವಿರುದ್ದ ಸಂಘಟನೆಯ ವತಿಯಿಂದ ದಾವೆ ಹೂಡುವ ಅನಿವಾರ್ಯತೆ ಒದಗಿ ಬರಲಿದೆ ರಾಜ್ಯ ಸಂಯೋಜಕ ಉದಯ ಕುವಾರ್ ತಲ್ಲೂರು ಎಚ್ಚರಿಕೆ ನೀಡಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News