ಫೆ.26ರಂದು ಕೊಂಕಣಿ ಭವನಕ್ಕೆ ಶಿಲಾನ್ಯಾಸ

Update: 2022-02-23 10:18 GMT

ಮಂಗಳೂರು, ಫೆ. 23: ಕರ್ನಾಟಕ ಕೊಂಕಣಿ ಸಾಹಿತ್ಯ ಅಕಾಡಮಿಯ ಕೊಂಕಣಿ ಭವನ ನಿರ್ಮಾಣ ಕಾಮಗಾರಿಗೆ ಫೆ. 26ರಂದು ಶಿಲಾನ್ಯಾಸ ನೆರವೇರಲಿದೆ.

ಸುದ್ದಿಗೋಷ್ಠಿಯಲ್ಲಿಂದು ಈ ವಿಷಯ ತಿಳಿಸಿದ ಅಕಾಡಮಿ ಅಧ್ಯಕ್ಷ ಡಾ.ಜಗದೀಶ್ ಪೈ, ಮಂಗಳೂರಿನ ಉರ್ವಾಸ್ಟೋರ್‌ನಲ್ಲಿ ಅಂದು ಪೂರ್ವಾಹ್ನ 11 ಗಂಟೆಗೆ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಚಿವ ಸುನೀಲ್ ಕುಮಾರ್ ಶಿಲಾನ್ಯಾಸ ನೆರವೇರಿಸಲಿರುವರು ಎಂದರು.

35 ಸೆಂಟ್ಸ್ ಜಾಗದಲ್ಲಿ 4,735 ಚದರ ಅಡಿಯ ಕೊಂಕಣಿ ಭವನ ನಿರ್ಮಾಣವಾಗಲಿದೆ. ನೆಲಮಹಡಿ ಹಾಗೂ ಎರಡು ಮಹಡಿಗಳನ್ನು ಇದು ಹೊಂದಲಿದ್ದು, ನೆಲ ಮಹಡಿಯಲ್ಲಿ ವಾಹನ ನಿಲುಗಡೆ, 1ನೇ ಮಹಡಿಯಲ್ಲಿ ಆಡಳಿತಾತ್ಮಕ ಕಚೇರಿ ಹಾಗೂ ಗ್ರಂಥಾಲಯ, 2ನೇ ಮಹಡಿಯಲ್ಲಿ ಸಭಾಂಗಣ ಮತ್ತು ವಸ್ತು ಸಂಗ್ರಹಾಲಯಕ್ಕೆ ಅವಕಾಶ ಕಲ್ಪಿಸಲಾಗುವುದು ಎಂದು ಅವರು ಹೇಳಿದರು.

ಸುಮಾರು 3 ಕೋಟಿ ರೂ. ವೆಚ್ಚದಲ್ಲಿ ಶೀಘ್ರದಲ್ಲಿ ಕೊಂಕಣಿ ಭವನ ನಿರ್ಮಾಣವಾಗಲಿದೆ ಎಂದು ಅವರು ಹೇಳಿದರು.

ಸುದ್ದಿಗೋಷ್ಠಿಯಲ್ಲಿ ರಿಜಿಸ್ಟ್ರಾರ್ ಆರ್. ಮನೋಹರ ಕಾಮತ್, ಸದಸ್ಯರಾದ ಕೆನ್ಯುಟ್ ಜೀವನ್ ಪಿಂಟೋ, ಸಾಣೂರು ನರಸಿಂಹ ಕಾಮತ್, ಗೋಪಾಲಕೃಷ್ಣ ಭಟ್ ಉಪಸ್ಥಿತರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News