ಹಿಜಾಬಿಗೆ ವಿರೋಧ; ಪ್ರಾಂಶುಪಾಲ ವಿರುದ್ಧ ಕ್ರಮಕ್ಕೆ ಒತ್ತಾಯಿಸಿ ಪ್ರತಿಭಟನೆ

Update: 2022-03-02 17:54 GMT

ಭಟ್ಕಳ: ಹಿಜಾಬ್ ವಿವಾದಕ್ಕೆ ಕಾರಣೀಕರ್ತ ಉಡುಪಿಯ ಸರ್ಕಾರಿ ಪದವಿಪೂರ್ವ ಕಾಲೇಜಿನ ಪ್ರಾಂಶುಪಾಲ ರುದ್ರೇಗೌಡರ ವಿರುದ್ಧ ಕಠಿಣ ಕ್ರಮ ಜರಗಿಸುವಂತೆ ಹಾಗೂ ಹಿಜಾಬ್ ವಿವಾದದಿಂದ ಪರೀಕ್ಷೆಗಳಿಂದ ವಂಚಿತ ವಿದ್ಯಾರ್ಥಿಗಳಿಗೆ ಮರುಪರೀಕ್ಷೆ ನಡೆಸುವಂತೆ ಆಗ್ರಹಿಸಿ ಭಟ್ಕಳದ ಮುಸ್ಲಿಮ್ ಯುತ್ ಫೆಡರೇಶನ್ ವತಿಯಿಂದ ಬುಧವಾರ ಬೃಹತ್ ಪ್ರತಿಭಟನಾ ಮೆರವಣೆ ನಡೆಸಿ ಸಹಾಯಕ ಆಯುಕ್ತರ ಮೂಲಕ ಮುಖ್ಯಮಂತ್ರಿಗಳಿಗೆ ಮನವಿಯನ್ನು ಅರ್ಪಿಸಿಲಾಯಿತು.

ರಾಜ್ಯದಲ್ಲಿ ಹಿಜಾಬ್ ವಿವಾದ ಹುಟ್ಟಲು ಉಡುಪಿ ಸರ್ಕಾರಿ ಪಿ.ಯು.ಕಾಲೇಜಿನ ಪ್ರಾಂಶುಪಾಲ ರುದ್ರೆಗೌಡರೆ ನೇರ ಕಾರಣರಾಗಿದ್ದು ಅವರ ಅನುಚಿತ ವರ್ತನೆಯಿಂದಾಗಿ ಹಿಜಾಬ್ ಸಮಸ್ಯೆ ಹುಟ್ಟಿಕೊಂಡಿದೆ. ಇದನ್ನೂ ಭಟ್ಕಳದ ಮುಸ್ಲಿಮ್ ಯುತ್ ಫೆಡರೇಶನ್ ತೀವ್ರವಾಗಿ ಖಂಡಿಸುತ್ತದೆ ಎಂದು ಮನವಿ ಪತ್ರದಲ್ಲಿ ತಿಳಿಲಾಗಿದೆ.

ಕಳೆದ ಎರಡು ದಿನಗಳ ಹಿಂದೆ ನಡೆದ ಪದವಿಪೂರ್ವ ಕಾಲೇಜಿನ ಪ್ರಾಯೋಗಿ ಪರೀಕ್ಷೆಯಿಂದ ವಿದ್ಯಾರ್ಥಿಗಳನ್ನು ವಂಚಿತರನ್ನಾಗಿ ಮಾಡಿದ ಈ ಪ್ರಾಂಶುಪಾಲನ ವಿರುದ್ಧ ಸರ್ಕಾರ ಕಠಿಣ ಕ್ರಮ ಕೈಗೊಳ್ಳಬೇಕು. ಅಲ್ಲದೆ ಪರೀಕ್ಷೆಗಳಿಂದ ವಂಚಿತ ವಿದ್ಯಾರ್ಥಿಗಳಿಗೆ ಮರುಪರೀಕ್ಷೆಯನ್ನು ನಡೆಸಬೇಕೆಂದು ಮನವಿ ಪತ್ರದಲ್ಲಿ ಆಗ್ರಹಿಸಲಾಗಿದೆ.

ಈ ಸಂದರ್ಭ ಭಟ್ಕಳ ಮುಸ್ಲಿಮ್ ಯುತ್‍ಫೆಡರೇಶನ್ ಅಧ್ಯಕ್ಷ ಅಝೀಝುರ್ರಹ್ಮಾನ್ ನದ್ವಿ ರುಕ್ನುದ್ದೀನ್ ಮಾತನಾಡಿದರು. 

ಸಹಾಯಕ ಆಯುಕ್ತೆ ಮಮತಾದೇವಿ ಮನವಿ ಸ್ವೀಕರಿಸಿದರು. ತಹಶೀಲ್ದಾರ್ ಅಶೋಕ್ ಭಟ್, ಸಿಪಿಐ ದಿವಾಕರ್, ಬಿಎಂವೈಎಫ್ ಮುಖಂಡರಾದ ಮೌಲಾನಾ ವಸೀವುಲ್ಲಾ ಡಿಎಫ್, ಖೈಸರ್ ಮೊಹ್ತಿಶಾಮ್, ಇಸ್ಮಾಯಿಲ್ ಇಮ್ಶಾದ್ ಮುಕ್ತೇಸರ ಸೇರಿದಂತೆ ಹಲವರು ಉಪಸ್ಥಿತರಿದ್ದರು. 

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News