ಕಾಸರಗೋಡು; ಕಾರು ಸಹಿತ ನಗ-ನಗದು ಕಳವು ಪ್ರಕರಣ: ಇಬ್ಬರ ಬಂಧನ

Update: 2022-03-09 07:30 GMT

ಕಾಸರಗೋಡು : ಮನೆಗೆ ನುಗ್ಗಿ ಕಳವು ನಡೆಸಿದ್ದ ಪ್ರಕರಣಕ್ಕೆ ಸಂಬಂಧಪಟ್ಟಂತೆ ಇಬ್ಬರನ್ನು ಕುಂಬಳೆ ಪೊಲೀಸರು ಬಂಧಿಸಿದ್ದಾರೆ.

ಸೊಂಕಾಲ್ ನ ಗಲ್ಫ್ ಉದ್ಯೋಗಿ ಜಿ.ಎಂ. ಅಬ್ದುಲ್ಲಾ ಎಂಬವರ ಮನೆಗೆ ನುಗ್ಗಿ ಕಳವು ನಡೆಸಿದ್ದ ಪ್ರಕರಣಕ್ಕೆ ಸಂಬಂಧಿಸಿ ಉಪ್ಪಳ ಮಜಿಬೈಲ್ ನ ನಿತಿನ್ ಕುಮಾರ್ (48), ಆಲುವಾ ಕುರುಮ್ಮಶ್ಯೇರಿಯ ಅಬ್ದುಲ್  ಜಲಾಲ್ (49) ಎಂಬವರನ್ನು ಪೊಲೀಸರು ಬಂಧಿಸಿದ್ದಾರೆ.

ಜ.14 ರಂದು ಕೃತ್ಯ ನಡೆದಿತ್ತು. ಮನೆಯವರು ಬೀಗ ಹಾಕಿ ಹೊರಗೆ ಹೋಗಿದ್ದ ಸಂದರ್ಭ ಬೀಗ ಮುರಿದು ಒಳ ನುಗ್ಗಿದ್ದ ದುಷ್ಕರ್ಮಿಗಳು ಕಳವು ನಡೆಸಿದ್ದರು.

ಕಾರು, ಲಕ್ಷಾಂತರ  ರೂ. ಬೆಲೆ ಬಾಳುವ ವಾಚ್ ಹಾಗೂ ಇನ್ನಿತರ ವಸ್ತುಗಳನ್ನು ಕಳವು ಮಾಡಲಾಗಿತ್ತು. ಎರಡು ವಾಚ್ ಗಳನ್ನು ಆರೋಪಿಗಳ ಬಳಿಯಿಂದ ವಶಪಡಿಸಿಕೊಳ್ಳಲಾಗಿದೆ. ಕಾರು ಸೇರಿದಂತೆ ಕಳವು ಮಾಡಲಾದ ಇನ್ನಿತರ ಸೊತ್ತುಗಳನ್ನು ವಶಪಡಿಸಿಕೊಳ್ಳಬೇಕಿದ್ದು, ಈ ಬಗ್ಗೆ ತನಿಖೆ ನಡೆಯುತ್ತಿದೆ ಎಂದು ಪೊಲೀಸರು ತಿಳಿಸಿದ್ದಾರೆ. 

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News