ಕಾಸರಗೋಡು: ಕಡಿದು ಬಿದ್ದಿದ್ದ ವಿದ್ಯುತ್ ತಂತಿ ತಗುಲಿ ಕಾಂಗ್ರೆಸ್ ಮುಖಂಡ ಮೃತ್ಯು

Update: 2022-04-06 14:48 GMT

ಕಾಸರಗೋಡು :  ಕಡಿದು ಬಿದ್ದಿದ್ದ ವಿದ್ಯುತ್ ತಂತಿ ತಗುಲಿ ಕಾಂಗ್ರೆಸ್ ಮುಖಂಡರೋರ್ವರು ಮೃತಪಟ್ಟ ದಾರುಣ ಘಟನೆ ಕಾಞ೦ಗಾಡ್ ನ  ಮಣಿಯಾಟ್ ನಲ್ಲಿ  ಬುಧವಾರ ಸಂಜೆ ನಡೆದಿದೆ.

ಕಾಞ೦ಗಾಡ್  ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ   ಡಿ.ವಿ ಬಾಲಕೃಷ್ಣನ್ (64) ಮೃತಪಟ್ಟವರು.

ಸ್ಕೂಟರ್ ನಲ್ಲಿ ತೆರಳುತ್ತಿದ್ದಾಗ ರಸ್ತೆಯಲ್ಲಿ ಕಡಿದು ಬಿದ್ದಿದ್ದ ತಂತಿ ತಗುಲಿ ದುರ್ಘಟನೆ ನಡೆದಿದೆ. ಸಂಜೆ ಭಾರೀ ಗಾಳಿಗೆ ವಿದ್ಯುತ್ ತಂತಿ ಕಡಿದು ಬಿದ್ದಿದ್ದು, ಈ ರಸ್ತೆಯಾಗಿ ಬರುತ್ತಿದ್ದ ಬಾಲಕೃಷ್ಣ ಅವರ ಸ್ಕೂಟರ್  ತಂತಿಗೆ ತಗುಲಿ ಈ ಘಟನೆ ನಡೆದಿದೆ.

ಜೊತೆಗಿದ್ದ ಮೊಮ್ಮಗಳು ಅಪಾಯದಿಂದ ಪಾರಾಗಿದ್ದಾರೆ. ಬಾಲಕೃಷ್ಣನ್ ಸ್ಥಳದಲ್ಲೇ ಮೃತಪಟ್ಟಿದ್ದಾರೆ. ಮಗಳ ಮನೆಗೆ ಬಂದು ಮರಳುತ್ತಿದ್ದಾಗ ಈ ಘಟನೆ ನಡೆದಿದೆ. ಮೃತದೇಹವನ್ನು ಜಿಲ್ಲಾಸ್ಪತ್ರೆಯ ಶವಗಾರದಲ್ಲಿರಿಸಲಾಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News