ಈದುಲ್ ಫಿತ್ರ್; ಕಾಪುವಿನಲ್ಲಿ ಮುಸ್ಲಿಮ್ ಒಕ್ಕೂಟದ ವತಿಯಿಂದ ವ್ಯಾಪಾರ ಮಳಿಗೆಗಳಿಗೆ ಸಿಹಿ ಹಂಚಿಕೆ

Update: 2022-05-03 11:40 GMT

ಕಾಪು  : ಈದುಲ್ ಫಿತ್ರ್ ನಮಾಝ್ ನಿರ್ವಹಿಸಿ, ಉಡುಪಿ ಜಿಲ್ಲಾ ಮುಸ್ಲಿಮ್ ಒಕ್ಕೂಟದ ಕಾಪು ತಂಡವು ಕಾಪು ತಾಲೂಕು ಅಧ್ಯಕ್ಷ‌ ಶಬೀಹ್ ಅಹ್ಮದ್ ಕಾಝಿ ನೇತೃತ್ವದಲ್ಲಿ ಕಾಪುವಿನ ವೃತ್ತ ನಿರೀಕ್ಷಕ ಕಚೇರಿಯಿಂದ ಕಾಪು ಪೊಲೀಸ್ ಠಾಣೆ ತನಕದ ಎಲ್ಲಾ ವ್ಯಾಪಾರ ಮಳಿಗೆಗಳಿಗೆ ಭೇಟಿ ನೀಡಿ ಸೌಹಾರ್ದತೆಯ ಸಂದೇಶದೊಂದಿಗೆ ಸಿಹಿ ತಿಂಡಿ ಹಂಚಿ ಪರಸ್ಪರ ಶುಭಾಶಯ ವಿನಿಮಯ ಮಾಡಿಕೊಂಡರು.

ಈ ಸಂದರ್ಭ ವೃತ್ತ ನಿರೀಕ್ಷಕ ಅಧಿಕಾರಿ ಪ್ರಕಾಶ್ ಹಾಗೂ ಠಾಣಾಧಿಕಾರಿ ರಾಘವೇಂದ್ರ ಅವರು ಮಾತನಾಡಿ, ಇಂತಹ ಕಾರ್ಯಕ್ರಮದಿಂದ ಸಮಾಜದಲ್ಲಿ ಪ್ರೀತಿ, ಪ್ರೇಮ, ಸಹೋದರತ್ವ ಗಟ್ಟಿಗೊಳ್ಳುತ್ತದೆ ಎಂದರು.

ಹಿಂದೂ, ಮುಸ್ಲಿಮರು ಈ ದೇಶದಲ್ಲಿ ಹಿಂದಿನಿಂದಲೂ ಅನೋನ್ಯತೆಯಿಂದ ಇದ್ದು, ಮುಂದಿನ ದಿನಗಳಲ್ಲೂ ನಮ್ಮ, ನಿಮ್ಮ ಸಂಬಂಧ ಹೀಗೆಯೇ ಇರಲಿ ಎಂದು ಉದ್ಯಮಿ ಹರೀಶ್ ನಾಯಕ್ ಹೇಳಿದರು.

ಒಕ್ಕೂಟದ ಜಿಲ್ಲಾ ಉಪಾಧ್ಯಕ್ಷ ಅನ್ವರ್ ಅಲಿ ಕಾಪು, ಪದಾಧಿಕಾರಿಗಳಾದ ಮುಹಮ್ಮದ್ ಇಕ್ಬಾಲ್ ಸಾಹೇಬ್ ಮಜೂರು, ನಸೀರ್ ಅಹ್ಮದ್, ಮುಸ್ತಾಕ್ ಇಬ್ರಾಹೀಮ್ ಉಪಸ್ಥಿತರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News