ಕಾರ್ಕಳ : ಮೇ 9ರಂದು ಯಕ್ಷ ರಂಗಾಯಣ ಕಾರ್ಯ ಆರಂಭೋತ್ಸವ

Update: 2022-05-07 12:54 GMT

ಕಾರ್ಕಳ : ಕರ್ನಾಟಕ ಸರಕಾರ ಹೊಸದಾಗಿ ಕಾರ್ಕಳದಲ್ಲಿ ಸ್ಥಾಪಿಸಿದ ಯಕ್ಷ ರಂಗಾಯಣ ಇದರ  ಚಟುವಟಿಕೆಯ ಆರಂಭೋತ್ಸವವು ಮೇ 9 ರಂದು ಪೂ. 9 ಗಂಟೆಗೆ  ಕಾರ್ಕಳ ಕೋಟಿ ಚೆನ್ನಯ ಥೀಂ ಪಾರ್ಕ್ ಆವರಣದಲ್ಲಿ ಆರಂಭಗೊಳ್ಳಲಿದೆ.

ಯಕ್ಷ ರಂಗಾಯಣದ ಕಾರ್ಯಾಲಯವನ್ನು ಕನ್ನಡ ಮತ್ತು ಸಂಸ್ಕೃತಿ ಸಚಿವರಾದ ವಿ.ಸುನಿಲ್ ಕುಮಾರ್ ಅವರು ಉದ್ಘಾಟಿಸಲಿದ್ದಾರೆ. ಬಳಿಕ ಯಕ್ಷರಂಗಾಯಣದ ಪ್ರಥಮ ಕಾರ್ಯಕ್ರಮವಾಗಿ "ಚಿಣ್ಣರಮೇಳ " ಮಕ್ಕಳ ಬೇಸಿಗೆ ಶಿಬಿರದ ಉದ್ಘಾಟನಾ ಸಮಾರಂಭ ನಡೆಯಲಿದೆ.

ಸಚಿವರಾದ ವಿ.ಸುನಿಲ್ ಕುಮಾರ್ ಇವರ ಅಧ್ಯಕ್ಷತೆಯಲ್ಲಿ ಆಳ್ವಾಸ್ ಶಿಕ್ಷಣ ಪ್ರತಿಷ್ಠಾನದ ಅಧ್ಯಕ್ಷ ಡಾ| ಎಂ.ಮೋಹನ ಆಳ್ವರವರು  ಚಿಣ್ಣರಮೇಳವನ್ನು ಉದ್ಘಾಟಿಸಲಿದ್ದಾರೆ.

ಕರ್ನಾಟಕ ಗೇರು ಅಭಿವೃದ್ಧಿ ನಿಗಮದ ಅಧ್ಯಕ್ಷರಾದ ಮಣಿರಾಜ ಶೆಟ್ಟಿ, ಕಾರ್ಕಳ ಪುರಸಭೆ ಅಧ್ಯಕ್ಷರಾದ  ಸುಮಾ ಕೇಶವ್, ಕರ್ನಾಟಕ ಯಕ್ಷಗಾನ ಅಕಾಡೆಮಿಯ ಮಾಜಿ ಅಧ್ಯಕ್ಷರಾದ ಪ್ರೊ| ಎಂ.ಎಲ್.ಸಾಮಗ, ಕಾರ್ಕಳ ವರ್ಧಮಾನ ವಿದ್ಯಾ ಸಂಸ್ಥೆಯ ಸಂಚಾಲಕರಾದ  ಶಶಿಕಲಾ ಕೆ.ಎಸ್ ಮತ್ತು ಪ್ರಸಿದ್ಧ ಜಾದೂಗಾರ ಕುದ್ರೋಳಿ ಗಣೇಶ್ ಅತಿಥಿಗಳಾಗಿ ಭಾಗವಹಿಸಲಿದ್ದಾರೆ.

ಸುಮಾರು 200 ಮಕ್ಕಳು ಈ ಶಿಬಿರದಲ್ಲಿ ಭಾಗವಹಿಸಲು ಹೆಸರು ನೊಂದಾಯಿಸಿಕೊಂಡಿದ್ದಾರೆ ಎಂದು ಯಕ್ಷ ರಂಗಾಯಣ ನಿರ್ದೇಶಕರಾದ ಜೀವನ್ ರಾಂ ಸುಳ್ಯ ತಿಳಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News