ಅ. 29ರಂದು BIT, BEADS ಪದವಿ ಪ್ರದಾನ ಸಮಾರಂಭ

Update: 2022-10-28 04:04 GMT

ಮಂಗಳೂರು, ಅ.27: ಬ್ಯಾರೀಸ್ ಇನ್‌ಸ್ಟಿಟ್ಯೂಟ್ ಆಫ್ ಟೆಕ್ನಾಲಜಿ (Bearys Institute of Technology- BIT) ಮತ್ತು ಬ್ಯಾರೀಸ್ ಎನ್ವಿರೋ ಆರ್ಕಿಟೆಕ್ಚರ್ ಡಿಸೈನ್ ಸ್ಕೂಲ್ (Bearys Enviro-Architecture Design School- BEADS)ನ ಪದವಿ ಪ್ರದಾನ ಸಮಾರಂಭ ಅ. 29ರಂದು ಆಯೋಜಿಸಲಾಗಿದೆ.

ಸುದ್ದಿಗೋಷ್ಠಿಯಲ್ಲಿಂದು ಈ ವಿಷಯ ತಿಳಿಸಿದ BIT ಪ್ರಾಂಶುಪಾಲ ಡಾ. ಎಸ್.ಐ. ಮಂಜುರ್ ಬಾಷಾ, BITಯ 10ನೆ ಹಾಗೂ BEADSನ 3ನೆ ಬ್ಯಾಚ್‌ನ ಪದವಿ ಸಮಾರಂಭ ಇದಾಗಿದೆ ಎಂದರು.

ಅಂದು ಬೆಳಗ್ಗೆ 10 ಗಂಟೆಗೆ ಸಮಾರಂಭವನ್ನು ಬೆಂಗಳೂರಿನ ಡಿಜಿಟಲ್ ಷ್ನೇಡರ್ ಇಲೆಕ್ಟ್ರಿಕ್‌ನ ಮುಖ್ಯಸ್ಥರು ಮತ್ತು ಇಂಜಿನಿಯರಿಂಗ್ ನಿರ್ದೇಶಕ ವೆಂಕಟ್ ಆರ್. ವೇಣುಗೋಪಾಲ್ (Head & Director of Engineering – Digital Schneider Electric, Bangalore) ಉದ್ಘಾಟಿಸುವರು.

ಎನ್‌ಐಟಿಕೆ ಸುರತ್ಕಲ್‌ನ ನಿರ್ದೇಶಕ ಡಾ. ಜಿ.ಸಿ. ಮೋಹನ್ ( Director, NITK, Surathkal) ಪದವಿ ಭಾಷಣ ಮಾಡಲಿದ್ದಾರೆ. ಆರ್ಕಿಟೆಕ್ಟ್ ಮನೋಜ್ ಲಧಾದ್, ಜಿಲ್ಲಾ ವೈದ್ಯಾಧಿಕಾರಿ ಡಾ. ಕಿಶೋರ್ ಕುಮಾರ್ ಮುಖ್ಯ ಅತಿಥಿಗಳಾಗಿ ಭಾಗವಹಿಸಲಿದ್ದು,  Bearys Institute of Health Science ಇದರ ಲೋಗೋ ಅನಾವರಣಗೊಳಿಸಲಿದ್ದಾರೆ.

ಬ್ಯಾರೀಸ್ ಅಕಾಡಮಿ ಆಫ್ ಲರ್ನಿಂಗ್ ಅಧ್ಯಕ್ಷ ಸಯ್ಯದ್ ಮೊಹಮ್ಮದ್ ಬ್ಯಾರಿ (Syed Mohamed Beary, Chairman, Bearys Academy of Learning) ಅಧ್ಯಕ್ಷತೆ ವಹಿಸಲಿದ್ದಾರೆ.

ಸಮಾರಂಭದಲ್ಲಿ 2018ರ ಬ್ಯಾಚ್‌ನ ಪದವೀಧರರು ಹಾಗು 2020ರ ಬ್ಯಾಚ್‌ನ ಇಂಜಿನಿಯರಿಂಗ್ ಸ್ನಾತಕೋತ್ತರ  ಪದವೀಧರರನ್ನು ಗೌರವಿಸಲಾಗುವುದು.

ಸಿವಿಲ್, ಮೆಕ್ಯಾನಿಕಲ್, ಸಿಎಸ್‌ಇ, ಮತ್ತು ಇಸಿಇ ಆರ್ಕಿಟೆಕ್ಚರ್ ಮೂರನೆ ಬ್ಯಾಚ್‌ನ ಡಿಪ್ಲೊಮಾ ಸಿವಿಲ್ ಮತ್ತು ಮೆಕ್ಯಾನಿಕಲ್ ಪದವೀಧರರನ್ನು ಗೌರವಿಸಲಾಗುವುದು. ಇದೇ ವೇಳೆ ಈ ಬ್ಯಾಚ್‌ಗಳ ಶೈಕ್ಷಣಿಕ ಟಾಪರ್ ಮತ್ತು ಅತ್ಯುತ್ತಮ ವಿದ್ಯಾರ್ಥಿಗಳನ್ನು ಹಾಗು ಪಿಎಚ್‌ಡಿ ಪದವೀಧರರನ್ನು ಅವರ ಸಾಧನೆಗಾಗಿ ಗೌರವಿಸಲಾಗುವುದು ಎಂದು BEADS ಪ್ರಾಂಶುಪಾಲ ಆರ್. ಅಶೋಕ್ ಮೆಂಡೋನ್ಸಾ ತಿಳಿಸಿದರು.

ಗೋಷ್ಠಿಯಲ್ಲಿ BIESನ ಪ್ರಾಂಶುಪಾಲ ಡಾ. ಅಝೀಝ್ ಮುಸ್ತಫಾ, ಬಿಐಟಿಯ ಇಸಿಇ ವಿಭಾಗದ ಮುಖ್ಯಸ್ಥ ಡಾ. ಅಬ್ದುಲ್ಲಾ ಗುಬ್ಬಿ ಉಪಸ್ಥಿತರಿದ್ದರು. 

Similar News