ಮಂಗಳೂರು | ಮುಸ್ಲಿಂ ಸೆಂಟ್ರಲ್ ಕಮಿಟಿಯಿಂದ ಧನ ಸಹಾಯ
Update: 2022-12-01 05:17 GMT
ಮಂಗಳೂರು: ಮುಕ್ಕ ನಿವಾಸಿಗಳಾದ ಅನಾರೋಗ್ಯ ಪೀಡಿತ ಮೊಹಮ್ಮದ್ ಹಾಗೂ ಪಾತುಂಞಿ ಎಂಬವರ ನಿವಾಸಕ್ಕೆ ದಿ ಮುಸ್ಲಿಂ ಸೆಂಟ್ರಲ್ ಕಮಿಟಿಯ ಅಧ್ಯಕ್ಷ ಕೆ.ಎಸ್. ಮೊಹಮ್ಮದ್ ಮಸೂದ್ ರವರು ಭೇಟಿ ನೀಡಿ ಧನ ಸಹಾಯವನ್ನು ನೀಡಿದರು. ವೈದ್ಯಕೀಯ ವೆಚ್ಚಕ್ಕಾಗಿ ಮಾಸಿಕ ಒಂದು ಸಾವಿರ ರೂಪಾಯಿಯನ್ನು ನೀಡುವುದಾಗಿ ಅವರು ತಿಳಿಸಿದರು.
ಈ ಸಂದರ್ಭದಲ್ಲಿ ಉಪಾಧ್ಯಕ್ಷರಾದ ಕೆ. ಅಶ್ರಫ್, ಸೈಯದ್ ಅಹ್ಮದ್ ಬಾಷಾ ತಂಙಳ್, ಪ್ರಧಾನ ಕಾರ್ಯದರ್ಶಿ ಮೊಹಮ್ಮದ್ ಹನೀಫ್, ಕಾರ್ಯದರ್ಶಿಗಳಾದ ಸಿ.ಎಂ. ಹನೀಫ್, ಹಾಜಿ ರಿಯಾಝುದ್ಧೀನ್, ಎಂ.ಎ. ಅಶ್ರಫ್, ಮೊಯಿದಿನ್ ಮೊಣು ಮೊದಲಾದವರು ಉಪಸ್ಥಿತರಿದ್ದರು