ಮೈಸೂರು-ಬೆಂಗಳೂರು ಹೆದ್ದಾರಿಗೆ ಒಡೆಯರ್ ಹೆಸರಿಡಿ: ನಿತಿನ್ ಗಡ್ಕರಿ, ಸಿಎಂ ಬೊಮ್ಮಾಯಿಗೆ ಎಸ್.ಎಂ ಕೃಷ್ಣ ಪತ್ರ

Update: 2023-01-01 14:48 GMT

ಬೆಂಗಳೂರು, ಜ. 1: ಮೈಸೂರು-ಬೆಂಗಳೂರು ರಾಷ್ಟ್ರೀಯ ಹೆದ್ದಾರಿ-275ಕ್ಕೆ ನಾಲ್ವಡಿ ಕೃಷ್ಣರಾಜ ಒಡೆಯರ್ ಅವರ ಹೆಸರನ್ನು ನಾಮಕರಣ ಮಾಡಬೇಕು ಎಂದು ಕೋರಿ ಮಾಜಿ ಮುಖ್ಯಮಂತ್ರಿ  ಎಸ್.ಎಂ ಕೃಷ್ಣ ಅವರು, ಕೇಂದ್ರ ಹೆದ್ದಾರಿ ಸಚಿವ ನಿತಿನ್ ಗಡ್ಕರಿ ಹಾಗೂ ಸಿಎಂ ಬಸವರಾಜ ಬೊಮ್ಮಾಯಿ ಅವರಿಗೆ ಪತ್ರ ಬರೆದಿದ್ದಾರೆ.

ನೂತನವಾಗಿ ನಿರ್ಮಾಣಗೊಂಡಿರುವ ಮೇಲ್ಕಂಡ ರಸ್ತೆಗೆ ಮೈಸೂರಿನ ಅರಸರಾಗಿದ್ದ ನಾಲ್ವಡಿ ಕೃಷ್ಣರಾಜ ಒಡೆಯರ್ ಅವರ ಹೆಸರಿಡಬೇಕು. ಶತಮಾನಗಳ ಪರಂಪರೆ ಮತ್ತು ಪದ್ಧತಿಗಳಲ್ಲಿ ಸಮೃದ್ಧವಾಗಿರುವ ಮೈಸೂರು ಸಂಸ್ಕøತಿಯನ್ನು ರೂಪಿಸಿದ, ಒಡೆಯರ್ ಅವರು ಕೃಷ್ಣರಾಜ ಸಾಗರ ಅಣೆಕಟ್ಟು ನಿರ್ಮಾಣ ಮಾಡಿದ್ದು ಜೀವಮಾನದ ಮಹತ್ಸಾಧನೆಯಾಗಿದೆ ಎಂದು ಕೃಷ್ಣ ತಿಳಿಸಿದ್ದಾರೆ.

ಒಡೆಯರ್ ಅವರ ಆಡಳಿತ ಅವಧಿಯಲ್ಲಿ ಹಲವು ಅಭಿವೃದ್ಧಿ ಕಾರ್ಯಗಳು ನಡೆದಿವೆ. ಅವರನ್ನು ಎಲ್ಲರೂ ‘ರಾಜಶ್ರೀ’ ಎಂದು ಕರೆಯುತ್ತಿದ್ದರು. ಆ ಹೆಸರನ್ನು ಅವರ ಆಡಳಿತಾತ್ಮಕ ಕಾರ್ಯ ವೈಖರಿಯನ್ನು ಮೆಚ್ಚಿ ರಾಷ್ಟ್ರಪಿತ ಮಹಾತ್ಮ ಗಾಂಧೀಜಿ ಅವರೇ ನೀಡಿದ್ದರು ಎಂದು ಎಸ್ಸೆಂ ಕೃಷ್ಣ ಅವರು ತಿಳಿಸಿದ್ದಾರೆ.

Similar News