ಬೆಳ್ವೆ ಮದ್ರಸ ವಾರ್ಷಿಕೋತ್ಸವ -ಸನ್ಮಾನ ಸಮಾರಂಭ
ಕುಂದಾಪುರ: ಬೆಳ್ವೆ ಹಿದಯತುಲ್ ಉಲೂಮ್ ಅರಬಿ ಮದ್ರಸದ ವಾರ್ಷಿಕೋತ್ಸವ ಹಾಗೂ ಸನ್ಮಾನ ಸಮಾರಂಭ ಇತ್ತೀಚೆಗೆ ಜರಗಿತು.
ಅಧ್ಯಕ್ಷತೆಯನ್ನು ಮದ್ರಸ ಕಮಿಟಿ ಅದ್ಯಕ್ಷ ಮುಸ್ತಾಕ್ ಅಹಮ್ಮದ್ ಬೆಳ್ವೆ ವಹಿಸಿದ್ದರು. ಬೆಳ್ವೆ ಜುಮಾ ಮಸೀದಿ ಅದ್ಯಕ್ಷ ಅಹಮದ್ ಬ್ಯಾರಿ, ಇಸ್ಲಾಮಿಕ್ ಯೂತ್ ಫೆಡರೇಷನ್ ಅದ್ಯಕ್ಷ ಮುಹಮ್ಮದ್ ನಝೀರ್, ಬೆಳ್ವೆ ಜುಮಾ ಮಸೀದಿಯ ಖತೀಬ್ ಮೌಲಾನ ಮುಹಮ್ಮದ್ ರಫೀಕ್ ಬೆಳ್ವೆ, ಮದ್ರಸ ಕಮಿಟಿ ಉಪಾಧ್ಯಕ್ಷ ಅಬ್ದುಲ್ಲಾ ಸಹೆ ಅಲ್ಬಾಡಿ ಮುಖ್ಯ ಅತಿಥಿಗಳಾಗಿದ್ದರು.
ಮದ್ರಸ ಸ್ಥಾಪಕ ಕಾರ್ಯದರ್ಶಿ ಕೃಷಿಕ ಬಿ.ಕೆ.ಶಬ್ಬಿರ್ ಸಾಹೇಬ್ ಬೆಳ್ವೆ, ದೀರ್ಘ ಕಾಲ ಸೇವೆ ಸಲ್ಲಿಸಿ ನಿವೃತಗೊಳ್ಳುತಿರುವ ಮದ್ರಸ ಕಾರ್ಯದರ್ಶಿ ಇಸ್ಮಾಯಿಲ್ ಬ್ಯಾರಿ ಹೋನಕಲ್, ಕೊಳವೆ ಬಾವಿ ದಾನಿ ಸಾಗರದ ಅಬೂಬಕರ್ ಸಾಹೇಬ್ ಅವರನ್ನು ಸನ್ಮಾನಿಸಲಾಯಿತು. ಉತ್ತಮ ಸೇವಾಕರ್ತರನ್ನು ಗೌರವಿಸಲಾಯಿತು. ವಾರ್ಷಿಕ ಕ್ರೀಡಾಕೂಟದ ವಿಜೇತರಿಗೆ ಬಹುಮಾನ ವಿತರಿಸಲಾಯಿತು.
ಶಾಂತಿ ಪ್ರಕಾಶನ ಮಂಗಳೂರು ಇದರ ಮಕ್ಕಳನ್ನು ಹೇಗೆ ಸಾಕಬೇಕು ಎಂಬ ಪುಸ್ತಕವನ್ನು ಬಿಡುಗಡೆಗೊಳಿಸಲಾಯಿತು. ವಿದ್ಯಾರ್ಥಿಗಳಿಗೆ ದಿನಿ ಪುಸ್ತಕ ಹಾಗೂ ಪವಿತ್ರ ಗ್ರಂಥ ಕುರಾನ್ ವಿತರಿಸಲಾಯಿತು.
ಬೆಳ್ವೆ ಜಮಾತ್ ಉಪಾಧ್ಯಕ್ಷ ಶಕೀಲ್ ಅಹಮದ್, ಕಾರ್ಯದರ್ಶಿ ಇಕ್ಬಾಲ್, ಕೋಶಾಧಿಕಾರಿ ಅನ್ಸಾರ್ ಬೆಳ್ವೆ, ಜೊತೆ ಕಾರ್ಯದರ್ಶಿ ಷರೀಫ್ ಬೆಳ್ವೆ, ಮದ್ರಸ ಜೊತೆ ಕಾರ್ಯದರ್ಶಿ ಸಿದ್ದೀಕ್ ಹೊಂಕಲ್, ರಝಾಕ್ ಅಲ್ಬಡಿ, ಜಿಫ್ರಿ ಸಾಹೇಬ್, ಉಸ್ಮಾನ್ ಅಲ್ಬಾಡಿ, ಅನ್ವರ್ ಅಲ್ಬಾಡಿ, ಷಜದ್ ಬೆಳ್ವೆ, ಇಮ್ರಾನ್, ಮುದಾಸಿರ್, ಫಾರೂಕ್ ಬೆಳ್ವೆ, ಹನೀಫ್ ಬೆಳ್ವೆ ಮೊದಲಾದವರು ಉಪಸ್ಥಿತರಿದ್ದರು,
ಮುಹಮ್ಮದ್ ಆಸಿಫ್ ಅಲ್ಬಾಡಿ ಸನ್ಮಾನ ಪತ್ರ ವಾಚಿಸಿದರು. ಅರಫಾತ್ ಅಲ್ಬಾಡಿ ಸ್ವಾಗತಿಸಿದರು. ಮೊಹಮ್ಮದ್ ರಬಿ ವರದಿ ವಾಚಿಸಿದರು. ಅಬ್ದುಲ್ ಲುಕ್ಮನ್ ಕಿರಾತ ಪಠಿಸಿದರು. ಮುಹಮ್ಮದಂ ರಯನ್ ಕಾರ್ಯಕ್ರಮ ನಿರೂಪಿಸಿದರು. ಬೆಳ್ವೆ ಅಬ್ದುಲ್ ಶುಕೂರ್ ಸೌದಿ ಅರೇಬಿಯಾ, ಸರ್ಫರಾಜ್ ಕುವೈಟ್, ಆಶಿರ್ ಬೆಂಗಳೂರ್, ಮಯ್ಯದಿ ಬಹರೈನ್, ಇಲ್ಯಾಸ್ ಬೆಳ್ವೆ ಹಸೈನಾರ್ ಬೆಳ್ವೆ, ಅಕ್ಬರ್ ಅಲ್ಬಾಡಿ, ಆದಮ್ ಸಾಹೇಬ್, ಇಬ್ರಾಹಿಂ ಅಲ್ಬಾಡಿ, ಖಾದರ್ ಹೆಬ್ರಿ, ಕರಾಣಿ ಸುಹಾನ್ ಬೆಳ್ವೆ ಸಹಕರಿಸಿದರು.