ಉಡುಪಿ: ಮಾವಿನಕಾಯಿ ಕೀಳುತ್ತಿದ್ದ ವೇಳೆ ವಿದ್ಯುತ್ ಸ್ಪರ್ಶಿಸಿ ಕಾರ್ಮಿಕ ಮೃತ್ಯು

Update: 2023-02-04 14:29 GMT

ಉಡುಪಿ: ಮಾವಿನ ಮರದಿಂದ ಕಾಯಿ ಕೀಳುತ್ತಿದ್ದ ವಲಸೆ ಕಾರ್ಮಿಕರೊಬ್ಬರು ವಿದ್ಯುತ್ ಸರ್ವೀಸ್ ತಂತಿಯಲ್ಲಿನ ವಿದ್ಯುತ್ ಹರಿದು ಮೃತಪಟ್ಟ ಘಟನೆ ಫೆ.3ರಂದು ಬೆಳಗ್ಗೆ 9.15ರ ಸುಮಾರಿಗೆ ಸಂತೆಕಟ್ಟೆ ಬಳಿ ನಡೆದಿದೆ.

ಮೃತರನ್ನು ಪಶ್ಚಿಮ ಬಂಗಾಳದ ಬಿಶುದಾಸ್(52) ಎಂದು ಗುರುತಿಸಲಾಗಿದೆ. ಸಂತೆಕಟ್ಟೆಯಲ್ಲಿ ಹೊಸದಾಗಿ ನಿರ್ಮಾಣ ಮಾಡುತ್ತಿರುವ ಅಪಾರ್ಟ್‌ಮೆಂಟ್ ನಲ್ಲಿ ಬಾರ್ಬೇಂಡಿಂಗ್ ಕೆಲಸ ಮಾಡಿಕೊಂಡಿದ್ದ ಖೋಕನ್ ಮನ್ನಾ ಎಂಬವರು ಸಮೀಪದ ಮಾವಿನಮರದಿಂದ ಅಪಾರ್ಟ್‌ಮೆಂಟ್‌ಗೆ ವಿದ್ಯುತ್ ಸರ್ವಿಸ್ ತಂತಿಯನ್ನು ಕಟ್ಟಿದ್ದರು. ಈ ಮಧ್ಯೆ ಖೋಕನ್ ಮನ್ನಾರೊಂದಿಗೆ ಅಡುಗೆ ಕೆಲಸ ಮಾಡುತ್ತಿದ್ದ ಬಿಶುದಾಸ್ ಮಾವಿನಕಾಯಿ ಕೀಳಲು ಆ ಮರಕ್ಕೆ ಹತ್ತಿದ್ದರೆನ್ನಲಾಗಿದೆ.

ಈ ವೇಳೆ ಬಿಶುದಾಸ್ ಮಾವಿನ ಮರದಲ್ಲಿ ಕಟ್ಟಿರುವ ವಿದ್ಯುತ್ ಸರ್ವೀಸ್ ತಂತಿಯನ್ನು ಸ್ಪರ್ಶಿಸಿದರು. ಆಗ ವಿದ್ಯುತ್ ಶಾಕ್‌ನಿಂದ ಕೆಳಗೆ ಬಿದ್ದು ತೀವ್ರವಾಗಿ ಅಸ್ವಸ್ಥಗೊಂಡ ಬಿಶುದಾಸ್ ಆಸ್ಪತ್ರೆಗೆ ಸಾಗಿಸುವಾಗ ಮಾರ್ಗ ಮಧ್ಯೆ ಮೃತಪಟ್ಟಿರುವುದಾಗಿ ಪೊಲೀಸರು ತಿಳಿಸಿದ್ದಾರೆ.

ಬಿಶುದಾಸ್ ನ ಸಾವಿಗೆ ಅಪಾರ್ಟ್‌ಮೆಂಟ್‌ನ ಸೂಪರ್‌ವೈಸರ್ ಅಲ್ವಿನ್ ಕ್ರಾಡ್ರಸ್ ಹಾಗೂ ಇಲೆಕ್ಟ್ರಿಶಿಯನ್ ಮಂಜುನಾಥ  ನಿರ್ಲಕ್ಷತನವೇ ಕಾರಣ ಎಂಬುದಾಗಿ ದೂರಲಾಗಿದೆ. ಈ ಬಗ್ಗೆ ಉಡುಪಿ ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಇದನ್ನೂ ಓದಿ: ಉಡುಪಿ: ಕರಾಟೆ ತರಗತಿಯಲ್ಲಿ ಬಾಲಕಿಗೆ ಲೈಂಗಿಕ ದೌರ್ಜನ್ಯ ಪ್ರಕರಣ; ಆರೋಪಿಗೆ 10 ವರ್ಷ ಜೈಲು ಶಿಕ್ಷೆ

Similar News