ಕಾಸರಗೋಡು: ಹೊಳೆಯಲ್ಲಿ ಮುಳುಗುತ್ತಿದ್ದ 11ರ ಬಾಲಕನನ್ನು ರಕ್ಷಿಸಿದ 8ರ ಬಾಲಕ!
ಸಾರ್ವಜನಿಕರಿಂದ ಭಾರೀ ಪ್ರಶಂಸೆ
Update: 2023-02-10 06:32 GMT
ಕಾಸರಗೋಡು, ಫೆ.10: ಸ್ನಾನಕ್ಕೆಂದು ಹೊಳೆಗಿಳಿದು ಅಪಾಯಕ್ಕೆ ಸಿಲುಕಿದ್ದ 11 ವರ್ಷದ ಬಾಲಕನನ್ನು 8 ವರ್ಷದ ಬಾಲಕ ರಕ್ಷಿಸಿದ ಘಟನೆ ಅಡೂರು ಸಮೀಪದ ಪಳ್ಳಂಗೋಡು ಎಂಬಲ್ಲಿ ಗುರುವಾರ ನಡೆದಿರುವುದಾಗಿ ವರದಿಯಾಗಿದೆ.
ಪಯಸ್ವಿನಿ ಹೊಳೆಯ ಪಳ್ಳಂಗೋಡು ಎಂಬಲ್ಲಿ 11 ವರ್ಷದ ಬಾಲಕನೊಬ್ಬ ಸಾನಕ್ಕೆಂದು ಹೊಳೆಗಿಳಿದಿದ್ದು, ಈ ಸಂದರ್ಭ ಅಪಾಯಕ್ಕೆ ಸಿಲುಕಿ ಮೇಲಕ್ಕೆ ಬರಲಾರದೆ ಒದ್ದಾಡುತ್ತಿದ್ದನ್ನೆಲಾಗಿದೆ. ಇದನ್ನು ಗಮನಿಸಿದ ಮುಹಮ್ಮದ್ ಹಿಬಾತುಲ್ಲ ಎಂಬ ಬಾಲಕ ಸಾಹಸಮಯವಾಗಿ ಬಾಲಕನನ್ನು ಮೇಲಕ್ಕೆತ್ತಿ ರಕ್ಷಿಸಿದ್ದಾನೆ.
ಪಳ್ಳಂಗೋಡಿನ ಇಬ್ರಾಹೀಂ ಹಸೀಬ್-ಬುಶ್ರಾ ದಂಪತಿಯ ಪುತ್ರನಾಗಿರುವ ಮುಹಮ್ಮದ್ ಹಿಬಾತುಲ್ಲ ಪಳ್ಳಂಗೋಡು ಶಾಲೆಯ 3ನೇ ತರಗತಿ ವಿದ್ಯಾರ್ಥಿ ಯಾಗಿದ್ದಾನೆ. ಬಾಲಕ ಹಿಬಾತುಲ್ಲನ ಸಾಹಸ ಮತ್ತು ಸಮಯಪ್ರಜ್ಞೆಯಿಂದಾಗಿ ಇನ್ನೊಬ್ಬ ಬಾಲಕ ಪ್ರಾಣಾಪಾಯದಿಂದ ಪಾರಾಗಿದ್ದು, ಇದಕ್ಕಾಗಿ ಬಾಲಕನಿಗೆ ಸಾರ್ವಜನಿಕರಿಂದ ಭಾರೀ ಪ್ರಶಂಸೆ ವ್ಯಕ್ತವಾಗಿದೆ.