ಕಾಸರಗೋಡು| ಅಂಜುಶ್ರೀ ಸಾವಿಗೆ ಇಲಿ ಪಾಷಾಣ ಸೇವನೆ ಕಾರಣ: ರಾಸಾಯನಿಕ ತಪಾಸಣಾ ವರದಿ
ಆನ್‌ಲೈನ್‌ನಲ್ಲಿ ಫುಡ್ ಖರೀದಿಸಿದ ಕಾರಣಕ್ಕೆ ಸುದ್ದಿಯಾಗಿದ್ದ ಪ್ರಕರಣ
Update: 2023-02-14 19:12 GMT
ಕಾಸರಗೋಡು: ಮಂಜೇಶ್ವರ ಗೋವಿಂದ ಪೈ ಕಾಲೇಜಿನ ವಿದ್ಯಾರ್ಥಿನಿಯಾಗಿದ್ದ ಪೆರುಂಬಳ ಬೇನೂರಿನ ಅಂಜುಶ್ರೀ ಪಾರ್ವತಿಯ ಸಾವಿಗೆ ಇಲಿ ಪಾಷಾಣ ಸೇವನೆ ಕಾರಣ ಎಂದು ರಾಸಾಯನಿಕ ತಪಾಸಣಾ ವರದಿಯಿಂದ ತಿಳಿದು ಬಂದಿದೆ.
ಅಂತಿಮ ಮರಣೋತ್ತರ ಪರೀಕ್ಷಾ ವರದಿಯಲ್ಲೂ ಇದನ್ನು ದೃಢೀಕರಿಸಿತ್ತು. ಜನವರಿ 7ರಂದು ಅಂಜುಶ್ರೀ ಮಂಗಳೂರಿನ ಖಾಸಗಿ ಆಸ್ಪತ್ರೆಯಲ್ಲಿ ಮೃತಟ್ಟಿದ್ದಳು. ಕೋಝಿಕ್ಕೊಡ್ ನ ಫಾರೆನ್ಸಿಕ್ ಪ್ರಯೋಗಾಲಯದಲ್ಲಿ ನಡೆಸಿದ ತಪಾಸಣೆಯಿಂದ ಇಲಿ ವಿಷ ಸೇವನೆ ಅಂಜುಶ್ರೀ ಸಾವಿಗೆ ಕಾರಣ ಎಂದು ಖಚಿತ ಪಡಿಸಿದೆ. ಈ ಕುರಿತ ವರದಿ ತನಿಖಾ ತಂಡಕ್ಕೆ ಲಭಿಸಿದೆ.
ಕಾಸರಗೋಡು ನಗರ ಹೊರ ವಲಯದ ಹೋಟೆಲೊಂದರಿಂದ ಆನ್‌ಲೈನ್‌ನಲ್ಲಿ ಖರೀದಿಸಿದ್ದ ಆಹಾರ ಸೇವಿಸಿರುವುದು ಸಾವಿಗೆ ಕಾರಣ ಎಂದು ಕುಟುಂಬಸ್ಥರು ಮೇಲ್ಪರಂಬ ಠಾಣಾ ಪೊಲೀಸರಿಗೆ ದೂರು ನೀಡಿದ್ದರು. ಇದರಂತೆ ಹೋಟೆಲ್ ವಿರುದ್ಧ ಪೊಲೀಸರು ಕ್ರಮ ತೆಗೆದುಕೊಂಡಿದ್ದರು. ಆದರೆ ಆಹಾರದಿಂದ ಸಾವು ಸಂಭವಿಸಿಲ್ಲ ಎಂದು ತನಿಖೆಯಿಂದ ದೃಢಪಟ್ಟಿತ್ತು.