ಹೂಡೆ ದಾರುಸ್ಸಲಾಮ್ ಶಾಲಾ ಬೆಳ್ಳಿಹಬ್ಬದ ಸಂಭ್ರಮಾಚರಣೆ

Update: 2023-02-15 11:02 GMT

ಉಡುಪಿ, ಫೆ.15: ಇಲ್ಲಿನ ಹೂಡೆಯ ದಾರುಸ್ಸಲಾಮ್ ಆಂಗ್ಲ ಮಾಧ್ಯಮ ಶಾಲೆಯ ಇಪ್ಪತ್ತೈದನೇ ವಾರ್ಷಿಕ ಸಮಾರಂಭವು ದಾರುಸ್ಸಲಾಮ್ ಶಾಲಾ ವಠಾರದಲ್ಲಿ ನಡೆಯಿತು.

ದಾರುಸ್ಸಲಾಮ್ ಎಜುಕೇಶನ್ ಸೊಸೈಟಿ ಅಧ್ಯಕ್ಷ ಜಿ.ಅಶ್ರಫ್ ಅಧ್ಯಕ್ಷತೆ ವಹಿಸಿದ್ದರು. ಹೂಡೆ ಖದೀಮಿ ಜಾಮಿಯಾ ಮಸ್ಜಿದ್ ಖತೀಬ್ ಅಬೂಬಕರ್ ಲತೀಫಿ ದುವಾ ನೆರವೇರಿಸಿದರು.

ಮುಸ್ತಫಾ ಸಅದಿ ಮೂಳೂರು, ಸಯ್ಯಿದ್ ನವಾಝ್ ಯೂಸುಫ್, ದಾರುಸ್ಸಲಾಮ್ ಮದ್ರಸದ ಪ್ರಾಂಶುಪಾಲ ಎಂ.ಎ. ಇಸ್ಮಾಈಲ್ ನಈಮಿ ಮಂಗಳಪೇಟೆ ಮುಖ್ಯ ಅತಿಥಿಗಳಾಗಿದ್ದರು.ವಿವಿಧ ಕ್ಷೇತ್ರಗಳಲ್ಲಿ ಸಾಧನೆ ಮಾಡಿದ ಅಕ್ಷರ ಸಂತ ಪದ್ಮಶ್ರೀ ಹರೇಕಳ ಹಾಜಬ್ಬ, ಮುಹಮ್ಮದ್ ಹುಸೈನ್ ಬಪ್ಪುಮಾಸ್ಟರ್, ಬೈಕಾಡಿ ಅಹ್ಮದ್ ಸಾಹೇಬ್, ಶೋಭಾ ರಾಣಿ, ಉಷಾ ದೇವಿ, ವಝೀರ್ ಅಶ್ರಫ್, ಸುಕನ್ಯ, ಬಲ್ಕೀಸ್, ದೈಹಿಕ ಶಿಕ್ಷಕಿ ಪ್ರಭಾವತಿ, ಶಿಕ್ಷಕಿ ಕಾವ್ಯಾ ಶೆಟ್ಟಿ, ಸಹಾಯಕಿ ಭಾರತಿ ಅವರನ್ನು ಸನ್ಮಾನಿಸಲಾಯಿತು.

ಶಾಲಾ ಬೆಳ್ಳಿಹಬ್ಬದ ಪ್ರಯುಕ್ತ ಪ್ರಕಟಿಸಿದ ಸ್ಪೆಕ್ಟ್ರಮ್ ಸ್ಮರಣ ಸಂಚಿಕೆಯನ್ನು ಬಿಡುಗಡೆಗೊಳಿಸಲಾಯಿತು. ದಾರುಸ್ಸಲಾಮ್ ಎಜುಕೇಶನ್ ಸೊಸೈಟಿ ಉಪಾಧ್ಯಕ್ಷ ಅಬ್ದುಲ್ ಖಾದರ್ ನೇಜಾರ್, ಪ್ರಧಾನ ಕಾರ್ಯದರ್ಶಿ ಅಬ್ದುಲ್ ಖಯ್ಯೂಮ್, ಸದಸ್ಯರಾದ ಜುನೈದ್ ಕಡಿಕೆ, ಶಾಕಿರ್ ಹುಸೈನ್, ಮುಸ್ತಾಕ್ ಅಹ್ಮದ್, ಮುಹಮ್ಮದ್ ಶರೀಫ್ ತೋನ್ಸೆ, ಉರ್ದು ಶಿಕ್ಷಕ ಅಸ್ಲಮ್ ಮಿಸ್ಬಾಹಿ ತೋನ್ಸೆ, ತೋನ್ಸೆ ಗ್ರಾಪಂ ಸದಸ್ಯರಾದ ಉಸ್ತಾದ್ ಹೈದರ್, ಇದ್ರೀಸ್ ಹೂಡೆ ಮೊದಲಾದವರು ಉಪಸ್ಥಿತರಿದ್ದರು.

ಶಿಕ್ಷಕಿ ಉಷಾ ದೇವಿ ವಾರ್ಷಿಕ ವರದಿ ಮಂಡಿಸಿದರು. ವಝೀರ್ ಅಶ್ರಫ್ ಸ್ವಾಗತಿಸಿದರು. ಶಿಕ್ಷಕಿ ಕಾವ್ಯಾ ಶೆಟ್ಟಿ ಕಾರ್ಯಕ್ರಮ ನಿರೂಪಿಸಿದರು. ಶಿಕ್ಷಕಿ ಮಿಲ್ಕಾ ವಂದಿಸಿದರು.

Similar News