ನೇರಳಕಟ್ಟೆ: ಶಬೇ ಮಿಹ್ರಾಜ್ ಕಾರ್ಯಕ್ರಮ

Update: 2023-02-19 12:59 GMT

ಬಂಟ್ವಾಳ, ಫೆ.19 : ನೈತಿಕ ಮತ್ತು ಲೌಕಿಕ ಶಿಕ್ಷಣಕ್ಕೆ ಪ್ರೋತ್ಸಾಹ ನೀಡುವ ಮೂಲಕ ಸಮಾಜವನ್ನು ಬಲಿಷ್ಟವಾಗಿ ಕಟ್ಟಲು ಸಾದ್ಯ, ಸಮಾಜದ ಯುವಕರು ಸಾಮಾಜಿಕ ತಾಣಗಳಲ್ಲಿ ಸಮುದಾಯಕ್ಕೆ ಲಾಭಕರವಲ್ಲದ ಯಾವುದೇ ಚರ್ಚೆಗಳಲ್ಲಿ ಭಾಗವಹಿಸುವ ಬದಲು ಶಿಕ್ಷಣ, ದೀನಿ ದಾವತ್, ಸೇವಾ ಕೈಂಕರ್ಯಗಳಿಗೆ ಒತ್ತು ಕೊಟ್ಟು ಕಾರ್ಯ ಪ್ರವೃತರಾಗಬೇಕಾಗಿದೆ, ಶಂಸುಲ್ ಉಲಮಾರಂತಹ ಮೇದಾವಿಗಳ ಶ್ರಮ ಫಲವಾಗಿ ದಾರುಸ್ಸಲಾಂ ನಂದಿ ಅರಬಿಕ್ ಕಾಲೇಜ್  ಸಮೇತ ಹಲವಾರು ಶಿಕ್ಷಣ ಸಂಸ್ಥೆಗಳು ನಾಡಿನ ಭವಿಷ್ಯ ನಿರ್ಣಯಿಸುವಲ್ಲಿ ಪ್ರಮುಖ ಪಾತ್ರ ವಹಿಸಿದೆ ಎಂದು ದಾರುಸ್ಸಲಾಂ ಸಂಸ್ಥೆಯ ಕುಲಪತಿ ಏವಿ ಉಸ್ತಾದ್ ಹೇಳಿದರು.

ಫೆ.26 ರಂದು ನಡೆಯಲಿರುವ ಕಲ್ಲಿಕೋಟೆ ಜಾಮಿಅ ದಾರುಸ್ಸಾಲಾಂ ನಂದಿ  ಇದರ  ಘಟಿಕೋತ್ಸವದ ಪ್ರಚಾರ ಪ್ರಯುಕ್ತ ರಾಜ್ಯ ದಾರಿಮಿ ಉಲಮಾ ಒಕ್ಕೂಟದ ವತಿಯಿಂದ ನೇರಳಕಟ್ಟೆ  ಜನಪ್ರಿಯ ಗಾರ್ಡನ್ ನಲ್ಲಿ ಶನಿವಾರ ನಡೆದ  "ಶಬೇ ಮಿಹ್ರಾಜ್" ಕಾರ್ಯಕ್ರಮದಲ್ಲಿ ಭಾಗವಹಿಸಿ ಅವರು ಮಾತನಾಡಿದರು.

ಕಾರ್ಯಕ್ರಮವನ್ನು ಉದ್ಘಾಟಿಸಿದ ಸಮಸ್ತ ಕೇಂದ್ರ ಸಮಿತಿಯ ಕೋಶಾಧಿಕಾರಿ ಮೂಡಿಗೆರೆ ಖಾಝಿ ಶೈಖುನಾ ಕೊಯ್ಯೋಡ್ ಉಸ್ತಾದ್  ಮಾತನಾಡಿ ಟೀಕೆ ಟಿಪ್ಪಣಿಗಳಿಗೆ ಕುಗ್ಗದೆ ಸಮಾಜದ ಸೇವೆಯಲ್ಲಿ ತಮ್ಮನ್ನು ತೊಡಗಿಸಿ ಕೊಂಡಿರುವ ಉಲಮಾಗಳಿಂದಾಗಿ ಧರ್ಮ ನೆಲೆ ನಿಂತಿದೆ ಎಂದರು.

ಸಮಾರಂಭದ ಅಧ್ಯಕ್ಷತೆ ವಹಿಸಿದ್ದ ಜಿಲ್ಲಾ ಖಾಝಿ ಶೈಖನಾ ತ್ವಾಕಾ ಅಹ್ಮದ್ ಮುಸ್ಲಿಯಾರ್ ಮಾತನಾಡಿ ಶಂಸುಲ್ ಉಲಮಾರ ಅಪಾರ ಬುದ್ದಿ ಶಕ್ತಿಯಿಂದಾಗಿ ಧಾರ್ಮಿಕ ಕಾರ್ಯಚಟುವಟಿಕೆಗಳಿಗೆ ಕಳೆದ ಶತಮಾನದಲ್ಲಿ ವೇಗ ದೊರಕಿತು. ಇಸ್ಲಾಂ ಧರ್ಮದ ನಂಬಿಕೆಯನ್ನು  ಗೇಲಿ ಮಾಡಿದವರಿಗೆ ಸೂಕ್ತ ಉತ್ತರ ನೀಡಲು ಶಂಸುಲ್ ಉಲಮಾರು ನಮಗೆ ಪ್ರೇರಣೆ ಎಂದರು.

ಚಿಂತಕ ಶುಹೈಬ್ ಹೈತಮಿ  ಮಾತನಾಡಿ ಧರ್ಮದ ಆಚಾರ ವಿಚಾರಗಳನ್ನು ಅಲ್ಲಗೆಳೆದು ನಾಸ್ತಿಕತೆಗೆ ಜನರನ್ನು ಪ್ರೇರೇಪಿಸು ವವರಿಂದಾಗಿ ಜಗತ್ತಲ್ಲಿ ನೈತಿಕ ಮೌಲ್ಯ ಕುಸಿಯುತ್ತಿದೆ. ಜಗತ್ತನ್ನು ನಿಯಂತ್ರಿಸುವ ಶಕ್ತಿಯ ಮೂಲದ ಬಗ್ಗೆ ಇನ್ನೂ ವಿಜ್ಞಾನಕ್ಕೆ ಯಾವುದೇ ತೀರ್ಮಾನಕ್ಕೆ ಬರಲು ಸಾಧ್ಯವಾಗಿಲ್ಲ. ಆದರೆ ವಿಜ್ಞಾನದ ಸಂಶೋದನೆಗಳು ಪ್ರವಾದಿಗಳ ಮಿಹ್ರಾಜ್ ನಂತಹ ಅದ್ಬುತ ಘಟನೆಗಳನ್ನು ಸಾಕ್ಷೀಕರಿಸುತ್ತಿದೆ ಎಂದರು. ಆಶಿಕ್ ದಾರಿಮಿ ಆಲಪುಲ ಮಾತನಾಡಿದರು.

ತ್ವಾಹ ಜಿಪ್ರಿ ತಂಙಲ್ ಬೆಳ್ತಂಗಡಿ ಇವರ ನೇತೃತ್ವದಲ್ಲಿ ಅಜ್ಮೀರ್  ಮತ್ತು ಶಂಸುಲ್ ಉಲಮಾ ಮೌಲದ್ ನಡೆಯಿತು. ಜನಪ್ರಿಯ ಗಾರ್ಡನ್ ಮ್ಯಾನೇಜರ್ ಇಸ್ಮಾಯಿಲ್ ಹಾಜಿ ಕಂಬಳಬೆಟ್ಟು ದ್ವಜಾರೋಹಣ ಗೈದರು. ಶಾಸಕ ಯು.ಟಿ.ಖಾದರ್, ಸಮಸ್ತ ಕೇಂದ್ರ ಮುಶಾವರ ಸದಸ್ಯ ಬಿ ಕೆ ಬಂಬ್ರಾಣ ಉಸ್ತಾದ್, ಹನೀಪ್ ನಿಝಾಮಿ, ಉಮರ್ ದಾರಿಮಿ ಸಾಲ್ಮರ, ಹೈದರ್ ದಾರಿಮಿ ಕರಾಯ, ಇಬ್ರಾಹಿಂ ಬಾಖವಿ, ತಬೂಕ್ ದಾರಿಮಿ, ಮೂಸಲ್ ಫೈಝಿ ಪಾಟ್ರಕೋಡಿ ಮೊದಲಾದವರು ಮಾತನಾಡಿದರು.

ಹಬೀಬುರ್ರಹ್ಮಾನ್ ತಂಙಲ್, ಶರಪುದ್ದೀನ್ ತಂಙಳ್, ಅಕ್ರಮ್ ಅಲಿ ತಂಙಳ್, ಅಮೀರ್ ತಂಙಳ್, ಬಾತಿಷಾ ತಂಙಳ್, ಕುಕ್ಕಾಜೆ ಬಾ ಅಲವಿ ತಂಙಳ್, ಕುನ್ನುಂಗೈ ಮಹಮೂದ್ ತಂಙಳ್, ಹುಸೈನ್ ದಾರಿಮಿ ರೆಂಜಲಾಡಿ, ಎಲ್.ಟಿ. ರಝಾಕ್ ಹಾಜಿ, ರಪೀಕ್ ಹಾಜಿ  ಕೊಡಾಜೆ, ರಾಜ್ ಕಮಲ್ ಉಮರ್ ಹಾಜಿ, ಹಸೈನಾರ್ ಹಾಜಿ ಕೊಯಿಲ, ಬಿ ಎಂ ಶೌಕತ್ ಅಲಿ ಕೃಷ್ಣಾಪುರ, ರಶೀದ್ ಹಾಜಿ ಪರ್ಲಡ್ಕ, ರಪೀಕ್ ಹಾಜಿ ನೇರಳಕಟ್ಟೆ, ಹಕೀಂ ಪರ್ತಿಪಾಡಿ, ಸಲಾಂ ಪೈಝಿ ಉಪ್ಪಿನಂಗಡಿ, ಅಶ್ರಪ್ ಹಾಜಿ ಸಿಟಿ, ಕೆ.ಬಿ. ಅಬ್ದುಲ್ ಖಾದಿರ್ ದಾರಿಮಿ, ಶರೀಪ್ ಫೈಝಿ ಕಡಬ, ಹಸೈನಾರ್ ಹಾಜಿ ಕೊಯಿಲ, ಖಾದರ್ ಮಾಸ್ಟರ್ ಬಂಟ್ವಾಳ, ಸಿತಾರ್ ಮಜೀದ್ ಹಾಜಿ, ಹಾಜಿ ಅಬ್ದುಲ್ ರಹ್ಮಾನ್ ಆಜಾದ್ ದರ್ಬೆ, ಎಂ.ಎಸ್.ಹಮೀದ್, ಕೆ.ಎಂ.ಎ ಕೊಡುಂಗಾಯಿ, ತಾಜ್ ಮುಹಮ್ಮದ್ ಕಲ್ಲಗುಂಡಿ, ಹಮೀದ್ ಕುಕ್ಕರಬೆಟ್ಟು, ಝಕರಿಯಾ ಹಾಜಿ ಆತೂರು, ಹಮೀದ್ ದಾರಿಮಿ ಸಂಪ್ಯ, ಕೆ.ಎಲ್.ಉಮರ್ ದಾರಿಮಿ ಪಟ್ಟೋರಿ, ಮಜೀದ್ ದಾರಿಮಿ ಮಿತ್ತುರು, ಅಬ್ದುಲ್ ಅಝಿಝ್  ದಾರಿಮಿ ಪೊನ್ಮಳ, ನಝಿರ್ ಅಝ್ಹರಿ ಬೊಲ್ಮಿನಾರ್, ಉಮರ್ ದಾರಿಮಿ ಮುಪತ್ತಿಷ್, ಮೂಸಾ ದಾರಿಮಿ ಕಕ್ಕಿಂಜೆ, ಇಬ್ರಾಹಿಂ ದಾರಿಮಿ ಕಡಬ, ಸಿದ್ದೀಖ್ ದಾರಿಮಿ ಒಮಾನ್, ಕಾಸಿಂ ದಾರಿಮಿ ಕಿನ್ಯ, ಹೈದರ್ ದಾರಿಮಿ ಅಡ್ಯನಡ್ಕ, ಅಹ್ಮದ್ ದಾರಿಮಿ ಕಂಬಳಬೆಟ್ಟು, ಹಮೀದ್ ಕರಾವಳಿ, ಅಬೂಬಕರ್ ಮುಲಾರ್, ಆರ್.ಪಿ. ರಝಾಕ್ ಪುತ್ತೂರು, ಇಬ್ರಾಹಿಂ ಹಾಜಿ ರಾಜ್ ಕಮಲ್, ಶಕೂರ್ ಹಾಜಿ ರೆಂಜಲಾಡಿ, ಮುಹಮ್ಮದ್ ಚೊಕ್ಕಬೆಟ್ಟು ಮೊದಲಾದವರು ಉಪಸ್ಥಿತರಿದ್ದರು. 

ಮೌಲಾನಾ ಚೊಕ್ಕಬೆಟ್ಟು ಸ್ವಾಗತಿಸಿ,  ಹನೀಪ್ ದಾರಿಮಿ ಸವಣೂರು ವಂದಿಸಿದರು. ಇಸ್ಮಾಯಿಲ್ ತಂಙಳ್ ಉಪ್ಪಿನಂಗಡಿ, ಯೂಸುಪ್ ಹಾಜಿ ಪೆದಮಲೆ, ಇಬ್ರಾಹಿಂ ಕಡವ ಇವರ ನೇತೃತ್ವದ ಎಸ್ಕೆ ಎಸ್ಸೆಸ್ಸೆಪ್ ವಿಖಾಯ ತಂಡ ಸೇವಾ ಕಾರ್ಯದಲ್ಲಿ ನಿರತರಾಗಿದ್ದರು.

Similar News