ಭಟ್ಕಳ: ಕಾಂಗ್ರೆಸ್ ಅಭ್ಯರ್ಥಿ ಮಾಂಕಾಳ್ ವೈದ್ಯ ನಾಮಪತ್ರ ಸಲ್ಲಿಕೆ

Update: 2023-04-17 16:35 GMT

ಭಟ್ಕಳ: ತನ್ನ ಸಾವಿರಾರು ಕಾರ್ಯಕರ್ತರು, ಅಭಿಮಾನಿಗಳೊಂದಿಗೆ ಭಟ್ಕಳ ಹೊನ್ನಾವರ ವಿಧಾನಸಭಾ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿ ಮಾಂಕಾಳ್ ಎಸ್. ವೈದ್ಯ ಸೋಮವಾರ ನಾಮಪತ್ರ ಸಲ್ಲಿಸಿದರು.

ನಗರದ ಚೆನ್ನಪಣ್ಣನ ಹನುಮಂತ ದೇವಸ್ಥಾನದಲ್ಲಿ ಪೂಜೆ ನೆರವೇರಿಸಿ ಸಾವಿರಾರು ಸಂಖ್ಯೆಯಲ್ಲಿ ಸೇರಿದ ಕಾರ್ಯಕರ್ತರೊಂದಿಗೆ ಮೆರವಣೆಗೆ ಮೂಲಕ ಹೆಜ್ಜೆ ಹಾಕಿದ ಮಾಂಕಾಳ್ ವೈದ್ಯ ಮಿನಿವಿಧಾನ ಸೌಧದಲ್ಲಿ ಚುನಾವಣಾಧಿಕಾರಿಗಳಿಗೆ ನಾಮಪತ್ರ ಸಲ್ಲಿಸಿದರು. ಈ ಸಂದರ್ಭದಲ್ಲಿ ಮಾಂಕಾಳ್ ಪುತ್ರಿ ಹಾಗೂ ಪತ್ನಿ ಸಾಥ್ ನೀಡಿದರು.

ನಂತರ ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡಿದ ವೈದ್ಯ, ಈಗಾಗಲೆ ಭಟ್ಕಳಕ್ಕೆ ಮಾಂಕಾಳ ವೈದ್ಯ ಎಂದು ಜನ ತೀರ್ಮಾನ ಮಾಡಿಯಾಗಿದೆ. ಶಿಕ್ಷಣ, ಆರೋಗ್ಯ, ಯುವ ಜನರಿಗೆ ಉದ್ಯೋಗ, ಕೃಷಿ ನಿರಾವರಿ ನನ್ನ ಆದ್ಯತೆಯಾಗಿದೆ. ಈ ಬಾರಿ ನಿಮ್ಮ ಸುಳ್ಳುಗಳು ಕೆಲಸ ಮಾಡಲ್ಲ. ನಿಮ್ಮ ಸುಳ್ಳು ಹಿಂದುತ್ವದ ಬಗ್ಗೆ ಜನರು ಜಾಗೃತರಾಗಿದ್ದಾರೆ. ದಯಮಾಡಿ ನೀವು ಹಿಂದುತ್ವದ ಹೆಸರು ಹೇಳಿಕೊಂಡು ಜನರ ಬಳಿ ಹೋಗಬೇಡಿ. ಪೆಟ್ಟು ತಿನ್ನಬೇಕಾದೀತು ಎಂದು ಹೇಳಿದರು.

ಈ ಸಂದರ್ಭದಲ್ಲಿ ನಾಮಧಾರಿ ಸಮಾಜದ ಹಿರಿಯ ಮುಖಂಡ ಎಲ್.ಎಸ್.ನಾಯ್ಕ ಸೇರಿದಂತೆ ಹಿರಿಯ ಮುಖಂಡರು, ಕಾರ್ಯಕರ್ತರು ಹಾಜರಿದ್ದರು. 

Similar News