ಭಟ್ಕಳ: ಬಾತಿನ್ ಮಾಸ್ಟರ್ ನಿಧನ

Update: 2023-04-18 04:13 GMT

ಭಟ್ಕಳ, ಎ.18: ನಿವೃತ್ತ ಶಿಕ್ಷಕ, ಭಟ್ಕಳದ ಎಸ್.ಎಂ.ಸೈಯದ್ ಅಬ್ದುಲ್ ರಹ್ಮಾನ್ ಬಾತಿನ್ ಯಾನೆ ಬಾತಿನ್ ಮಾಸ್ಟರ್ (84) ವಯೋಸಹಜ ಅನಾರೋಗ್ಯದಿಂದ ಸೋಮವಾರ ನಿಧನರಾದರು.

ಮೃತರು ನಾಲ್ವರು ಪುತ್ರಿಯರು, ಮೂವರು ಪುತ್ರರ ಸಹಿತ ಅಪಾರ ಬಂಧುಮಿತ್ರರನ್ನು ಅಗಲಿದ್ದಾರೆ. 

ಅಂಜುಮನ್ ಹಾಮಿಯೆ ಮುಸ್ಲಿಮೀನ್ ಶಿಕ್ಷಣ ಸಂಸ್ಥೆಯ ಉಪಾಧ್ಯಕ್ಷರಾಗಿ, ಅಂಜುಮನ್ ಪ್ರೌಢಶಾಲಾ ಆಡಳಿತ ಮಂಡಳಿಯ ಕಾರ್ಯದರ್ಶಿಯಾಗಿ ಕಾರ್ಯನಿರ್ವಹಿಸಿದ್ದ ಅವರು, ಭಟ್ಕಳ ಜಮಾತ್ ಅಲ್-ಮುಸ್ಲಿಮೀನ್ ಉಪಾಧ್ಯಕ್ಷರಾಗಿದ್ದರು. ಭಟ್ಕಳದ ಸ್ಥಳೀಯ ನವಾಯತಿ ಭಾಷೆಯ ಪ್ರಚಾರಕ್ಕಾಗಿ ಸ್ಥಾಪಿಸಲಾದ ನವಾತ್ ಮಹಫಿಲ್‌ನ ಪ್ರಮುಖ ಸದಸ್ಯರಾಗಿದ್ದರು.

1973ರಲ್ಲಿ ಮುರ್ಡೇಶ್ವರದಲ್ಲಿ ನ್ಯಾಷನಲ್ ಹೈಸ್ಕೂಲ್ ಪ್ರಾರಂಭವಾದಾಗ ಅಲ್ಲಿ ಅವರಿಗೆ ಮುಖ್ಯೋಪಾಧ್ಯಾಯರ ಜವಾಬ್ದಾರಿಯನ್ನು ನೀಡಲಾಗಿತ್ತು ಎಂದು ಹೇಳಲಾಗುತ್ತಿದ್ದು ನಂತರ ಅವರು  ಉಡುಪಿಯ ಕಾಲೇಜೊಂದರಲ್ಲಿ ಪ್ರಾಂಶುಪಾಲರಾಗಿ ಕಾರ್ಯನಿರ್ವಹಿಸಿದ್ದರು.

ದುಬೈ ಮತ್ತು ಸೌದಿ ಅರೇಬಿಯಾದ ಶಿಕ್ಷಣ ಸಂಸ್ಥೆಗಳಲ್ಲಿ ಸೇವೆ ಸಲ್ಲಿಸಿದ್ದ ಅವರು ಎಂ.ಎ ಮತ್ತು ಬಿ.ಎಡ್ ಪದವೀಧರರಾಗಿದ್ದರು.

 ಸಂತಾಪ: ಬಾತಿನ್ ಮಾಸ್ಟರ್ ನಿಧನಕ್ಕೆ ಅಂಜುಮನ್  ಶಿಕ್ಷಣ ಸಂಸ್ಥೆಯ ಮಾಜಿ ಅಧ್ಯಕ್ಷ ಎಸ್.ಎಂ.ಸೈಯದ್ ಖಲೀಲುರ್ರಹ್ಮಾನ್, ಅಧ್ಯಕ್ಷ ಖಾಝಿಯಾ ಮುಹಮ್ಮದ್ ಮುಝಮ್ಮಿಲ್, ಪ್ರಧಾನ ಕಾರ್ಯದರ್ಶಿ ಸಿದ್ದೀಕ್ ಇಸ್ಮಾಯೀಲ್, ತಂಝೀಮ್ ಸಂಸ್ಥೆಯ ಅಧ್ಯಕ್ಷ ಇನಾಯತುಲ್ಲಾ ಶಾಬಂದ್ರಿ, ಪ್ರಧಾನ ಕಾರ್ಯದರ್ಶಿ ಅಬ್ದುಲ್ ರಖೀಬ್. ಎಂ.ಜೆ., ಭಟ್ಕಳ ಮುಸ್ಲಿಮ್ ಖಲೀಜ್ ಕೌನ್ಸಿಲ್ ಅಧ್ಯಕ್ಷ ಮಿಸ್ಬಾಹ್ ಮುಹಮ್ಮದ್ ಫಾರೂಕ್, ಪ್ರಧಾನ ಕಾರ್ಯದರ್ಶಿ ಅತೀಕುರ್ರಹ್ಮಾನ್ ಮುನಿರಿ, ಭಟ್ಕಳ ಮುಸ್ಲಿಮ್ ಸಮುದಾಯದ ಜಿದ್ದಾ ಅಧ್ಯಕ್ಷ ಅಬ್ದುಸ್ಸಲಾಂ ದಾಮದಅಬು, ಉಪಾಧ್ಯಕ್ಷ ಉಬೈದುಲ್ಲಾ ಅಸ್ಗರಿ, ಪ್ರಧಾನ ಕಾರ್ಯದರ್ಶಿ ಅಬ್ದುಲ್ ಮಾಜ್ ಜುಕಾಕೋ ಸಹಿತ ಹಲವರು ತೀ್ವರ ಸಂತಾಪ ವ್ಯಕ್ತಪಡಿಸಿದ್ದಾರೆ.

Similar News