ಭಟ್ಕಳ: ಅಂಜುಮನ್ ಪದವಿ ಪೂರ್ವ ಕಾಲೇಜಿಗೆ ಶೇ. 96 ಫಲಿತಾಂಶ

Update: 2023-04-24 16:51 GMT

ಭಟ್ಕಳ: ಪಿಯುಸಿ ದ್ವಿತೀಯ ಪರೀಕ್ಷೆಯಲ್ಲಿ ಭಟ್ಕಳದ ಅಂಜುಮನ್ ಪದವಿ ಪೂರ್ವ ಕಾಲೇಜು (ಬಾಲಕರು) ಶೇ. 96.06 ಫಲಿತಾಂಶ ಪಡೆದಿದೆ. 229 ವಿದ್ಯಾರ್ಥಿಗಳು ಪರೀಕ್ಷೆಗೆ ಹಾಜರಾಗಿದ್ದು, 220 ಮಂದಿ ಉತ್ತೀರ್ಣ ರಾಗಿದ್ದಾರೆ. ಅವರಲ್ಲಿ 14 ವಿದ್ಯಾರ್ಥಿಗಳು ಡಿಸ್ಟಿಂಕ್ಷನ್ ಮತ್ತು 137 ವಿದ್ಯಾರ್ಥಿಗಳು ಪ್ರಥಮ ದರ್ಜೆ ಪಡೆದಿದ್ದಾರೆ.

ವಾಣಿಜ್ಯ ವಿಭಾಗವು 93.32% ಫಲಿತಾಂಶವನ್ನು ಪಡೆದುಕೊಂಡಿದ್ದರೆ, ವಿಜ್ಞಾನ ವಿಭಾಗವು 65.06% ಮತ್ತು ಕಲಾ ವಿಭಾಗವು 100% ಫಲಿತಾಂಶವನ್ನು ಪಡೆದುಕೊಂಡಿದೆ.

ವಾಣಿಜ್ಯ ವಿಭಾಗದಲ್ಲಿ ವಾಣಿಜ್ಯ ವಿಭಾಗದಲ್ಲಿ ಸೈಯದ್ ಅಬ್ದುಲ್ ರೆಹಮಾನ್ ಲಂಕಾ 90.50% ಅಂಕಗಳನ್ನು ಗಳಿಸಿ ಕಾಲೇಜಿನಲ್ಲಿ ಅಗ್ರಸ್ಥಾನದಲ್ಲಿದ್ದರೆ, ಸಲ್ಸಬೀಲ್ ಕೊಬ್ಬಟ್ಟಿ 87.33% ಮತ್ತು ಕಾಮ್ರಾನ್ ಅಬ್ದುಲ್ ರಜಾಕ್ 86.16% ಅಂಕಗಳನ್ನು ಗಳಿಸಿದ್ದಾರೆ.

ವಿಜ್ಷಾನ ವಿಭಾಗದಲ್ಲಿ ಮೊಹಮ್ಮದ್ ಅನಸ್ ಶೌಕತ್ ಅಲಿ ಡೊನ್ನಾ ಶೇ.88.33, ಜುಲ್ಫಿಕರ್ ಅಲಿ ಮೊಹ್ತಿಶಾಮ್ ಶೇ.89.16 ಮತ್ತು ಮೊಹಮ್ಮದ್ ಸುಹೈಮ್ ಅಬು ಮೊಹಮ್ಮದ್ ಶೇ.87.33 ಅಂಕ ಗಳಿಸಿದ್ದಾರೆ. ಕಲಾ ವಿಭಾಗದಲ್ಲಿ , ಮೊಹಮ್ಮದ್ ಸಾಜಿದ್ ಜಿಯಾವುಲ್ಲಾ 60.66% ಗಳಿಸಿ ಆಗ್ರಸ್ಥಾನದಲ್ಲಿದ್ದಾರೆ.

ಸಾಧನೆ ಮಾಡಿದ ಎಲ್ಲ ವಿದ್ಯಾರ್ಥಿಗಳಿಗೆ ಅಂಜುಮನ್ ಹಾಮಿ-ಎ-ಮುಸ್ಲಿಮೀನ್ ಆಡಳಿತ ಮಂಡಳಿ ಮತ್ತು ಸಿಬ್ಬಂದಿ ಅಭಿನಂದಿಸಿದ್ದಾರೆ.

Similar News