ಮಂಗಳೂರು: ಮಾದಕ ವಸ್ತು ಸೇವಿಸುತ್ತಿದ್ದ ಆರೋಪಿ ಸೆರೆ
Update: 2023-04-25 16:07 GMT
ಮಂಗಳೂರು, ಎ.25: ನಗರದ ಗೂಡ್ಶೆಡ್ ರಸ್ತೆಯ ನೀರೇಶ್ವಾಲ್ಯ ಜಂಕ್ಷನ್ ಬಳಿ ಮಾದಕ ವಸ್ತು ಸೇವಿಸುತ್ತಿದ್ದ ಕುಪ್ಪೆಪದವು ನಿವಾಸಿ ಅಬ್ದುಲ್ ಘನಿ (47) ಎಂಬಾತನನ್ನು ಮಂಗಳೂರು ಸಿಸಿಬಿ ಪೊಲೀಸರು ಬಂಧಿಸಿದ್ದಾರೆ.
ಸಿಸಿಬಿ ಘಟಕದ ಎಸ್ಸೈ ಸುದೀಪ್ ಎಂ.ವಿ. ತನ್ನ ಸಿಬ್ಬಂದಿಯ ಜತೆ ಗಸ್ತು ತಿರುಗುತ್ತಿದ್ದಾಗ ಸೋಮವಾರ ಮಧ್ಯಾಹ್ನ 1:30ರ ವೇಳೆಗೆ ಮಾದಕ ವಸ್ತು ಸೇವನೆ ಮಾಡುತ್ತಿರುವ ಬಗ್ಗೆ ಖಚಿತ ಮಾಹಿತಿ ಮೇರೆಗೆ ಸ್ಥಳಕ್ಕೆ ತೆರಳಿ ಅಬ್ದುಲ್ ಘನಿಯನ್ನು ವಶಕ್ಕೆ ಪಡೆದಿದ್ದಾರೆ. ಬಳಿಕ ಆಸ್ಪತ್ರೆಗೆ ಕರೆದೊಯ್ದು ವೈದ್ಯಕೀಯ ಪರೀಕ್ಷೆಗೊಳಪಡಿಸಿದಾಗ ಆರೋಪಿ ಮಾದಕ ವಸ್ತು ಸೇವನೆ ಮಾಡಿರುವುದು ದೃಢಪಟ್ಟಿದೆ ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ.