ಕಾಪು: ಮೂರ್ಚೆ ಹೋಗಿ ರಸ್ತೆ ಮಧ್ಯೆ ಬಿದ್ದಿದ್ದ ಮಹಿಳೆಯನ್ನು ಉಪಚರಿಸಿದ ಸೊರಕೆ

Update: 2023-04-29 05:51 GMT

ಕಾಪು: ಮತಯಾಚನೆ ಸಂದರ್ಭದಲ್ಲಿ  ಕಾಪು ಕ್ಷೇತ್ರ ಮಟ್ಟುವಿನಲ್ಲಿ ರಸ್ತೆ ಮಧ್ಯದಲ್ಲಿ ತಲೆ ತಿರುಗಿ ಬಿದ್ದಿದ್ದ ಮಹಿಳೆಯನ್ನು ಎತ್ತಿ ಉಪಚರಿಸುವ ಮೂಲಕ ಕಾಪು ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿ ಮಾಜಿ ಸಚಿವ ವಿನಯ್ ಕುಮಾರ್ ಸೊರಕೆ ಮಾನವೀಯತೆ ಮೆರೆದಿದ್ದಾರೆ.

ಕಾಪು ಕ್ಷೇತ್ರದ ಮಟ್ಟು ಮಹಾಂಕಾಳಿ ಮಂತ್ರದೇವತೆ ದೇವಸ್ಥಾನಕ್ಕೆ ತೆರಳಿ ಪೂಜೆ ಸಲ್ಲಿಸಿ ನಡೆದುಕೊಂಡು ಬರುತ್ತಿದ್ದ ಮಟ್ಟುವಿನ‌ ಮಹಿಳೆ ಮೋಹಿನಿ ಎಂಬವರು ಬಿಸಿಲಿಗೆ ತಲೆತಿರುಗಿ ರಸ್ತೆ ಮಧ್ಯದಲ್ಲಿ ಮೂರ್ಚೆ ಹೋಗಿ ಬಿದ್ದಿದ್ದರು. ನಂತರ ಮೋಹಿನಿಯವರನ್ನು ಎತ್ತಿ ಉಪಚರಿಸಿದ ಸೊರಕೆಯವರು ನೀರನ್ನು‌ ನೀಡಿ‌ ಸಂತೈಸಿದರು.

ಕಾಂಗ್ರೆಸ್ ಮುಖಂಡರಾದ ಪ್ರಶಾಂತ್ ಜತ್ತನ್, ಪ್ರಮೀಳ‌ ಜತ್ತನ್, ದಯಾನಂದ ಬಂಗೇರ, ಕಿಶೋರ್ ಅಂಬಾಡಿ, ಅಖಿಲೇಶ್, ಸುಶೀಲ್ ಬೋಳಾರ್, ವಿಕ್ರಂ ಕಾಪು ಮೊದಲದಾವರು ಸೊರಕೆಯವರಿಗೆ ಸಾಥ್ ನೀಡಿದರು.

Similar News